Kerala Crime: ನಾಯಿಗೆ ಊಟ ಹಾಕದ್ದಕ್ಕೆ ಸೋದರ ಸಂಬಂಧಿಯನ್ನು ಹೊಡೆದು ಕೊಂದ ವ್ಯಕ್ತಿ ಬಂಧನ
ಶುಕ್ರವಾರ ಹರ್ಷದ್‌ನನ್ನು ಹಕೀಂ ತನ್ನ ಸ್ನೇಹಿತರ ಜೊತೆಗೂಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರಿಬ್ಬರು ತಂಗಿದ್ದ ಮನೆಯ ಮೇಲ್ಛಾವಣಿಯಿಂದ ಸೋದರ ಸಂಬಂಧಿ ಬಿದ್ದಿದ್ದಾನೆ ಎಂದು ವೈದ್ಯರಿಗೆ ಸುಳ್ಳು ಹೇಳಿದ್ದಾರೆ. ಅಲ್ಲದೆ, ಇವರಿಬ್ಬರು ಒಟ್ಟಿಗೇ ಇದ್ದು ಪೆರುಮತ್ತೋಡಿ ಗ್ರಾಮದಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದರು ಎಂದೂ ತಿಳಿದುಬಂದಿದೆ.
ಕೇರಳದ (Kerala) ಪಾಲಕ್ಕಾಡ್‌ನಲ್ಲಿ (Palakkad) ತನ್ನ ಸೋದರ ಸಂಬಂಧಿಯನ್ನು (Cousin) ಥಳಿಸಿ (Beaten) ಕೊಂದ (Death) ಆರೋಪದ ಮೇಲೆ 27 ವರ್ಷದ ಯುವಕನನ್ನು ಪೊಲೀಸರು (Police) ಬಂಧಿಸಿದ್ದಾರೆ (Arrested) . ಕಳೆದ ಶುಕ್ರವಾರ ಅಂದರೆ ನವೆಂಬರ್ 4 ರಂದು ಶುಕ್ರವಾರ ರಾತ್ರಿ ಪಾಲಕ್ಕಾಡ್ ಜಿಲ್ಲೆಯ ಮುಲಯಂಕಾವು ಪ್ರದೇಶದಲ್ಲಿ ಈ ಆಘಾತಕಾರಿ ಘಟನೆ ಸಂಭವಿಸಿದೆ. ತನ್ನ ನಾಯಿಗೆ (Dog) ಆಹಾರ ನೀಡದ ಕಾರಣ ಆರೋಪಿ ತನ್ನ 21 ವರ್ಷ ವಯಸ್ಸಿನ ಸೋದರ ಸಂಬಂಧಿಯನ್ನು ಹೊಡೆದು ಕೊಂದಿದ್ದಾನೆ ಎಂದು ತಿಳಿದುಬಂದಿದೆ. ಹತ್ಯೆಗೊಳಗಾದ ವ್ಯಕ್ತಿಯನ್ನು 21 ವರ್ಷದ ಹರ್ಷದ್ ಎಂದು ಗುರುತಿಸಲಾಗಿದೆ. ಇನ್ನು, ಈ ಆರೋಪ ಹಿನ್ನೆಲೆ ಸಂಬಂಧಿ ಹಕೀಂ(27)ನನ್ನು ಕೊಪ್ಪಂ ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ಹರ್ಷದ್‌ನನ್ನು ಹಕೀಂ ತನ್ನ ಸ್ನೇಹಿತರ ಜೊತೆಗೂಡಿ ಆಸ್ಪತ್ರೆಗೆ ಕರೆದೊಯ್ದಿದ್ದು, ಅವರಿಬ್ಬರು ತಂಗಿದ್ದ ಮನೆಯ ಮೇಲ್ಛಾವಣಿಯಿಂದ ಸೋದರ ಸಂಬಂಧಿ ಬಿದ್ದಿದ್ದಾನೆ ಎಂದು ವೈದ್ಯರಿಗೆ ಸುಳ್ಳು ಹೇಳಿದ್ದಾರೆ. ಅಲ್ಲದೆ, ಇವರಿಬ್ಬರು ಒಟ್ಟಿಗೇ ಇದ್ದು ಪೆರುಮತ್ತೋಡಿ ಗ್ರಾಮದಲ್ಲಿ ಕೇಬಲ್ ಕೆಲಸ ಮಾಡುತ್ತಿದ್ದರು ಎಂದೂ ತಿಳಿದುಬಂದಿದೆ.
