ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಪ್ರತ್ಯೇಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಗುರುವಾರ ನಡೆದಿದೆ. 

ಕುಂದಾಪುರ/ಜಗಳೂರು(ಸೆ.09):  ನೀಟ್‌ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಹಿನ್ನೆಲೆಯಲ್ಲಿ ಮನನೊಂದ ವಿದ್ಯಾರ್ಥಿಗಳಿಬ್ಬರು ಆತ್ಮಹತ್ಯೆಗೆ ಶರಣಾದ ಪ್ರತ್ಯೇಕ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ಮತ್ತು ದಾವಣಗೆರೆ ಜಿಲ್ಲೆಯ ಜಗಳೂರಿನಲ್ಲಿ ಗುರುವಾರ ನಡೆದಿದೆ.

ಕುಂದಾಪುರದ ವಡೇರಹೋಬಳಿ ಜೆಎಲ್‌ಬಿ ರಸ್ತೆ ನಿವಾಸಿ ರಘುವೀರ್‌ ಶೆಟ್ಟಿ ಎಂಬವರ ಪುತ್ರ ಸಾಯೀಶ್‌ ಶೆಟ್ಟಿ(18), ಜಗಳೂರು ಪಟ್ಟಣದ ಮುಸ್ಲಿಂ ಕಾಲೋನಿಯ 3ನೇ ಕ್ರಾಸ್‌ ನಿವಾಸಿ ಚೈತ್ರಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಗಳು.

ಮಡಿಕೇರಿ ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಶಿಕ್ಷಣ ಇಲಾಖೆಯ ಸೂಪರಿಡೆಂಟ್

ನೀಟ್‌ ಪರೀಕ್ಷೆ ಫಲಿತಾಂಶ ಬುಧವಾರ ರಾತ್ರಿಯಷ್ಟೇ ಪ್ರಕಟವಾಗಿತ್ತು. ಶಿವಮೊಗ್ಗದ ಕಾಲೇಜಲ್ಲಿ ಓದುತ್ತಿದ್ದ ಸಾಯೀಶ್‌ ಕಲಿಕೆಯಲ್ಲಿ ಸಾಕಷ್ಟು ಮುಂಚೂಣಿಯಲ್ಲಿದ್ದ. ಆದರೆ, ನಿರೀಕ್ಷೆಯಷ್ಟು ಅಂಕ ಬಂದಿಲ್ಲ. ಹೀಗಾಗಿ ಕುಂದಾಪುರದ ಹೇರಿಕುದ್ರು ಸೇತುವೆ ಮೇಲೆ ಬಂದು ನದಿಗೆ ಹಾರಿದ್ದಾನೆ. ಇನ್ನು ಚೈತ್ರಾ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದ ಕಾರಣಕ್ಕೆ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.