Gadag: ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ದಾರುಣ ಸಾವು!
ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ.
ಗದಗ (ಜೂ.4): ನೀರು ತರಲು ಹೊರಟಿದ್ದ ವ್ಯಕ್ತಿ ಬಸ್ ಚಕ್ರದಡಿ ಸಿಲುಕಿ ಸಾವನ್ನಪ್ಪಿರುವ ದಾರುಣ ಘಟನೆ ಗದಗ ಜಿಲ್ಲೆಯ ಮುಂಡರಗಿ ಕೆಇಬಿ ಕಚೇರಿ ಗ್ರಾಸ್ ಬಳಿ ನಡೆದಿದೆ. ಮುಂಡರಗಿ ಪಟ್ಟಣದ ಮಂಜುನಾಥ್ ಬಂಡಿ (45) ಮೃತ ದುದೈವಿಯಾಗಿದ್ದಾನೆ. ಬಸ್ ಮುಂಡರಗಿಯಿಂದ ಶಿರಹಟ್ಟಿ ಪಟ್ಟಣಕ್ಕೆ ಹೊರಟಿತ್ತು. ಪಟ್ಟಣದ ಕೆಇಬಿ ಹತ್ತಿರ ಡಿಪೋ ಕ್ರಾಸ್ ಬಳಿಯ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಹೊರಟಿದ್ದ ಬೈಕ್ ಸವಾರ ಮಂಜುನಾಥ್ ಈ ವೇಳೆ ಆಯತಪ್ಪಿ ಬಸ್ ಚಕ್ರದಡಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ಆಗಮಿಸಿದ ಮುಂಡರಗಿ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ರಸ್ತೆಗೆ ಡಿವೈಡರ್ ಇಲ್ಲದೆ ಅಡ್ಡಾದಿಡ್ಡಿ ವಾಹನ ಚಲಾಯಿಸುತ್ತಿರೋದು ಇಂತಹ ಅಪಘಾತಕ್ಕೆ ಕಾರಣವಾಗಿದ್ದು, ರಸ್ತೆ ಡಿವೈಡರ್ ನಿರ್ಮಿಸುವಂತೆ ಸ್ಥಳೀಯರ ಒತ್ತಾಯಿಸಿದ್ದಾರೆ.
ಕೆಲಸಕ್ಕೆ ಹೋಗು ಎಂದಿದ್ದೇ ತಪ್ಪಾಯ್ತು, ಹೆಂಡತಿಯನ್ನು ಕತ್ತು ಹಿಸುಕಿ ಕೊಂದ ಪತಿ!
ಕಾರು-ಬುಲೇರೊ ವಾಹನಗಳ ಅಪಘಾತ: ಹಲವರಿಗೆ ಗಾಯ
ಸಿಂಧನೂರು: ಕಾರು ಮತ್ತು ಬುಲೇರಾ ಗೂಡ್‌್ಸ ವಾಹನಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ 16ಕ್ಕೂ ಅಧಿಕ ಜನರಿಗೆ ಗಾಯಗಳಾಗಿದ್ದು, ನಾಲ್ವರಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಸಾವು ಬದುಕಿನಲ್ಲಿ ನರಳಾಡುತ್ತಿರುವ ದುರ್ಘಟನೆ ಶನಿವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ನಡೆದಿದೆ.
ತಾಲೂಕಿನ ಕಣ್ಣೂರು ಗ್ರಾಮದ 15ಕ್ಕೂ ಹೆಚ್ಚು ಜನರು ಬುಲೇರೊ ಗೂಡ್‌್ಸ ವಾಹನದಲ್ಲಿ ಅಂಜನಾದ್ರಿ ಬೆಟ್ಟಕ್ಕೆ ತೆರಳುತ್ತಿದ್ದರು. ಕ್ರೆಟಾ ಕಾರಿನಲ್ಲಿ ತಂದೆ-ತಾಯಿ ಹಾಗೂ ಮೂವರು ಮಕ್ಕಳು ಹೊಸಪೇಟೆಯಿಂದ ಹೈದ್ರಾಬಾದ್‌ಗೆ ತೆರಳುತ್ತಿದ್ದರು. ಮಾರ್ಗ ಮಧ್ಯೆ ತಾಲೂಕಿನ ಗೊರೇಬಾಳ ಗ್ರಾಮದ ಸಮೀಪದಲ್ಲಿ ಕಾರು ಮತ್ತು ಬುಲೇರೊ ವಾಹನ ನಡುವೆ ಡಿಕ್ಕಿ ಸಂಭವಿಸಿದೆ. ಇದರಿಂದ ಬುಲೇರೊ ವಾಹನ ಪಕ್ಕದ ಗದ್ದೆಗೆ ಪಲ್ಟಿಹೊಡೆದಿದೆ.
ಬೆಂಗಳೂರು: ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ಮಹಿಳೆ ರಕ್ಷಣೆ, ಓರ್ವ ಸೆರೆ
ಬುಲೇರೊ ವಾಹನದಲ್ಲಿದ್ದ 15 ಜನರಲ್ಲಿ ಓರ್ವ ಮಹಿಳೆ ಶಾಂತಾಬಾಯಿ (36) ತಲೆಗೆ, ಓರ್ವ ಬಾಲಕ ಪ್ರಜ್ವಲ್ ಸಿಂಗ್ (15) ಮುಖ ಮತ್ತು ತಲೆಗೆ ಹಾಗೂ ಕಾರನಲ್ಲಿದ್ದ ಓರ್ವ ಬಾಲಕಿ ಅಲ್ಫಿಯಾ ಖಾನ್ (8) ತಲೆಗೆ ಗಂಭೀರ ಗಾಯಗಳಾಗಿವೆ. ಈ ಮೂವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿಯ ಒಪಿಡಿಗೆ ರವಾನಿಸಲಾಗಿದೆ. ಇನ್ನುಳಿದ ಗಾಯಾಳುಗಳಾದ ನಾಗೇಶ, ದನಸಿಂಗ್, ಉದಯಸಿಂಗ್, ಉಸ್ಮಾನ್‌ಖಾನ್, ಶಹಿಸ್ತಾಖಾನ್, ಪ್ರಕಾಶ ಸಿಂಗ್, ಪ್ರಶಾಂತ್, ಜಗದಂಬಾ, ಪ್ರವೀಣ್ ಸಿಂಗ್, ವೀರಸಿಂಗ್, ತುಳಜಾಸಿಂಗ್, ಚಂದ್ರಕಲಾ, ಮೀನಾಕ್ಷಿಬಾಯಿ, ಸಾನ್ವಿಸಿಂಗ್, ಶ್ವೇತಾ ಸಿಂಗ್, ಶಬಾನಾ ಅವರು ಸ್ಥಳಿಯ ಸಾರ್ವಜನಿಕ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಲೂಕು ಆರೋಗ್ಯಾಧಿಕಾರಿ ಡಾ.ಅಯ್ಯನಗೌಡ ನೇತೃತ್ವದಲ್ಲಿ ವೈದ್ಯರು ಹಾಗೂ ಸಿಬ್ಬಂದಿ ಎಲ್ಲ ಗಾಯಾಳುಗಳಿಗೆ ಚಿಕಿತ್ಸೆ ನೀಡುವಲ್ಲಿ ಯಶಸ್ವಿಯಾದರು. ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.