ಇದನ್ನು ಓದಿ: ಪೇಪರ್ ಓದುತ್ತಲೇ ಕುಸಿದುಬಿದ್ದು ಮೃತಪಟ್ಟ ಉದ್ಯಮಿ: CCTVಯಲ್ಲಿ ಸೆರೆ
ತನ್ನ ಸೋದರ ಸಂಬಂಧಿ ಮೇಲ್ಛಾವಣಿಯಿಂದ ಬಿದ್ದಿದ್ದಾನೆ ಎಂದು ಆರೋಪಿ ಹೇಳಿದ್ದರೂ, ಮೃತನನ್ನು ಕ್ರೂರವಾಗಿ ಥಳಿಸಿರುವುದು ವೈದ್ಯರಿಗೆ ಖಚಿತವಾಗಿತ್ತು. ಏಕೆಂದರೆ ಅವರ ದೇಹದ ಮೇಲೆ ಅನೇಕ ಗುರುತುಗಳು ಇದ್ದವು. ಆದರೆ, ಚಿಕಿತ್ಸೆ ನೀಡಿದರೂ ದುರದೃಷ್ಟವಶಾತ್ ಹರ್ಷದ್ ಬದುಕುಳಿಯಲಿಲ್ಲ. ಆತನ ಪಕ್ಕೆಲುಬುಗಳು ಮುರಿದಿದ್ದು, ಆಂತರಿಕ ರಕ್ತಸ್ರಾವದಿಂದ 21 ವರ್ಷದ ಯುವಕ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಮತ್ತೊಂದು ಬೀದಿ ನಾಯಿ ಮೇಲೆ ಕಾರು ಹತ್ತಿಸಿದ ಅಮಾನವೀಯ ಕೃತ್ಯ: ದೂರು ದಾಖಲು
ತನ್ನ ಶ್ವಾನಕ್ಕೆ ಆಹಾರ ನೀಡದಿದ್ದಕ್ಕೆ ನಾಯಿ ಬೆಲ್ಟ್ ಮತ್ತು ಮರದ ಕೋಲಿನಿಂದ ಹಕೀಮ್ ಹರ್ಷದ್‌ನನ್ನು ಥಳಿಸಿದ್ದಾನೆ. ಈ ಬಗ್ಗೆ ಮಾಹಿತಿ ನೀಡಿದ ಕೊಪ್ಪಂ ಪೊಲೀಸರು, "ಕಳೆದ ಶುಕ್ರವಾರ, ಕೇರಳದ ಪಾಲಕ್ಕಾಡ್ ಜಿಲ್ಲೆಯ ಮುಳಯಂಕಾವುವಿನ ಪೆರುಂಬ್ರತೋಡಿ ಎಂಬಲ್ಲಿ 21 ವರ್ಷದ ಹುಡುಗನನ್ನು ಅವನ ಸೋದರ ಸಂಬಂಧಿ ಹೊಡೆದು ಕೊಂದನು. ಹರ್ಷದ್ ನಾಯಿ ಬೆಲ್ಟ್ ಮತ್ತು ಮರದ ಕೋಲಿನಿಂದ ಥಳಿಸಲಾಗಿದೆ. ಗಾಯಾಳುವನ್ನು ಹಕೀಮ್ ಆತನ ಸ್ನೇಹಿತರ ಜತೆಗೆ ಆಸ್ಪತ್ರೆಗೆ ಕರೆದೊಯ್ದರು. ಅವರಿಬ್ಬರೂ ಉಳಿದುಕೊಂಡಿದ್ದ ಅವರ ಮನೆಯ ಮೇಲ್ಛಾವಣಿಯಿಂದ ತನ್ನ ಸೋದರ ಸಂಬಂಧಿ ಬಿದ್ದಿದ್ದಾನೆ ಎಂದು ಹೇಳಿದರು’’ ಎಂದು ಕೇರಳ ಪೊಲೀಸರು ಘಟನೆ ಬಗ್ಗೆ ವಿವರಿಸಿದರು.
ಆದರೂ, ಯುವಕನಿಗೆ ಕ್ರೂರವಾಗಿ ಥಳಿಸಲಾಗಿದೆ ಎಂದು ವೈದ್ಯರು ಖಚಿತವಾಗಿ ನಂಬಿದ್ದರು, ಏಕೆಂದರೆ ಅವನ ದೇಹದ ಮೇಲಿನ ಗುರುತುಗಳಿಂದ ಸ್ಪಷ್ಟವಾಗಿತ್ತು’’ ಎಂದೂ ಕೊಪ್ಪಂ ಪೊಲೀಸರು ಹೇಳಿದ್ದಾರೆ. ಥಳಿಸಲ್ಪಟ್ಟ ನಂತರ ಹರ್ಷದ್ ಗಾಯಗೊಂಡು ಮೃತಪಟ್ಟಿದ್ದಾನೆ. ಪಕ್ಕೆಲುಬು ಮುರಿತ ಮತ್ತು ಆಂತರಿಕ ರಕ್ತಸ್ರಾವವೇ ಆತನ ಸಾವಿಗೆ ಕಾರಣ ಎಂದೂ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಬೊಗಳಿತೆಂದು ನಾಯಿ ಹಾಗೂ ಮಾಲೀಕನ ಮೇಲೆ ಅಮಾನುಷ ಹಲ್ಲೆ: ಸಿಸಿಟಿವಿಯಲ್ಲಿ ದೃಶ್ಯ ಸೆರೆ