Asianet Suvarna News Asianet Suvarna News

ಜೋಶಿಮಠ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ಹೊತ್ತೊಯ್ಯುತ್ತಿದ್ದ ಕೇರಳ ಮೂಲದ ಪಾದ್ರಿ ಕಮರಿಗೆ ಬಿದ್ದು ಸಾವು..!

ಮೂವರು ತಾವು ಹೋಗಬೇಕಿದ್ದ ಸ್ಥಳ ಸಮೀಪಿಸುತ್ತಿದ್ದಂತೆ, ವಾಹನವು ಕಲ್ಲಿನ, ಹಿಮದಿಂದ ಆವೃತವಾದ ರಸ್ತೆಯನ್ನು ಪ್ರವೇಶಿಸಿತು ಮತ್ತು ಜೀಪ್ ಅಲ್ಲೇ ಸಿಲುಕಿಕೊಂಡಿತು. ಸಿಕ್ಕಿಬಿದ್ದ ಜೀಪನ್ನು ರಕ್ಷಿಸುವ ಪ್ರಯತ್ನದ ವೇಳೆ ದುರಂತ ಸಂಭವಿಸಿದೆ ಎಂದೂ ಸುದ್ದಿ ವರದಿ ತಿಳಿಸಿದೆ.

kerala church father who drove 300km with relief items for joshimath victims dies in accident body recovered ash
Author
First Published Jan 22, 2023, 12:54 PM IST

ಜೋಶಿಮಠ (ಜನವರಿ 22, 2023): ಉತ್ತರಾಖಂಡದ ಜೋಶಿಮಠ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಮನೆಗಳು, ರಸ್ತೆಗಳು ಹಾಗೂ ಇತರೆ ಕಟ್ಟಡಗಳು ತೀವ್ರ ಬಿರುಕು ಬಿದ್ದಿವೆ. ಈ ಹಿನ್ನೆಲೆ  ವಿಪತ್ತು ಪೀಡಿತ ಜೋಶಿಮಠಕ್ಕೆ ತೆರಳುತ್ತಿದ್ದ ಮಲಯಾಳಿ ಪಾದ್ರಿ ತಮ್ಮ ವಾಹನ ಕಮರಿಗೆ ಬಿದ್ದು ಗುರುವಾರ ಮೃತಪಟ್ಟಿದ್ದಾರೆ. ಕೇರಳದ ಕೋಯಿಕ್ಕೋಡ್ ಜಿಲ್ಲೆಯ ಚಕ್ಕಿತ್ತಪಾರ ಮೂಲದ ಫಾದರ್ ಮೆಲ್ವಿನ್ ಅಬ್ರಹಾಂ ಪಲ್ಲಿತಳತು (37) ಅವರು ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿದ್ದರು. ಮತ್ತು ಪರಿಹಾರ ಸಾಮಗ್ರಿಗಳೊಂದಿಗೆ ಸ್ವಂತವಾಗಿ ಸುಮಾರು 300 ಕಿಲೋಮೀಟರ್ ಪ್ರಯಾಣಿಸಿದ್ದರು ಎಂದು ತಿಳಿದುಬಂದಿದೆ.

ಚರ್ಚ್‌ ಫಾದರ್‌ (Church Father) ಮೆಲ್ವಿನ್ ಅಬ್ರಹಾಂ ಪಲ್ಲಿತಳತು ಬುಧವಾರ ಬೆಳಗ್ಗೆ ಉತ್ತರಾಖಂಡದ (Uttarakhand) ಕೋಟ್‌ದ್ವಾರದಿಂದ (Kotdwar) ಜೋಶಿಮಠಕ್ಕೆ (Joshimath) 300 ಕಿಲೋಮೀಟರ್‌ಗಳ ಏಕಾಂಗಿ ಪ್ರಯಾಣವನ್ನು (Solo Journey) ತಮ್ಮ ಜೀಪ್‌ನಲ್ಲಿ (Jeep) ಪ್ರಾರಂಭಿಸಿದ್ದರು. ನಂತರ ಗುರುವಾರ ಬೆಳಗ್ಗೆ ಜೋಶಿಮಠದ ಪಾದ್ರಿಗಳ ಮನೆಯಲ್ಲಿ ಮತ್ತೊಬ್ಬ ಪಾದ್ರಿ ಮತ್ತು ಪರಿಚಯಸ್ಥರು ಅವರೊಂದಿಗೆ ಸೇರಿಕೊಂಡರು ಎಂದು ಕೇರಳದ ಮಾಧ್ಯಮ ವರದಿ ಮಾಡಿದೆ. ಅಲ್ಲದೆ, ಈ ಮೂವರು ತಾವು ಹೋಗಬೇಕಿದ್ದ ಸ್ಥಳ ಸಮೀಪಿಸುತ್ತಿದ್ದಂತೆ, ವಾಹನವು ಕಲ್ಲಿನ, ಹಿಮದಿಂದ ಆವೃತವಾದ ರಸ್ತೆಯನ್ನು ಪ್ರವೇಶಿಸಿತು ಮತ್ತು ಜೀಪ್ ಅಲ್ಲೇ ಸಿಲುಕಿಕೊಂಡಿತು. ಸಿಕ್ಕಿಬಿದ್ದ ಜೀಪನ್ನು ರಕ್ಷಿಸುವ ಪ್ರಯತ್ನದ ವೇಳೆ ದುರಂತ ಸಂಭವಿಸಿದೆ ಎಂದೂ ಸುದ್ದಿ ವರದಿ ತಿಳಿಸಿದೆ.

