Asianet Suvarna News Asianet Suvarna News

ಚೆನ್ನೈ ಶಾಲೆಯಲ್ಲಿ 10ನೇ ತರಗತಿ ವಿದ್ಯಾರ್ಥಿ ಮೇಲೆ ಲೈಂಗಿಕ ದೌರ್ಜನ್ಯ!


ತನಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೆ ತನ್ನ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಬಾಲಕ ವಿವರಿಸಿದ್ದಾನೆ. ತಕ್ಷಣವೇ ವೈದ್ಯರು ನಿಯಮದಂತೆ ಪೊಲೀಸರಿಗೆ ಈ ಕುರಿತಾದ ಮಾಹಿತಿ ನೀಡಿದ್ದಾರೆ.
 

Kendriya Vidyalaya in Chennai 10th class Student sexually harassed bullied by classmates san
Author
First Published Nov 25, 2022, 4:33 PM IST

ಚೆನ್ನೈ (ನ.25): 15 ವರ್ಷದ 10ನೇ ತರಗತಿಯ ವಿದ್ಯಾರ್ಥಿಯೊಬ್ಬನಿಗೆ ಆತನ ಸಹಪಾಠಿಗಳೇ ಲೈಂಗಿಕವಾಗಿ ದೌರ್ಜನ್ಯ ನೀಡುತ್ತಿದ್ದ ಘಟನೆ ವರದಿಯಾಗಿದೆ. ಚೆನ್ನೈನ ಕೇಂದ್ರೀಯ ವಿದ್ಯಾಲಯದಲ್ಲಿ ಓಡುತ್ತಿದ್ದ ಹುಡುಗನಿಗೆ ಹೊಟ್ಟೆನೋವು, ತಲೆಸುತ್ತು ಮತ್ತು ಮೈಕೈ ನೋವಿನಿಂದ ಬಳಲುತ್ತಿದ್ದ ಹಿನ್ನಲೆಯಲ್ಲಿ ಆತನನ್ನು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರದಿಂದ ಚಿಕಿತ್ಸೆ ಪಡೆಯುತ್ತಿದ್ದರು. ಶಾಲೆಯಲ್ಲಿ ತನ್ನ ಮೇಲೆ ಆಗುತ್ತಿರುವ ಲೈಂಗಿಕ ದೌರ್ಜನ್ಯದ ಕುರಿತಾಗಿ ಚಿಕಿತ್ಸೆ ನೀಡುವ ವೈದ್ಯರ ಬಳಿ ಹೇಳಿದ್ದ. ವೈದ್ಯರು ತಕ್ಷಣವೇ ನಿಯಮದ ಅಡಿಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇನ್ನು ಶಾಲೆಯ ಆಡಳಿತ ಮಂಡಳಿಗೆ ಹುಡುಗನ ಪಾಲಕರು ಎರಡು ದಿನಗಳ ಹಿಂದೆ ಲಿಖಿತ ದೂರು ನೀಡಿದ್ದಾರೆ. ಮಗನಿಗೆ ಕ್ಯಾಂಪಸ್‌ನಲ್ಲಿ ಕಿರುಕುಳ ನೀಡಲಾಗುತ್ತಿದೆ ಎಂದು ದೂರಿನಲ್ಲಿ ಹೇಳಲಾಗಿದೆ.

