Asianet Suvarna News Asianet Suvarna News

ಲೈನ್‌ಮ್ಯಾನ್ ನಿರ್ಲಕ್ಷ್ಯಕ್ಕೆ ವಿದ್ಯುತ್ ತಗುಲಿ ಕೂಲಿ ಕಾರ್ಮಿಕ ದುರ್ಮರಣ!

ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಹರಿದು ಕೂಲಿಕಾರ್ಮಿಕ ದಾರುಣವಾಗಿ ಮೃತಪಟ್ಟ ದುರ್ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

Laborer dies due to electrocution at koppal district rav
Author
First Published Jun 15, 2024, 6:04 PM IST

ಕೊಪ್ಪಳ (ಜೂ.15): ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಹರಿದು ಕೂಲಿಕಾರ್ಮಿಕ ದಾರುಣವಾಗಿ ಮೃತಪಟ್ಟ ದುರ್ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದಿದೆ.

ಬಸವರಾಜ್ ಭಂಡಾರಿ(55) ಮೃತ ವ್ಯಕ್ತಿ. ಯಲಬುರ್ಗಾ ತಾಲೂಕಿನ ಲಿಂಗನಬಂಡಿ ಗ್ರಾಮದ ನಿವಾಸಿಯಾಗಿರು ಮೃತ ಬಸವರಾಜ್. ಎಲ್‌ಸಿ ಪಡೆದು ಕೆಲಸ ವಿದ್ಯುತ್ ಕಂಬವೇರಿ ರಿಪೇರಿ ಮಾಡುತ್ತಿದ್ದಾಗ ನಡೆದ ದುರ್ಘಟನೆ ವಿದ್ಯುತ್ ಹರಿದ ಪರಿಣಾಮ ಕಂಬದ ಮೇಲೆ ಪ್ರಾಣಬಿಟ್ಟ ಬಸವರಾಜ್. 

ಶಾರ್ಟ್ ಸೆರ್ಕ್ಯೂಟ್ ಪ್ರಕರಣ; ಬಾಲಕಿಯರ ವಸತಿ ಶಾಲೆಗೆ ಭೇಟಿ ನೀಡಿದ ಗೃಹ ಸಚಿವ ಪರಮೇಶ್ವರ್

ಲೈನ್‌ಮ್ಯಾನ್ ವಿರುದ್ಧ ಕುಟುಂಬಸ್ಥರು ಆಕ್ರೋಶ:

ವಿದ್ಯುತ್ ಟಿಸಿ ರಿಪೇರಿ ಮಾಡಬೇಕಾಗಿದ್ದು ಲೈನ್‌ಮ್ಯಾನ್ ಶೇಖ್‌ ಹಸನ್. ಆದರೆ ತಾನು ಆ ಕೆಲಸ ಮಾಡದೇ ಕೂಲಿ ಕಾರ್ಮಿಕನಾಗಿದ್ದ ಬಸವರಾಜ್ ಭಂಡಾರಿಯನ್ನು ಕಂಬ ಹತ್ತಿಸಿದ್ದ ಲೈನ್‌ಮ್ಯಾನ್. ವಿದ್ಯುತ್ ರಿಪೇರಿ ಮಾಡುವಾಗ ಯಾವುದೇ ಸುರಕ್ಷಿತ ಸಲಕರಣ ಇಲ್ಲದೆ ಕಂಬವೇರಿದ್ದ ಬಸವರಾಜ್. ಲೈನ್‌ಮ್ಯಾನ್ ನಿರ್ಲಕ್ಷ್ಯದಿಂದಲೇ ಬಸವರಾಜ್ ಮೃತಪಟ್ಟಿರುವುದಾಗಿ ಕುಟುಂಬಸ್ಥರು ಆರೋಪಿಸಿದ್ದಾರೆ. ಅಲ್ಲದೇ ಲೈನ್‌ಮ್ಯಾನ್ ವಿರುದ್ಧ ಕ್ರಮ ಆಗಬೇಕು, ಮೃತ ಕುಟುಂಬಕ್ಕೆ ಪರಿಹಾರ ನೀಡುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಬೇವೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest Videos
Follow Us:
Download App:
  • android
  • ios