ಪೇಪರ್ ಓದುತ್ತಲೇ ಕುಸಿದುಬಿದ್ದು ಮೃತಪಟ್ಟ ಉದ್ಯಮಿ: CCTVಯಲ್ಲಿ ಸೆರೆ
ಗುಜರಾತ್‌ನ ಸೂರತ್‌ನಲ್ಲಿ ಗಾರ್ಮೆಂಟ್ ಉದ್ಯಮಿಯಾಗಿದ್ದ ದಿಲೀಪ್ ಕುಮಾರ್ ಮದನಿ ನವೆಂಬರ್ 4 ರಂದು ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ರಾಜಸ್ಥಾನದ ಬಾರ್ಮರ್‌ಗೆ ತೆರಳಿದ್ದರು. ನಂತರ, ನವೆಂಬರ್ 5 ರಂದು ಅವರು ಹಲ್ಲು ನೋವೆಂದು ಚೆಕಪ್ ಮಾಡಿಸಿಕೊಳ್ಳಲು ಕ್ಲಿನಿಕ್‌ಗೆ ಹೋದರು. ಆದರೆ, ಅವರು ಡಾಕ್ಟರ್ ಭೇಟಿ ಮಾಡುವ ಮೊದಲೇ ಕ್ಲಿನಿಕ್‌ನಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.
ಮನುಷ್ಯನಿಗೆ ಹೇಗೇಗೋ ಸಾವು ಬರುತ್ತೆ ಅನ್ನೋದಕ್ಕೆ ಒಂದು ಉತ್ತಮ ಉದಾಹರಣೆ ಹೀಗಿದೆ ನೋಡಿ. ಉದ್ಯಮಿಯೊಬ್ಬರು (Businessman) ನ್ಯೂಸ್‌ಪೇಪರ್ (NewsPaper) ಓದುತ್ತಲೇ ಕುಸಿದುಬಿದ್ದು (Collapse) ಮೃತಪಟ್ಟಿರುವ (Death) ಆಘಾತಕಾರಿ ಘಟನೆ ವರದಿಯಾಗಿದೆ. ರಾಜಸ್ಥಾನದಲ್ಲಿ (Rajasthan) ಈ ಘಟನೆ ನಡೆದಿದ್ದು, 61 ವರ್ಷದ ಉದ್ಯಮಿ ದಿಲೀಪ್ ಕುಮಾರ್ ಮದನಿ (Dilip Kumar Madani) ಕುಸಿದುಬಿದ್ದ ಕೆಲವೇ ಕ್ಷಣಗಳಲ್ಲಿ ಅವರು ಸಾವಿಗೀಡಾಗಿದ್ದಾರೆ. ಹಲ್ಲು ನೋವೆಂದು (Tooth Ache) ಕ್ಲಿನಿಕ್‌ಗೆ (Clinic) ಹೋಗಿದ್ದ ಅವರು ತಮ್ಮ ಸರದಿಗೆ ಕಾಯುತ್ತ ಪೇಪರ್ ಓದುತ್ತ ಕುಳಿತಿದ್ದರು. ಇದ್ದಕ್ಕಿದ್ದಂತೆ ಅವರು ಕುಸಿದುಬಿದ್ದು ಮೃತಪಟ್ಟಿದ್ದಾರೆ. ಕ್ಲಿನಿಕ್‌ನ ಸಿಸಿಟಿವಿಯಲ್ಲಿ (CCTV) ಈ ವಿಡಿಯೋ ಸೆರೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್ ಆಗಿದ್ದು, ಹಲವರ ಗಮನ ಸೆಳೆಯುತ್ತಿದೆ. ಹಲವರು ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಗುಜರಾತ್‌ನ ಸೂರತ್‌ನಲ್ಲಿ ಗಾರ್ಮೆಂಟ್ ಉದ್ಯಮಿಯಾಗಿದ್ದ ದಿಲೀಪ್ ಕುಮಾರ್ ಮದನಿ ನವೆಂಬರ್ 4 ರಂದು ಸಾಮಾಜಿಕ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಲು ರಾಜಸ್ಥಾನದ ಬಾರ್ಮರ್‌ಗೆ ತೆರಳಿದ್ದರು. ನಂತರ, ನವೆಂಬರ್ 5 ರಂದು ಅವರು ಹಲ್ಲು ನೋವೆಂದು ಚೆಕಪ್ ಮಾಡಿಸಿಕೊಳ್ಳಲು ಕ್ಲಿನಿಕ್‌ಗೆ ಹೋದರು. ಆದರೆ, ಅವರು ಡಾಕ್ಟರ್ ಭೇಟಿ ಮಾಡುವ ಮೊದಲೇ ಕ್ಲಿನಿಕ್‌ನಲ್ಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾರೆ.
ಇದನ್ನು ಓದಿ: ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತ ಆಗೋದು ಯಾಕೆ ?