ನಾಲ್ಕು ತಿಂಗಳ ಹಿಂದೆಯಷ್ಟೇ ಪಾಂಡಿಚೇರಿಯ ಕೇಂದ್ರೀಯ ವಿದ್ಯಾಲಯದಿಂದ ಚೆನ್ನೈನ ಕೇಂದ್ರೀಯ ವಿದ್ಯಾಲಯಕ್ಕೆ ವರ್ಗಾವಣೆ ಮಾಡಿದ್ದೆವು. ಶಾಲೆಗೆ ಸೇರಿದ ಸುಮಾರು ಒಂದು ತಿಂಗಳ ನಂತರ, ಮಗ ಈ ಕುರಿತಾಗಿ ನಮ್ಮಲ್ಲಿ ದೂರು ಹೇಳಿಕೊಳ್ಳುತ್ತಿದ್ದ. ಶಾಲೆಯಲ್ಲಿ ಇತರ ವಿದ್ಯಾರ್ಥಿಗಳು ನಾನು ಅಶ್ಲೀಲ ಶಬ್ದಗಳನ್ನು ಮಾತಾಡಬೇಕು, ಅಶ್ಲೀಲವಾಗಿ ಮಾತನಾಡಬೇಕು ಎನ್ನುತ್ತಿದ್ದರು ಅದಕ್ಕಾಗಿ ಅವರು ನನ್ನನ್ನು ಗುರಿಯಾಗಿಸಿಕೊಂಡಿದ್ದರು ಮಾತನಾಡದೇ ಇದ್ದಾಗ ನನ್ನ ಹೊಟ್ಟೆಗೆ, ತಲೆ, ಮತ್ತು ತೊಡೆಯ ಭಾಗಕ್ಕೆ ಘಾಸಿ ಮಾಡಿದ್ದಾರೆ. ಶಾಲೆಯ ರೆಸ್ಟ್‌ ರೂಮ್‌ನಲ್ಲಿ ನನ್ನನ್ನು ಕೂಡಿಹಾಕಿ, ಹುಡುಗನೊಬ್ಬನನ್ನು ಮುಟ್ಟುವಂತೆ ಹೇಳುತ್ತಿದ್ದರು' ಎಂದು ಬಾಲಕನ ತಂದೆ ಹೇಳಿದ್ದಾರೆ.

ಎರಡು ದಿನಗಳ ಹಿಂದೆ, ನಾನು ಈ ಕುರಿತಾಗಿ ದೂರು ನೀಡಿದ್ದೇವೆ. ನನ್ನ ಮಗ ಈ ಕುರಿತಾಗಿ ನನ್ನ ಬಳಿ ಎಂದೂ ಹೇಳಿಕೊಂಡಿರಲಿಲ್ಲ. ಹಾಗಾಗಿ ತಡವಾಗಿ ನಾನು ದೂರು ನೀಡಿದ್ದೇವೆ. ಇಂಥ ಶಾಲೆಗಳಲ್ಲಿ ಒಬ್ಬ ವಿದದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿಗೆ ಈ ರೀತಿಯಲ್ಲಿ ಚಿತ್ರಹಿಂಸೆ ನೀಡುತ್ಥಾರೆ ಎಂದಾದಲ್ಲಿ, ಅವರ ಪಾಲಕರು ಮಗುವನ್ನು ಹೇಗೆ ಬೆಳೆಸಿರಬೇಕು ಅನ್ನೋದು ಗಿತ್ತಾಗಿತ್ತದೆ. ಶಾಲೆಗಳಲ್ಲಿ ಅವರಿಗೆ ಯಾವುದೇ ರೀತಿಯಲ್ಲಿ ಕೌನ್ಸೆಲಿಂಗ್‌ ನೀಡಲಾಗುದಿಲ್ಲವೇ? ಮಗುವಿಗೆ ಹೊಡೆಯುತ್ತಾರೆ. ಲೈಂಗಿಕವಾಗಿ ಹಿಂಸೆ ಮಾಡುತ್ತಾರೆ. ಆತನ ಆಹಾರವನ್ನು ಕದಿಯುತ್ತಾರೆ. ಬೆದರಿಕೆ ಹಾಕುತ್ತಾರೆ ಎನ್ನುವುದನ್ನು ಕೇಳಲು ಕೂಡ ಬೇಸರವಾಗುತ್ತದೆ ಎಂದಿದ್ದಾರೆ.

