Asianet Suvarna News Asianet Suvarna News

Madhya Pradesh Boy Death: ವೈದ್ಯರು ಪೂಜೆ ಮಾಡುತ್ತಿದ್ದರಿಂದ ಬಾಲಕ ಸಾವು; ಕುಟುಂಬಸ್ಥರ ಆರೋಪ

ತನ್ನ ಮಗನಿಗೆ ಆರೋಗ್ಯ ಹದಗೆಟ್ಟಿದ್ದ ಕಾರಣ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು ಆದರೆ, ವೈದ್ಯರು ಅಲ್ಲಿರಲಿಲ್ಲ, ಗಂಟೆಗಟ್ಟಲೆ ಕಾದರೂ ಬರಲಿಲ್ಲ, ಅವರು ಮನೆಯಲ್ಲಿ ವಿಶೇಷ ಪೂಜೆಯಲ್ಲಿ ನಿರತರಾಗಿದ್ದರು ಎಂದು ಬಾಳಕನ ಕುಟುಂಬಸ್ಥರು ಆರೋಪಿಸಿದ್ದಾರೆ. 

kin blame doctor for boys death in madhya pradesh jabalpur say he was busy with puja ash
Author
First Published Sep 1, 2022, 4:25 PM IST

ಮಧ್ಯಪ್ರದೇಶದ ಜಬಲ್‌ಪುರ ಜಿಲ್ಲೆಯ ಬರ್ಗಿ ಎಂಬಲ್ಲಿ 5 ವರ್ಷದ ಬಾಲಕ ತನ್ನ ತಾಯಿಯ ಮಡಿಲಲ್ಲೇ ಮೃತಪಟ್ಟಿರುವ ಘಟನೆ ನಡೆದಿದೆ. ಅಲ್ಲದೆ, ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು (Doctor) ಮನೆಯಲ್ಲಿ ವಿಶೇಷ ಪೂಜೆಯಲ್ಲಿ (Special Puja) ನಿರತರಾಗಿದ್ದರು ಎಂದೂ ಮೃತ ಬಾಲಕನ ಸಂಬಂಧಿಕರು ದೂರಿದ್ದಾರೆ. ಮಧ್ಯ ಪ್ರದೇಶದ ತಿನ್ಹಟಾ ಗ್ರಾಮದ ನಿವಾಸಿ ಸಂಜಯ್ ಪಾಂಡೆ ಅವರು ತಮ್ಮ ಮಗನನ್ನು ಬುಧವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಬರ್ಗಿಯ ಆರೋಗ್ಯ ಕೇಂದ್ರಕ್ಕೆ (Health Centre) ಅನಾರೋಗ್ಯದಿಂದ ಬಳಲುತ್ತಿದ್ದ ಮಗನನ್ನು ಕರೆದುಕೊಂಡು ಹೋಗಿದ್ದಾಗಿ ಹೇಳಿದ್ದಾರೆ. ಈ ವೇಳೆ, ವೈದ್ಯ ಲೋಕೇಶ್ ಕುಮಾರ್ ಅವರು ಕಾರ್ಯನಿರತರಾಗಿದ್ದಾರೆ ಎಂದು ನರ್ಸ್ (Nurse) ತಿಳಿಸಿದ ನಂತರ ಗಂಟೆಗಟ್ಟಲೆ ಕಾದರೂ ಡಾಕ್ಟರ್‌ ಬರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ.
 
ಲೋಕೇಶ್ ಕುಮಾರ್ ಅವರು ಆ ದಿನ ಅವರ ಪತ್ನಿ ಉಪವಾಸವಿದ್ದ ಕಾರಣ ಮನೆಯಲ್ಲಿ ವಿಶೇಷ ಪೂಜೆಯಲ್ಲಿ ನಿರತರಾಗಿದ್ದರು ಎಂದು ನಮಗೆ ತಿಳಿದುಬಂದಿದೆ. ಈ ಹಿನ್ನೆಲೆ, ಚಿಕಿತ್ಸೆ ಫಲಕಾರಿಯಾಗದೇ ಸೋದರಳಿಯ ಮೃತಪಟ್ಟಿದ್ದಾನೆ. ಬಾಲಕನ ಸಾವಿಗೆ ಕಳಪೆ ಆರೋಗ್ಯ ಸೌಲಭ್ಯಗಳೇ ಕಾರಣ ಎಂದು ಬಾಲಕನ ಚಿಕ್ಕಪ್ಪ ಪವನ್ ಕುಮಾರ್ ಆರೋಪಿಸಿದ್ದಾರೆ.  

ತಳ್ಳೋ ಗಾಡಿಯಲ್ಲಿ ಗರ್ಭಿಣಿ ಪತ್ನಿಯ ಆಸ್ಪತ್ರೆ ಕರೆ ತಂದ ಪತಿಗೆ ಶಾಕ್, ತನಿಖೆಗೆ ಆದೇಶಿಸಿದ ಸರ್ಕಾರ!
 
