ಕೆಇಎ ಪರೀಕ್ಷೆ ಹಗರಣ, ಕಿಂಗ್ ಪಿನ್ ಆರ್ ಡಿ ಪಾಟೀಲ್ ಮಹಾರಾಷ್ಟ್ರದಲ್ಲಿ ಬಂಧನ
ಕೆಇಎ ನೇಮಕಾತಿಯ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೊನೆಗೂ ಬಂಧನ ವಾಗಿದೆ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಾಟೀಲ್ ಅನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ.
ಬೆಂಗಳೂರು (ನ.10): ಕೆಇಎ ನೇಮಕಾತಿ ಯ ಎಫ್‌ಡಿಎ ಪರೀಕ್ಷೆಯಲ್ಲಿನ ಅಕ್ರಮ ಪ್ರಕರಣದ ಪ್ರಮುಖ ಕಿಂಗ್ ಪಿನ್ ಆರ್ ಡಿ ಪಾಟೀಲ್ ಕೊನೆಗೂ ಬಂಧನ ವಾಗಿದೆ. 12 ದಿನಗಳ ಕಾಲ ತಲೆಮರೆಸಿಕೊಂಡಿದ್ದ ಪಾಟೀಲ್ ಅನ್ನು ಮಹಾರಾಷ್ಟ್ರದಲ್ಲಿ ಬಂಧಿಸಲಾಗಿದೆ. ಪ್ರಮುಖ ಆರೋಪಿ ಆರ್ ಡಿ ಪಾಟೀಲ್ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿ ತಿರಸ್ಕೃತಗೊಂಡಿತ್ತು.
ಕೆಇಎ ಪರೀಕ್ಷಾ ಅಕ್ರಮ: ಅಕ್ರಮಕ್ಕೆಂದೇ ಹೊಸ ಮೊಬೈಲ್ ಖರೀದಿ, ಸಿಮ್ ಕಾರ್ಡ್ ಹಾಕದೆ ವೈಫೈ ಬಳಕೆ
12 ದಿನಗಳಿಂದ ತಲೆಮರೆಸಿಕೊಂಡಿದ್ದ ಆರ್. ಡಿ. ಪಾಟೀಲ್ ಮಹಾರಾಷ್ಟ್ರದಲ್ಲಿ ಪೊಲೀಸ್ ಬಲೆಗೆ ಬಿದ್ದಿದ್ದಾನೆ. 3 ದಿನದ ಹಿಂದೆ ಕಲಬುರಗಿಯಿಂದ ಎಸ್ಕೇಪ್ ಆಗಿದ್ದ. ವರದಾ ಅಪಾರ್ಟ್ಮೆಂಟ್ನಿಂದ ಪರಾರಿಯಾಗಿದ್ದ ಬಗ್ಗೆ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಮಹಾರಾಷ್ಟ್ರ ಮತ್ತು ಕರ್ನಾಟಕ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಈ ಬಂಧನವಾಗಿದೆ.
ಕೆಇಎ ಪರೀಕ್ಷಾ ಅಕ್ರಮ ರಾಜ್ಯಾದ್ಯಂತ ವ್ಯಾಪಿಸಿರೋ ಶಂಕೆ: ಸಚಿವ ಪ್ರಿಯಾಂಕ್ ಖರ್ಗೆ
ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ಅ.28 ರಂದು ನಡೆಸಿದ್ದ ಎಫ್‌ಡಿಎ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ಬೆಳಕಿಗೆ ಬಂದಿತ್ತು. ಅಕ್ರಮ ಆರೋಪದಡಿ ಯಾದಗಿರಿಯಲ್ಲಿ ಬಂಧಿತ ಕಲಬುರಗಿ ಜಿಲ್ಲೆಯ ಅಫಜಲ್ಪುರ ಹಾಗೂ ವಿಜಯಪುರ ಜಿಲ್ಲೆ ಸಿಂದಗಿ ಮೂಲದ 9 ಅಭ್ಯರ್ಥಿಗಳನ್ನು ಹೆಚ್ಚಿನ ವಿಚಾರಣೆಗೆಂದು ಪೊಲೀಸರು ಕಸ್ಟಡಿಗೆ ಪಡೆದಿದ್ದರು, ಸ್ಥಳ ಮಹಜರಿಗೆ ಕರೆದುಕೊಂಡು ಹೋದಾಗ ಅಕ್ರಮಕ್ಕೆ ಎರಡ್ಮೂರು ದಿನಗಳ ಮೊದಲೇ ಬ್ಲೂಟೂತ್ ಡಿವೈಸ್‌ಗಳನ್ನು ಹಂಚಿಕೆ ಮಾಡಲು ಕಬ್ಬಿನ ಗದ್ದೆಗಳು ಹಾಗೂ ದಾರಿಬದಿಯ ಜ್ಯೂಸ್ ಅಂಗಡಿಯನ್ನೇ "ಸ್ಪಾಟ್" ಆಗಿ ಗುರುತಿಸಲಾಗಿತ್ತು ಎಂಬ ವಿಚಾರ ಪೊಲೀಸರ ವಿಚಾರಣೆ ವೇಳೆ ಹೊರಬಿದ್ದಿತ್ತು.