ಅದಲ್ಲದೆ, ರೆಸ್ಟ್‌ರೂಮ್‌ನಲ್ಲಿ ಹುಡುಗನ ಬಟ್ಟೆಯನ್ನು ಬಿಚ್ಚಿಸಿದ್ದಲ್ಲದೆ, ಹಸ್ತಮೈಥುನ ಮಾಡುವಂತೆ ಹೇಳಿದ್ದಾರೆ. ಇದಕ್ಕೆ ನನ್ನ ಮಗ ವಿರೋಧಿಸಿದ್ದಾನೆ. ಆಗ ಅವರು ಮತ್ತೆ ಹೊಡೆದಿದ್ದಾರೆ. ಮಗನಿಗೆ ಶಾಲೆಗೆ ಹೋಗಲು ಭಯವಾಗಿತ್ತು ಮತ್ತು ಒಂದು ತಿಂಗಳ ಹಿಂದೆ ಅವನು ತನ್ನ ಶಿಕ್ಷಕರಿಗೆ ಆರಂಭದಲ್ಲಿ ಮೌಖಿಕ ದೂರು ನೀಡಿದ್ದ ಎಂದು ಅವರು ಹೇಳಿದ್ದಾರೆ. ಆದರೆ, ಮೌಖಿಕ ದೂರು ಕೊಟ್ಟ ದಿನದಿಂದ ಪರಿಸ್ಥಿತಿ ಇನ್ನಷ್ಟು ಹದಗೆಟ್ಟಿತ್ತು. ಇನ್ನೊಮ್ಮೆ ಇಂಥ ದೂರು ದಾಖಲಾದರೆ ಕೊಲ್ಲುತ್ತೇವೆ ಎಂದು ಬೆದರಿಕೆ ಹಾಕಿದ್ದರು ಎಂದಿದ್ದಾರೆ.

Bengaluru: ಮಗುವಿನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಂದವನಿಗೆ ಮರಣದಂಡನೆ

ಶಾಲೆಗೆ ಸೇರಿದ ಮೂರನೇ ದಿನದಿಂದಲೇ ಮಗನ ಮೇಲೆ ದೈಹಿಕವಾಗಿ ಹಾಗೂ ಲೈಂಗಿಕವಾಗಿ ಹಲ್ಲೆ ಮಾಡಲಾಗುತ್ತಿತ್ತು. ಈ ಕುರಿತಾಗು ಎರಡು ತಿಂಗಳ ಹಿಂದೆಯೇ ಕ್ಲಾಸ್‌ ಟೀಚರ್‌ಗೆ ದೂರು ನೀಡಿದ್ದೆ. ಆದರೆ ದೈಹಿಕ ಕಿರುಕುಳ, ಲೈಂಗಿಕ ಕಿರುಕುಳ ಮತ್ತು ಆತ್ಮಹತ್ಯೆಗೆ ಪ್ರಚೋದನೆಯನ್ನು ಅವರ ಕೆಲವು ಸಹಪಾಠಿಗಳು ಮತ್ತು 11 ನೇ ತರಗತಿಯ ವಿದ್ಯಾರ್ಥಿಗಳು ಮಾಡಿದ್ದಾರೆ ಎಂದು ಪೋಷಕರು ತಮ್ಮ ಲಿಖಿತ ದೂರಿನಲ್ಲಿ ತಿಳಿಸಿದ್ದಾರೆ.

ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪಿ ದೋಷಿ: ಉಡುಪಿ ಕೋರ್ಟ್

ಹುಡುಗನಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು, ಆತನಿಗೆ ಸಾಕಷ್ಟು ಆಂತರಿಕ ಗಾಯಗಳಾಗಿದೆ ಎಂದಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಸ್ತುತ ಐಸಿಯುನಲ್ಲಿ ಆತನ ಚಿಕಿತ್ಸೆ ನಡೆಯುತ್ತಿದೆ ಎಂದು ಹುಡುಗನ ತಂದೆ ಹೇಳಿದ್ದಾರೆ.ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ. ಆದರೆ, ಪೋಷಕರಿಂದಾಗಲಿ, ಶಾಲಾ ಆಡಳಿತ ಮಂಡಳಿಯಿಂದಾಗಲಿ ಇದುವರೆಗೆ ಪೊಲೀಸರಿಗೆ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ.

Follow Us:
Download App:
  • android
  • ios