ಬಿಜೆಪಿ ಸರ್ಕಾರದ ವಿರುದ್ಧ ಕಮಲ್‌ನಾಥ್‌ ವಾಗ್ದಾಳಿ
ಇನ್ನು, ಈ ಘಟನೆ ಬಗ್ಗೆ ಕಾಂಗ್ರೆಸ್ ನಾಯಕ ಮತ್ತು ಮಾಜಿ ಮುಖ್ಯಮಂತ್ರಿ ಕಮಲ್ ನಾಥ್ ಅವರು ಮಧ್ಯ ಪ್ರದೇಶ ರಾಜ್ಯದ ಭಾರತೀಯ ಜನತಾ ಪಕ್ಷ (Bharatiya Janata Party) (ಬಿಜೆಪಿ) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಬಾಲಕನ ಕುಟುಂಬದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದೆ. ಚಿಕಿತ್ಸೆಯಿಲ್ಲದೆ (Treatment) ಜನರು ಸಾಯುತ್ತಿರುವುದು ಆಘಾತಕಾರಿಯಾಗಿದೆ. ಇದು ರಾಜ್ಯ ಸರ್ಕಾರದ ವೈಫಲ್ಯವಾಗಿದ್ದು, ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕು ಎಂದು ಮಾಜಿ ಸಿಎಂ ಕಮಲ್‌ ನಾಥ್‌ ಆಗ್ರಹಿಸಿದ್ದಾರೆ.
 
ಆಸ್ಪತ್ರೆಗೆ ಬರುವ ಮುನ್ನವೇ ಬಾಲಕ ಮೃತಪಟ್ಟಿದ್ದ ಎಂದ ಡಿಸಿ
ಬಾಲಕನ ಸಾವಿನ ವಿಚಾರ ದೊಡ್ಡ ವಿಷಯವಾದ ಬೆನ್ನಲ್ಲೇ ಈ ಬಗ್ಗೆ ಜಬಲ್ಪುರ ಜಿಲ್ಲಾಧಿಕಾರಿ (District Collector) ಇಳಯರಾಜ ಟಿ ಪ್ರತಿಕ್ರಿಯೆ ನೀಡಿದ್ದಾರೆ. ವೈದ್ಯರು ಕರ್ತವ್ಯದಲ್ಲಿದ್ದರು, ಆದರೆ ಬಾಲಕನನ್ನು ಆರೋಗ್ಯ ಕೇಂದ್ರಕ್ಕೆ ಕರೆತರುವ ಮುನ್ನವೇ ಮೃತಪಟ್ಟಿದ್ದ. ವೈದ್ಯರು ಸಾವಿನ ಬಗ್ಗೆ ಕುಟುಂಬಕ್ಕೆ ತಿಳಿಸಿದರು. ಆದರೆ ಅವರು ಈ ಸತ್ಯವನ್ನು ಒಪ್ಪಿಕೊಳ್ಳಲು ಸಿದ್ಧರಿಲ್ಲ. ಬಾಲಕನ ಒಂದು ಕಾಲಿನಲ್ಲಿ ಸುಟ್ಟ ಗಾಯಗಳಿದ್ದವು. ಸುಟ್ಟ ಗಾಯಗಳಿಂದಾಗಿ ಸೋಂಕು (Infection) ಹರಡಿತು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ. 


ಕೆಲಸದಾಕೆಗೆ ಚಿತ್ರಹಿಂಸೆ ನೀಡುತ್ತಿದ್ದ ಜಾರ್ಖಂಡ್‌ ಬಿಜೆಪಿ ನಾಯಕಿ ಬಂಧನ
 
ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ಸಾಗಿಸಿದ್ದ ವಿಡಿಯೋ ವೈರಲ್‌
ಮಧ್ಯ ಪ್ರದೇಶದ ದಮೋಹ್‌ನಲ್ಲಿರುವ ತನ್ನ ಗರ್ಭಿಣಿ ಪತ್ನಿಯನ್ನು ತಳ್ಳುವ ಗಾಡಿಯಲ್ಲಿ ಬುಧವಾರ ಆಸ್ಪತ್ರೆಗೆ ಸಾಗಿಸುತ್ತಿರುವ ವ್ಯಕ್ತಿಯ ವಿಡಿಯೋ ವೈರಲ್‌ (Video Viral) ಆಗುತ್ತಿದೆ. ಈ ಬೆನ್ನಲ್ಲೇ ರಾಜ್ಯದಲ್ಲಿನ ಕಳಪೆ ಆರೋಗ್ಯ ಸೌಲಭ್ಯಗಳ ಬಗ್ಗೆ ಹೆಚ್ಚಿನ ಆಕ್ರೋಶದ ನಂತರ ಬಾಲಕನ ಸಾವಿನ ವಿಷಯ ಬೆಳಕಿಗೆ ಬಂದಿದೆ. ತುಂಬು ಗರ್ಭಿಣಿ ಪತ್ನಿಗೆ ಹೊಟ್ಟೆ ನೋವು ಆರಂಭಗೊಂಡಿದ್ದರಿಂದ ತಕ್ಷಣವೇ ಆ್ಯಂಬುಲೆನ್ಸ್‌ಗೆ ಪತಿ ಕರೆ ಮಾಡಿದ್ದಾರೆ. ಆದರೆ, 2 ಗಂಟೆ ಕಾದರೂ ಆ್ಯಂಬುಲೆನ್ಸ್ ಪತ್ತೆ ಇಲ್ಲ.  ಈ ಹಿನ್ನೆಲೆ ಪತಿ ತಳ್ಳೋ ಗಾಡಿಯಲ್ಲಿ ಪತ್ನಿಯ ಮಲಗಿಸಿ 2 ಕಿಲೋಮೀಟರ್‌ಗೆ ಹೆಚ್ಚು ದೂರ ತಳ್ಳುತ್ತಾ ಬಂದಿದ್ದರು. ಆದರೆ ಆ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ಬಾಗಿಲು ಹಾಕಲಾಗಿತ್ತು. ಈ ಕುರಿತು ಮಧ್ಯ ಪ್ರದೇಶ ಸರ್ಕಾರ ತನಿಖೆಗೆ ಆದೇಶಿಸಿದೆ. 

Follow Us:
Download App:
  • android
  • ios