ಕೊಪ್ಪ(ಜೂ.18): ಎರಡು ಬೈಕ್‌ಗಳ ನಡುವೆ ಡಿಕ್ಕಿ ಸಂಭವಿಸಿ ಸವಾರ ಸ್ಥಳದಲ್ಲೇ ಮೃತಪಟ್ಟಘಟನೆ ತಾಲೂಕಿನ ಹರಿಹರಪುರ ಠಾಣಾ ವ್ಯಾಪ್ತಿಯ ಕಾರ್‌ಗದ್ದೆ ಸಮೀಪ ನಡೆದಿದೆ.

ಶೃಂಗೇರಿ ತಾಲೂಕಿನ ಬೇಗಾರಿನ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಕಾರ್‌ಗದ್ದೆಯ ನಿವಾಸಿ ರಮೇಶ್‌(26) ಮೃತರು. ಮತ್ತೊಬ್ಬ ಸವಾರ ಮಂಜುನಾಥ್‌ಗೆ ಪೆಟ್ಟಾಗಿದ್ದು, ಕೊಪ್ಪದ ಸರ್ಕಾರಿ ಆಸ್ವತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪೊಲೀಸರಿಗೆ ಧೈರ್ಯ ತುಂಬಿದ ಅಲೋಕ್‌ ಕುಮಾರ್‌!

ಮಾವಿನಕಟ್ಟೆಯಲ್ಲಿ ಕೆಲಸ ಮುಗಿಸಿ ಬಂದ ರಮೇಶ್‌ ಹಾಗೂ ಮಂಜುನಾಥ್‌ ದಿನಸಿ ಕೊಂಡು ಬೈಕ್‌ನಲ್ಲಿ ಮನೆಗೆ ತೆರಳುತ್ತಿರುವಾಗ ಕಾರ್‌ಗದ್ದೆ ಬಳಿ ಶೃಂಗೇರಿ ಕಡೆಯಿಂದ ಬರುತ್ತಿದ್ದ ಬೈಕ್‌ ಒಂದು ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬಿದ್ದು ತೀವ್ರ ಗಾಯಗೊಂಡಿದ್ದ ರಮೇಶ್‌ ಸ್ಥಳದಲ್ಲೇ ಮೃತಪಟ್ಟಿದ್ದರೆ, ಮಂಜುನಾಥ್‌ಗೆ ತೀವ್ರ ಪೆಟ್ಟಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶೃಂಗೇರಿ ಕಡೆಯಿಂದ ಬಂದ ಸವಾರನಿಗೆ ಸ್ವಲ್ಪ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆ ಬಳಿಕ ತಮ್ಮ ಊರಿಗೆ ತೆರಳಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಹರಿಹರಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಣಿಬೆನ್ನೂರಿನಲ್ಲೊಂದು ಅಪಘಾತ: ಬೈಕ್ ಸವಾರ ಸಾವು

ರಾಣಿಬೆನ್ನೂರು: ಬೈಕ್‌ನಲ್ಲಿ ತೆರಳುತ್ತಿರುವಾಗ ನಿಯಂತ್ರಣ ತಪ್ಪಿ ಸವಾರ ಸಾವನ್ನಪ್ಪಿದ ಘಟನೆ ಮಂಗಳವಾರ ತಡರಾತ್ರಿ ತಾಲೂಕಿನ ಮೆಡ್ಲೇರಿ ಗ್ರಾಮದ ಹೈಸ್ಕೂಲ್‌ ಬಳಿ ಯಕ್ಲಾಸಪೂರ ರಸ್ತೆಯಲ್ಲಿ ಸಂಭವಿಸಿದೆ.

ಅಣ್ಣಪ್ಪ ಕರಿಯಪ್ಪ ಪುರದ ಎಂಬ​ವ​ನು ಮೃತಪಟ್ಟಿ​ದ್ದಾ​ನೆ. ಅಪಘಾತ ಸಮಯದಲ್ಲಿ ಬೀರೇಶ ತೀವ್ರವಾಗಿ ಗಾಯಗೊಂಡಿದ್ದು, ಪುರದ ಅವ​ರ​ನ್ನು ಚಿಕಿತ್ಸೆಗೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#NewsIn100Seconds | ಈ ಕ್ಷಣದ ಪ್ರಮುಖ ಹೆಡ್‌ಲೈನ್ಸ್

"