ಹುಬ್ಬಳ್ಳಿ(ನ.04): ಹಲವು ದಿನಗಳ ಬಳಿಕ ನಗರದಲ್ಲಿ ಎರಡು ಪ್ರತ್ಯೇಕ ಚಾಕು ಇರಿತ ಪ್ರಕರಣಗಳು ನಡೆದಿದೆ. ಕ್ಷುಲ್ಲಕ ಕಾರಣಕ್ಕಾಗಿ ನಡೆದ ಘಟನೆಗಳಲ್ಲಿ ಒಬ್ಬಾತ ಗಾಯಗೊಂಡು ಕಿಮ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ, ಇನ್ನೊಬ್ಬ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದಾನೆ. 

ಹಳೆ ಹುಬ್ಬಳ್ಳಿಯ ಟಿಪ್ಪು ನಗರದ ಶೋಯೆಬ್‌ ಅಬ್ಬನ್ನವರ ಎಂಬಾತನಿಗೆ ಸ್ಥಳೀಯ ಸಾಗರ ಎಂಬಾತ ಹಿಂಭಾಗಕ್ಕೆ ಚೂರಿ ಇರಿದಿದ್ದಾನೆ. ಬೈಕ್‌ ಚಲಾಯಿಸುವ ವೇಳೆ ಹಗುರವಾಗಿ ಚಲಿಸು ಎಂದು ಹೇಳಿದ್ದಕ್ಕೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಆರೋಪಿ ಸಾಗರ ಪರಾರಿಯಾಗಿದ್ದು, ಬಂಧನಕ್ಕಾಗಿ ಬಲೆ ಬೀಸಲಾಗಿದೆ. ಹಳೆ ಹುಬ್ಬಳ್ಳಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

500 ರೂ.. ನಾ ಕೊಟ್ಟೆ.. ನೀ ಕೊಟ್ಟಿಲ್ಲ...ಮದ್ಯದಂಗಡಿ ಮಾಲೀಕನಿಗೆ ಚಾಕು ಇರಿತ!

ಸೋಮವಾರ ತಡರಾತ್ರಿ ದೇವಾಂಗಪೇಟೆಯ ಮಾಧವ ನಗರದಲ್ಲಿ ರಮೇಶ ಕಟ್ಟಿಮನಿ ಎಂಬ ಯುವಕನಿಗೆ ವಿನಾಯಕ ಎಂಬಾತ ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿದಿದ್ದಾನೆ. ಪಕ್ಕಡಿ ಮತ್ತು ಎದೆ ಭಾಗದಲ್ಲಿ ಚಾಕು ಇರಿದಿದ್ದ. ಚಿಕಿತ್ಸೆಗಾಗಿ ಕಿಮ್ಸ್‌ಗೆ ರವಾನೆ ಮಾಡಲಾಗಿತ್ತು. ಸಣ್ಣ ಗಾಯವಾಗಿದ್ದರಿಂದ ಸೂಕ್ತ ಚಿಕಿತ್ಸೆ ನೀಡಿದ ಬಳಿಕ ಬಿಡುಗಡೆ ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡ ಅಶೋಕ ನಗರ ಠಾಣೆ ಪೊಲೀಸರು ಆರೋಪಿ ವಿನಾಯಕನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.