ಕ್ಲಿನಿಕ್‌ನ ಸಿಬ್ಬಂದಿ ಆ ಉದ್ಯಮಿಯನ್ನು ನಹಾತಾ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರು ಆಸ್ಪತ್ರೆಗೆ ಹೋಗುವಷ್ಟರಲ್ಲಿ ಮೃತಪಟ್ಟಿದ್ದರು ಎಂದು ವೈದ್ಯರು ತಿಳಿಸಿದ್ದಾರೆ. ಇನ್ನು, ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ ಕ್ಲಿನಿಕ್ ಮಾಲೀಕ ಡಾ. ಕಪಿಲ್ ಜೈನ್, ನಾನು ಮೊದಲು ದಿಲೀಪ್ ಕುಮಾರ್ ಮದನಿ ಅವರ ಕುಟುಂಬದ ಜತೆ ಮಾತನಾಡದೆ ಈ ಬಗ್ಗೆ ಏನನ್ನೂ ಹೇಳುವುದಿಲ್ಲ. ಅವರು ಹೃದಯಾಘಾತಕ್ಕೊಳಗಾದರು ಎಂದು ನನಗೆ ಹೇಳಲಾಯಿತು ಹಾಗೂ ನಮ್ಮ ಸಿಬ್ಬಂದಿ ಅವರನ್ನು ಟ್ಯಾಕ್ಸಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು ಎಂದೂ ಅವರು ಹೇಳಿದ್ದಾರೆ.
ಮದನಿಗೆ ಇಬ್ಬರು ಗಂಡು ಮಕ್ಕಳಿದ್ದು, ಹಾಗೂ ಒಬ್ಬರು ಮಗಳಿದ್ದು, ಅವರು ಉದ್ಯಮವನ್ನು ನೋಡಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಉದ್ಯಮಿಯ ಕುಟುಂಬ ರಾಜಸ್ಥಾನದ ಬಾರ್ಮರ್‌ನ ಪಚಪದ್ರಗೆ ಸೇರಿದ್ದು, ಅವರು ಆ ಗ್ರಾಮಕ್ಕೆ ಹಲವು ಸಂದರ್ಭಗಳಲ್ಲಿ ಭೇಟಿ ನೀಡುತ್ತಿರುತ್ತಾರೆ ಎಂದು ಹೇಳಲಾಗಿದೆ.
ಇನ್ನು, ಉದ್ಯಮಿಯ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರ ಸಹೋದರ, ಶನಿವಾರ ಬೆಳಗ್ಗೆ ಅವರು ಚೆನ್ನಾಗೇ ಇದ್ದರು. ಸಾವಿಗೆ ಕಾರಣವೇನೆಂದು ತಿಳಿದುಬಂದಿಲ್ಲ, ಹೃದಯಾಘಾತವಾಗಿರಬಹುದು. ಈ ಘಟನೆ ಬಗ್ಗೆ ತಿಳಿದುಬಂದ ನಂತರ ಉದ್ಯಮಿಯ ಕುಟುಂಬವೂ ಬಾರ್ಮರ್‌ಗೆ ಬಂದಿದೆ. ಶನಿವಾರ ಅವರ ಅಂತ್ಯಕ್ರಿಯೆ ನಡೆಸಲಾಯಿತು ಎಂದು ದಿಲೀಪ್ ಕುಮಾರ್ ಮದನಿ ಅವರ ಸಹೋದರ ಮಹೇಂದ್ರ ಮದನಿ ತಿಳಿಸಿದ್ದಾರೆ.
ಇದನ್ನೂ ಓದಿ: Smartwatch ನಿಂದ ಕರೆ ಮಾಡಿ ಜಿಮ್‌ನಲ್ಲಿ ಜೀವ ಉಳಿಸಿಕೊಂಡ ಮಹಿಳೆ
ಕಳೆದ ತಿಂಗಳಷ್ಟೇ ಜಿಮ್ ಟ್ರೈನರ್ ಚೇರ್ ಮೇಲೆ ಕುಳಿತುಕೊಂಡು ಹಾಗೇ ಕುಸಿದುಬಿದ್ದು ಹೃದಯಾಘಾತಕ್ಕೊಳಗಾದ ಘಟನೆಯ ಶಾಕಿಂಗ್ ವಿಡಿಯೋ ವೈರಲ್ ಆಗಿತ್ತು. ಅವರನ್ನು 33 ವರ್ಷದ ಆದಿಲ್ ಎಂದು ಗುರುತಿಸಲಾಗಿತ್ತು. ಆದಿಲ್‌ರನ್ನು ಅವರ ಸಹಾಯಕರು ಹತ್ತಿರದ ಆಸ್ಪತ್ರೆಗೆ ಸೇರಿಸಲಾಯಿತಾದರೂ, ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದರು. ಉತ್ತರ ಪ್ರದೇಶದ ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್ ಪ್ರದೇಶದಲ್ಲಿ ಅವರು ಜಿಮ್ ಅನ್ನು ಇಟ್ಟುಕೊಂಡಿದ್ದರು ಹಾಗೂ ಪ್ರತಿದಿನ ವ್ಯಾಯಾಮ ಮಾಡುತ್ತಿದ್ದರು ಎಂದು ತಿಳಿದುಬಂದಿತ್ತು. ಈಗ ರಾಜಸ್ಥಾನದಲ್ಲಿ, ಮತ್ತೆ ಅಂತದ್ದೇ ಘಟನೆ ವರದಿಯಾಗಿದ್ದು, ವಿಡಿಯೋ ಸೆರೆಯಾಗಿರುವುದು ನಿಜಕ್ಕೂ ಆಘಾತ ಮೂಡಿಸಿದೆ.