Asianet Suvarna News Asianet Suvarna News

Chitradurga: ಕೆಎಸ್‌ಆರ್‌ಟಿಸಿ ಬಸ್-ಲಾರಿ ನಡುವೆ ಭೀಕರ ಅಪಘಾತ: ಐವರ ದುರ್ಮರಣ

ಇತ್ತೀಚಿನ ದಿನಗಳಲ್ಲಿ ಕೋಟೆನಾಡಿನ‌ ರಾಷ್ಟೀಯ ಹೆದ್ದಾರಿಗಳು ಅಂದ್ರೆ ಸಾಕು ಮೃತ್ಯು ಕೂಪದ ಸ್ಥಳಗಳು ಎಂದು ಆತಂಕ ಪಡುವ ಜನರೇ ಹೆಚ್ಚಗಿದ್ದಾರೆ. ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಇಂದು ಕೂಡ ಒಂದು ಭೀಕರ ಅಪಘಾತ ಸಂಭವಿಸಿದೆ.
 

ksrtc bus truck accident at chitradurga gvd
Author
First Published Sep 11, 2023, 8:43 PM IST

ವರದಿ: ಕಿರಣ್ಎಲ್ ತೊಡರನಾಳ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿತ್ರದುರ್ಗ

ಚಿತ್ರದುರ್ಗ (ಸೆ.11): ಇತ್ತೀಚಿನ ದಿನಗಳಲ್ಲಿ ಕೋಟೆನಾಡಿನ‌ ರಾಷ್ಟೀಯ ಹೆದ್ದಾರಿಗಳು ಅಂದ್ರೆ ಸಾಕು ಮೃತ್ಯು ಕೂಪದ ಸ್ಥಳಗಳು ಎಂದು ಆತಂಕ ಪಡುವ ಜನರೇ ಹೆಚ್ಚಗಿದ್ದಾರೆ. ಇದಕ್ಕೆಲ್ಲಾ ಪುಷ್ಟಿ ನೀಡುವಂತೆ ಇಂದು ಕೂಡ ಒಂದು ಭೀಕರ ಅಪಘಾತ ಸಂಭವಿಸಿದ್ದು ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದು, ಓರ್ವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿರೋ ಘಟನೆ ನಡೆದಿದೆ. ಅಷ್ಟಕ್ಕೂ ಅಪಘಾತ ನಡೆದಿದ್ದಾದ್ರು ಎಲ್ಲಿ? ಹೇಗೆ? ಅನ್ನೋದ್ರ ಕಂಪ್ಲೀಟ್ ಡಿಟೈಲ್ಸ್ ಇಲ್ಲಿದೆ ನೋಡಿ‌. ನುಜ್ಜು ಗುಜ್ಜಾಗಿರೋ ಸಾರಿಗೆ ಬಸ್, ಮತ್ತೊಂದೆಡೆ ಜಿಲ್ಲಾ ಆಸ್ಪತ್ರೆಯಲ್ಲಿ ಸಾವು ಬದುಕಿನ ಮಧ್ಯ ಹೋರಾಟ ಮಾಡ್ತಿರೋ ಗಾಯಾಳುಗಳು‌. 

ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಗೊಲ್ಲಹಳ್ಳಿ ಬಳಿ. ಇಂದು ಬೆಳಗಿನ ಜಾವ ಐಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಗೊಲ್ಲಹಳ್ಳಿ ಗ್ರಾಮದ ರಾಷ್ಟೀಯ ಹೆದ್ದಾರಿ 150 A ರಲ್ಲಿ ಸಾರಿಗೆ ಬಸ್ ಮತ್ತು ಲಾರಿ ನಡುವೆ ನಡೆದಿರೋ ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿರೋ ಭೀಕರ ಘಟನೆ ನಡೆದಿದೆ. ರಾಯಚೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಲಾರಿ ನಡುವೆ ನಡೆದಿರೋ ಭೀಕರ ಅಪಘಾತ ಮತ್ತೊಮ್ಮೆ ಕೋಟೆನಾಡಿನ ಜನರ ಆತಂಕ ಹೆಚ್ಚಿಸಿದೆ. ಭೀಕರ ಅಪಘಾತದಲ್ಲಿ ಬೆಂಗಳೂರು ಮೂಲದ ಪಾರ್ವತಮ್ಮ (45), ರಾಯಚೂರು ಮೂಲದ ರಮೇಶ್ (40), ನರಸಪ್ಪ (05), ರವಿ (23), ಮಾಬಮ್ಮ (35), ಮೃತಪಟ್ಟಿದ್ದಾರೆ. 

