Asianet Suvarna News

ವಿಷಸರ್ಪದಿಂದ ಕಚ್ಚಿಸಿ ಹೆಂಡತಿ ಕೊಲೆ, ಹಾವು ತಂದಿದ್ದಾದರೂ ಹೇಗೆ?

ಹೆಂಡತಿಯನ್ನು ದಾರುಣ ಹತ್ಯೆ ಮಾಡಿದ ಗಂಡ/ ಕೊಲೆಗೆ ಬಳಸಿದ್ದು ಹಾವು/ 10 ಸಾವಿರ ಕೊಟ್ಟು 2 ಹಾವು ಖರೀದಿಸಿದ್ದ/ ಪೊಲೀಸರ ವಿಚಾರಣೆ  ವೇಳೆ ಸತ್ಯ ಬಹಿರಂಗ

Kerala man kills wife with cobra Investigation team finds evidence
Author
Bengaluru, First Published May 25, 2020, 2:51 PM IST
  • Facebook
  • Twitter
  • Whatsapp

ಕೋಲಂ(ಮೇ 25)  ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಕತೆ ಇದು. ಕೇರಳದ ಈ ವರದಿ ಒಂದು ಕ್ಷಣ ಬೆಚ್ಚಿ ಬೀಳಿಸುತ್ತದೆ.

ಸೂರಜ್ ನನ್ನು ಪೊಲೀಸರು ಆತನ ಹೆಂಡತಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಬಂಧಿಸಿದ್ದಾರೆ. . ಸಾಕ್ಷ್ಯಗಳ ಪರಿಶೀಲನೆಗೆ  ಮನೆಗೆ ಕರೆದೊಯ್ದಿದ್ದಾರೆ.  ಹಾವನ್ನು ಬಳಸಿ ಹೆಂಡತಿಯನ್ನು ಭೀಕರವಾಗಿ ಕೊಲೆ ಮಾಡಿದ ಆರೋಪ ಸೂರಜ್ ಮೇಲಿದೆ. ಹಾವನ್ನು ತೆಗೆದುಕೊಂಡ ಬಂದ್ ಜಾರ್ ಪತ್ತೆ ಮಾಡಲಾಗಿದ್ದು ಪೋರೆನ್ಸಿಕ್ ಲ್ಯಾಬ್ ಗೆ ಕಳುಹಿಸಿಕೊಡಲಾಗಿದೆ.

ಭಾನುವಾರ ತಡರಾತ್ರಿ ಆರೋಪಿಯನ್ನು ಬಂಧಿಸಲಾಗಿದೆ.   ಹೆಂಡತಿ ಊತ್ರಾ ರನ್ನು ಕೊಲೆ ಮಾಡಿದ್ದ ಆರೋಪಿಯನ್ನು ಮನೆಗೆ ಕರೆದುಕೊಂಡು ಹೋದಾಗ ಹೆಂಡತಿ ತವರು ಮನೆಯವರು ಆತನ ಪ್ರವೇಶಕ್ಕೆ ಪ್ರತಿಭಟನೆ ವ್ಯಕ್ತಪಡಿಸಿದರು. ಇದೆಲ್ಲದರ ನಡುವೆ ಪೊಲೀಸರು ಸಾಕ್ಷ್ಯ ಸಂಗ್ರಹ ಮಾಡಿದ್ದಾರೆ.

ಮಿಲನದ ಬಳಿಕ  ಸಂಗಾತಿಯನ್ನೇ ತಿನ್ನುವ ಕಾಳಿಂಗ, ಕಾರಣ ಏನು?

ಹಾವು ಕಚ್ಚಿ ಮೇ 7 ರಂದು ಉತ್ರಾ ಸಾವನ್ನಪ್ಪಿದ್ದರು. ಇದಾದ ಮೇಲೆ ಪೊಲೀಶರು ವಿಚಾರಣೆ ನಡೆಸಿದಾಗ ಹೆಂಡತಿಯನ್ನು ಕೊಲೆ ಮಾಡಿದ್ದಾಗಿ ಸೂರಜ್  ಒಪ್ಪಿಕೊಂಡಿದ್ದ. 10 ಸಾವಿರ ರೂ. ಕೊಟ್ಟು ಎರಡು ಹಾವು ತಂದಿದ್ದಾಗಿಯೂ ಹೇಳಿದ್ದ. ಮೇ 2 ರಂದೇ ಕೊಲೆ ಮಾಡಲು ಯತ್ನ ಮಾಡಿದ್ದ ಆದರೆ ಹಾವು ಕೈಕೊಟ್ಟಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಸೂರಜ್ ನ ಇಬ್ಬರು ಸಹಚರರನ್ನು ವಶಕ್ಕೆ ಪಡೆಯಲಾಗಿದೆ. ಯೂ ಟ್ಯೂಬ್ ಮೂಲಕ ಹಾವನ್ನು ಬಳಸಿ ಹೇಗೆ ಕೊಲೆ ಮಾಡಬಹುದು ಎಂಬುದನ್ನು ಸೂರಜ್ ನೋಡಿ ತಿಳಿದುಕೊಂಡಿದ್ದ ಎಂಬ ಸಂಗತಿಯೂ ವಿಚಾರಣೆ ವೇಳೆ ಗೊತ್ತಾಗಿದೆ.

ಇಂಗ್ಲಿಷ್ ನಲ್ಲಿಯೂ ಓದಿ

 

 

Follow Us:
Download App:
  • android
  • ios