ಇದನ್ನು ಓದಿ: ಪ್ರತಿ ವರ್ಷ ಜೋಶಿಮಠ 6.5 ಸೆ.ಮೀ. ಕುಸಿತ: ಚಂಬಾದಲ್ಲೂ ಭೂಮಿ ಬಿರುಕು, ಕುಸಿತ ಭೀತಿ

ತನ್ನ ಸಂಗಡಿಗರನ್ನು ಕೆಳಗಿಳಿಸಿ ತನಗೆ ಸೂಚನೆ ನೀಡುವಂತೆ ಹೇಳಿದ ನಂತರ, ಫಾದರ್ ಮೆಲ್ವಿನ್ ಜೀಪನ್ನು ಮತ್ತೆ ಕಮರಿ ಕಡೆಗೆ ಓಡಿಸಿದರು. ವಾಹನವನ್ನು ಮುಂದೆ ಹೋಗದಂತೆ ತಡೆಯಲು ಸಹ ಪ್ರಯಾಣಿಕರು ರಸ್ತೆಯ ಕೊನೆಯಲ್ಲಿ ಕಲ್ಲುಗಳನ್ನು ಹಾಕಿದ್ದರೂ, ವಾಹನವು ಅದನ್ನು ದಾಟಿ ಕಮರಿಗೆ (Gorge) ಬಿದ್ದಿತು. ಸ್ವತಃ ಫಾದರ್ ಮೆಲ್ವಿನ್ ಅವರೇ ರಸ್ತೆಯ ಕೊನೆಯಲ್ಲಿ ಕಲ್ಲುಗಳನ್ನು ಇಡಲು ಹೇಳಿದ್ದರು ಎಂದೂ ಕೇರಳದ ಮಾಧ್ಯಮಗಳು ವರದಿ ಮಾಡಿವೆ. ಹವಾಮಾನ ವೈಪರೀತ್ಯದಿಂದಾಗಿ ರಕ್ಷಣಾ ಕಾರ್ಯಗಳು ವಿಳಂಬವಾಗಿದ್ದು, ಗುರುವಾರ ರಾತ್ರಿ ಪಾದ್ರಿಯ ಮೃತದೇಹ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಅಲ್ಲದೆ, ಈ ಅವಘಡದ ದಿನ ಕೇರಳದ ಪಾದ್ರಿ ಫೇಸ್‌ಬುಕ್‌ನಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋವನ್ನು ಅಪ್‌ಲೋಡ್‌ ಮಾಡಿದ್ದರು. ನಾನು ಇಲ್ಲಿಂದ ಸುಮಾರು ಬೆಳಗ್ಗೆ 10:00 ಗಂಟೆಗೆ (ಪ್ರಯಾಣ) ಪ್ರಾರಂಭಿಸಿದೆ. ನಾನು ಪರಿಹಾರ ಸಾಮಗ್ರಿಗಳಿಂದ ತುಂಬಿದ ವಾಹನದೊಂದಿಗೆ ಪರ್ವತಗಳನ್ನು ಏರುತ್ತಿದ್ದೇನೆ. ಬೆಳಿಗ್ಗೆ ಬಿಸಿಲು, ಮತ್ತು ಹವಾಮಾನವು ಮಂಜು ಇಲ್ಲದೆ ಆಹ್ಲಾದಕರವಾಗಿರುತ್ತದೆ. ಎಲ್ಲಾ ಒಳ್ಳೆಯದು ಮತ್ತು ಸಂತೋಷವಾಗಿದೆ’’ ಎಂದು ಫಾದರ್ ಮೆಲ್ವಿನ್ ತಮ್ಮ ಪ್ರಯಾಣದ ಆರಂಭದಲ್ಲಿ ರೆಕಾರ್ಡ್‌ ಮಾಡಿದ ವಿಡಿಯೋದಲ್ಲಿ ಹೇಳಿದ್ದರು. 

ಇದನ್ನೂ ಓದಿ: Joshimath Sinking: 12 ದಿನಗಳಲ್ಲಿ 5.4 ಸೆಂಟಿಮೀಟರ್‌ ಕುಸಿದ ಜೋಶಿಮಠ, ಇಸ್ರೋ ಸ್ಯಾಟಲೈಟ್‌ ಇಮೇಜ್‌!

ಉತ್ತರಾಖಂಡದ ಜೋಶಿ ಮಠ ಹಾಗೂ ಕೆಲ ಸುತ್ತಮುತ್ತಲ ಜಿಲ್ಲೆಗಳಲ್ಲಿ ಭೂ ಕುಸಿತದಿಂದಾಗಿ ವಸತಿ ರಚನೆಗಳಲ್ಲಿ ದೊಡ್ಡ ಬಿರುಕುಗಳು ಉಂಟಾಗಿವೆ. ಈ ಹಿನ್ನೆಲೆ ಜೋಶಿಮಠದಲ್ಲಿ ಒಟ್ಟು 2,190 ಮತ್ತು ಪಿಪ್ಪಲಕೋಟಿಯಲ್ಲಿ 2,205 ಜನರನ್ನು ತಾತ್ಕಾಲಿಕ ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ. 

ಇದನ್ನೂ ಓದಿ: ಜೋಶಿಮಠದ ಜತೆಗೆ ಉತ್ತರಾಖಂಡದ ಕರ್ಣಪ್ರಯಾಗದಲ್ಲೂ ಕುಸಿತ ಭೀತಿ: 50 ಮನೆಗಳಲ್ಲಿ ಬಿರುಕು

Follow Us:
Download App:
  • android
  • ios