ಯೋಗೇಶ್ವರ್ ನಿಮ್ಮ ನಾಲಗೆ ಬಿಗಿ ಇರಲಿ: ಸಂಸದ ಸುರೇಶ್‌

ಇನ್ನುಳಿದು ಸುಮಾರು ಆರಕ್ಕೂ ಹೆಚ್ಚು ಜನರು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಳಗಿನ ಜಾವ ನಡೆದ ಅಪಘಾತ ಭೀಕರವಾಗಿತ್ತು ಎಂದು ಬಸ್ ನಲ್ಲಿದ್ದ ಪ್ರಯಾಣಿಕರೊಬ್ಬರು ಆತಂಕ ವ್ಯಕ್ತಪಡಿಸಿದರು. ಇನ್ನೂ ಬಸ್ ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟಿದ್ದರು‌. ಇನ್ನೋರ್ವ ಮಹಿಳೆ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದು, ಉಳಿದ ಗಾಯಾಳುಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ನಲ್ಲಿ ನಾವು ಚಲಿಸುತ್ತಿದ್ದಾಗ ಏಕಾಏಕಿ ನಮ್ಮ ಬಸ್ ಚಾಲಕ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ರೀತಿ ಘಟನೆ ನಡೆದಿದೆ. ಚಾಲಕನ ನಿದ್ದೆ ಗಣ್ಣಿನಲ್ಲಿ ಈ ರೀತಿಯ ಘಟನೆ ಆಯಿತೋ, ಅಥವಾ ಏನು ಕಾರಣಕ್ಕೆ ಆಗಿದೆ ಎಂದು ಗೊತ್ತಾಗಲಿಲ್ಲ.

ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್-ಬಿಜೆಪಿ ಮೈತ್ರಿ: ಕಾಂಗ್ರೆಸ್‌ಗೆ ತೊಂದರೆ ಇಲ್ಲವೆಂದ ಸಂಸದ ಸುರೇಶ್

ನಾನು ಮಲಗಿದ್ದೆ ಅಪಘಾತವಾಗಿ ತಲೆಗೆ ಕಬ್ಬಿಣದ ರಾಡು ತಗುಲಿದಾಗಲೇ ನಮಗೆ ಎಚ್ಚರವಾಯಿತು. ಬಸ್ ಚಾಲಕ ಮೊದಲಿನಿಂದಲೂ ತುಂಬಾ ಸ್ಪೀಡ್ ಅಲ್ಲಿ ಚಾಲನೆ ಮಾಡ್ತಿದ್ದ ಎಂದು ದೂರಿದ್ದರೂ ಈ ರೀತಿ ಘಟನೆಗೆ ಆತನೇ ಕಾರಣ. ಅಪಘಾತ ಆಗಿ ಇಷ್ಟೋ ದೂರದಲ್ಲಿ ನಮ್ಮ ಬಸ್ ನಿಂತಿತ್ತು ಅಷ್ಟು ಸ್ಪೀಡ್ ನಲ್ಲಿ ಬಸ್ ಚಾಲನೆ ಮಾಡ್ತಿದ್ದರು ಎಂದು ಗಾಯಾಳು ತಿಳಿಸಿದರು. ಒಟ್ಟಾರೆಯಾಗಿ ಚಿತ್ರದುರ್ಗದ ಹೆದ್ದಾರಿಗಳು ಅಂದ್ರೆ ಸಾಕು ಜನರು ಭಯ ಪಡುವ ವಾತಾವರಣ ನಿರ್ಮಾಣವಾಗಿದೆ. ಕೇವಲ ಒಂದೂವರೆ ತಿಂಗಳಲ್ಲಿಯೇ ಅಪಘಾತದಲ್ಲಿ ಸುಮಾರು 15 ಮಂದಿ ಸಾವನ್ನಪ್ಪಿರೋದು ನಿಜಕ್ಕೂ ದುರಂತವೇ ಸರಿ. ಇನ್ನಾದ್ರು ಪೊಲೀಸ್ ಇಲಾಖೆ ಅಪಘಾತ ತಡೆಯಲು ಮುನ್ನೆಚ್ಚರಿಕೆಯ ಕ್ರಮ ಕೈಗೊಳ್ಳಬೇಕಿದೆ.

Follow Us:
Download App:
  • android
  • ios