ಗಣೇಶ ಕೂರಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚಾಕು ಇರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಅಜಿತ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಸುಮನ್ ಎಂಬಾತನಿಂದ ಕೃತ್ಯ ನಡೆದಿದೆ. 

ಬೆಂಗಳೂರು (ಆ.27): ಗಣೇಶ ಕೂರಿಸುವ ವಿಚಾರಕ್ಕೆ ಗಲಾಟೆ ನಡೆದು ಯುವಕನಿಗೆ ಚಾಕು ಇರಿದಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ಜರುಗಿದೆ. ಅಜಿತ್ ಎಂಬಾತನಿಗೆ ಚಾಕು ಇರಿಯಲಾಗಿದೆ. ಸುಮನ್ ಎಂಬಾತನಿಂದ ಕೃತ್ಯ ನಡೆದಿದೆ. ಸುಮನ್ ಮತ್ತು ಅಜಿತ್ ಇಬ್ಬರು ಪರಿಚಿತರೇ. ಕಳೆದ ರಾತ್ರಿ ಹನ್ನೊಂದು ಘಂಟೆ ಸಮಯದಲ್ಲಿ ಭೇಟಿಯಾಗಿದ್ದಾರೆ. 

ಈ ವೇಳೆ ಮಾತಿಗೆ ಮಾತು ಬೆಳೆದು ಆರೋಪಿ ಹಲ್ಲೆ ನಡೆಸಿದ್ದಾನೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ಧರ್ಮರಾಯ ಸ್ವಾಮಿ ದೇವಾಲಯ ಬಳಿಯಲ್ಲಿ ಘಟನೆ ಜರುಗಿದೆ. ಎದೆ, ಕುತ್ತಿಗೆ ಬೆನ್ನು ಸೇರಿ ಐದಾರು ಕಡೆ ಚಾಕು ಇರಿಯಲಾಗಿದೆ. ಘಟನೆ ಬಳಿಕ ಗಾಯಾಳು ಅಜಿತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಗಿದೆ. ಅರೋಪಿ ಸುಮನ್‌ನನ್ನು ಹಲಸೂರು ಗೇಟ್ ಪೊಲೀಸರ ವಶಕ್ಕೆ ನೀಡಲಾಗಿದ್ದು, ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ನಮ್ಮ ಹಣ್ಣನ್ನು ಬೇರೆಯವರಿಗೆ ಬಿಡಬಾರದು: ಎಸ್‌ಟಿಎಸ್‌ ಬಗ್ಗೆ ಡಿಕೆಶಿ ಮಾರ್ಮಿಕ ನುಡಿ

ಚಾಕುವಿನಿಂದ ಇರಿದು ಸುಲಿಗೆ ಯತ್ನ: ಆಹ್ವಾನ ಪತ್ರಿಕೆ ನೀಡುವ ನೆಪದಲ್ಲಿ ಮನೆಗೆ ನುಗ್ಗಿ ಚಿನ್ನದ ವ್ಯಾಪಾರಿ ಮತ್ತು ಅವರ ಪತ್ನಿಗೆ ಚಾಕುವಿನಿಂದ ಇರಿದು ಸುಲಿಗೆ ಮಾಡಲು ವಿಫಲ ಯತ್ನ ನಡೆಸಿ ಪರಾರಿಯಾಗಿದ್ದ ದಂಪತಿಯನ್ನು ಮೈಸೂರಿನ ವಿಜಯನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಮೈಸೂರಿನ ಹೂಟಗಳ್ಳಿ ಹೊನ್ನೇಗೌಡ ಬ್ಲಾಕ್‌ ನಿವಾಸಿಗಳಾದ ವೀರೇಶ್‌ ಮತ್ತು ಕೆ. ಪ್ರಿಯಾಂಕ ಎಂಬವರೇ ಬಂಧಿತ ದಂಪತಿ. ಹೂಟಗಳ್ಳಿ ಕೆಎಚ್‌ಬಿ ಕಾಲೋನಿ ನಿವಾಸಿ ಬಾಬುರಾವ್‌ ಮತ್ತು ಅವರ ಪತ್ನಿ ಕಮಲಾಬಾಯಿ ಎಂಬವರೇ ಗಾಯಗೊಂಡವರು.

