ಮುಂಬೈ(ಅ. 01)   ಕ್ಷುಲ್ಲಕ ಕಾರಣಕ್ಕೆ ಎಂತೆಂತೋ ಘಟನೆಗಳು ಆಗಿ ಹೋಗುತ್ತವೆ.. ಇದು ಸಹ ಅಂಥದ್ದೆ ಒಂದು ಪ್ರಕರಣ.  ಮದ್ಯದಂಗಡಿಗೆ ಬಂದಿದ್ದ ಗ್ರಾಹಕ ಮತ್ತು ಮಾಲೀಕನ ನಡುವೆ  500  ರೂ. ವಿಚಾರಕ್ಕೆ ದೊಡ್ಡ ಗಲಾಟೆಯೇ ನಡೆದು ಹೋಗಿದೆ. ಕೋಪಗೊಂಡ ಗ್ರಾಹಕ ಚಾಕುವಿನಿಂದ ಇರಿದಿದ್ದಾನೆ.

ತಾನು ಹಣ ಕೊಟ್ಟಿದ್ದೇನೆ ಎಂದು ಗ್ರಾಹಕ ಹೇಳಿದರೆ ಮಾಲೀಕ ಇಲ್ಲ ಎಂದು ವಾದ ಮಾಡಿದ್ದಾನೆ.  ಮಹಾರಾಷ್ಟ್ರದ ಕಲ್ಯಾಣ ಏರಿಯಾದ ರೋಸ್ ವೈನ್ ಶಾಪ್ ನಲ್ಲಿ ಘಟನೆ ನಡೆದಿದೆ.

ಕ್ರಿಶ್ಚಿಯನ್ ರಾಜು ಯಾದಗಿರಿ ಹಿಂದೂ ಬುಲೆಟ್ ಬಾಬಾ.

ಆರೋಪಿಯನ್ನು ಉಲ್ಹಾಸ್‌ನಗರ ನಿವಾಸಿ ಗೋವಿಂದ್ ಪ್ರೇಮ್ ಪ್ರಕಾಶ್ ವರ್ಮಾ ಎಂದು ಗುರುತಿಸಲಾಗಿದೆ.ಆ ದಿನ ಮದ್ಯದ ಅಂಗಡಿಯಲ್ಲಿ ತುಂಬಾ ರಶ್ ಇತ್ತು.  ನಾನು ಹಣ ಕೊಟ್ಟಿದ್ದನ್ನು ಮಾಲೀಕ ಗಮನಿಸಿ ಇರಲಿಲ್ಲ ಎಂಬುದು ಗ್ರಾಹಕ ಮಾತಾದರೆ  ಹಣ ನೀಡದೆ ವಂಚನೆ ಮಾಡಿದ್ದಾನೆ ಎಂದು ಹಲ್ಲೆಗೊಳಗಾದ ಮಾಲೀಕ ಧರ್ಮ್ ಪಾಲ್ ಸಿಂಗ್  ಹೇಳಿದ್ದಾರೆ.

ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 326 (ಸ್ವಯಂಪ್ರೇರಣೆಯಿಂದ ಅಪಾಯಕಾರಿ ಆಯುಧಗಳಿಂದ ಹಲ್ಲೆ) ಅಡಿಯಲ್ಲಿ ಪೊಲೀಸರು ವರ್ಮಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. 

ಕ್ಷುಲ್ಲಕ ಕಾರಣಕ್ಕೆ  ಈ ರೀತಿಯ ಘಟನೆಗಳು ನಡೆದುಹೋಗುತ್ತದೆ.  ಕೋಲಾರದಲ್ಲಿ ಅಂಗಡಿ ಮುಂದೆ ಉಗುಳಿದ ಎಂಬ ಕಾರಣಕ್ಕೆ ಮಾಲೀಕ ಹುಡುಗನೊಬ್ಬನನ್ನು ಹತ್ಯೆ ಮಾಡಿದ್ದು ವರದಿಯಾಗಿತ್ತು.