ಪ್ರಕರಣದ ಹಿನ್ನೆಲೆ: ಆ.16 ರಂದು ಹೂಟಗಳ್ಳಿಯ ಕೆಎಚ್‌ಬಿ ಕಾಲೋನಿಯಲ್ಲಿ ಆರೋಪಿಗಳು ಗೃಹಪ್ರವೇಶದ ಆಹ್ವಾನ ಕಾರ್ಡ್‌ ನೀಡಲು ಬಂದು ನೀರು ಕೇಳುವ ನೆಪದಲ್ಲಿ ಮನೆ ಒಳಗೆ ಪ್ರವೇಶಿಸಿ ಮನೆಯಲ್ಲಿದ್ದ ಚಿನ್ನದ ವ್ಯಾಪಾರಿ ಬಾಬುರಾವ್‌ ಮತ್ತು ಕಮಲಾಬಾಯಿ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಸುಲಿಗೆ ಮಾಡಲು ಪ್ರಯತ್ನಿಸಿ ಪರಾರಿಯಾಗಿದ್ದರು.

ಈ ಬಗ್ಗೆ ವಿಜಯನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಪ್ರಕರಣದ ಅರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಯ ಕಾಲದಲ್ಲಿ ಆರೋಪಿ ವೀರೇಶ್‌ಗೆ ಆನ್‌ಲೈನ್‌ ಜೂಜಾಟ ಆಡುವ ಹವ್ಯಾಸದಿಂದ ಲಕ್ಷಾಂತರ ರೂಪಾಯಿ ಹಣವನ್ನು ಕಳೆದುಕೊಂಡು ಸಾಲ ಮಾಡಿಕೊಂಡಿದ್ದು, ಸಾಲವನ್ನು ತೀರಿಸಲು ಆರೋಪಿ ದಂಪತಿ ಸುಲಿಗೆ ಮಾಡಲು ಸಂಚನ್ನು ರೂಪಿಸಿದ್ದಾಗಿ ತಿಳಿದು ಬಂದಿದೆ. ಇಬ್ಬರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸರ್ಕಾರಿ ವಕೀಲರ ವೈಫಲ್ಯದಿಂದ ಸರ್ಕಾರಕ್ಕೆ ಕೆಟ್ಟ ಹೆಸರು: ಸಿಎಂ ಸಿದ್ದರಾಮಯ್ಯ

ನಗರ ಪೊಲೀಸ್‌ ಆಯುಕ್ತ ರಮೇಶ್‌ ಬಾನೋತ್‌, ಡಿಸಿಪಿಗಳಾದ ಎಂ. ಮುತ್ತುರಾಜು, ಎಸ್‌. ಜಾಹ್ನವಿ, ವಿಜಯನಗರ ಉಪ ವಿಭಾಗದ ಎಸಿಪಿ ಜಿ.ಎಸ್‌. ಗಜೇಂದ್ರಪ್ರಸಾದ್‌ ಅವರ ಮಾರ್ಗದರ್ಶನದಲ್ಲಿ ವಿಜಯನಗರ ಠಾಣೆಯ ಇನ್ಸ್‌ಪೆಕ್ಟರ್‌ ಬಿ.ಎಸ್‌. ರವಿಶಂಕರ, ಎಸ್‌ಐಗಳಾದ ಕೆ. ವಿಶ್ವನಾಥ್‌, ಕೆ. ನಾರಾಯಣ ಹಾಗೂ ಸಿಬ್ಬಂದಿ ಶಂಕರ್‌, ಲೊಕೇಶ್‌, ಪ್ರಭಾಕರ, ನಂದೀಶ್‌, ಶಿವಕುಮಾರ, ಮಂಜುನಾಥ್‌, ಸಂಜಯ್‌, ಶ್ರೀನಿವಾಸ್‌ಮೂರ್ತಿ, ಕಾಮಣ್ಣ, ಸಿಡಿಆರ್‌ ವಿಭಾಗದ ಕುಮಾರ್‌ ಈ ಪತ್ತೆ ಮಾಡಿದ್ದಾರೆ.