Asianet Suvarna News Asianet Suvarna News

ಮಡಿಕೇರಿ ಲಾಡ್ಜ್‌ನಲ್ಲಿ ನೇಣಿಗೆ ಶರಣಾದ ಶಿಕ್ಷಣ ಇಲಾಖೆಯ ಸೂಪರಿಡೆಂಟ್

ಒಂದು ಕಡೆ ಶಿಕ್ಷಣ ಇಲಾಖೆಯ ಸೂಪರಿಡೆಂಟ್ ಶರಣಾಗಿದ್ರೆ, ಮತ್ತೊಂದೆಡೆ ಡಿಗ್ರಿ ಓದುತಿದ್ದ  ವಿದ್ಯಾರ್ಥಿನಿ ಸಹ ನೇಣು ಬಿಗಿದು ಆತ್ಮಹತ್ಯೆ  ಮಾಡಿಕೊಂಡಿದ್ದಾಳೆ. ಪ್ರತ್ಯೇಕ ಘಟನೆ.

mangaluru Education Dept superintendent Commits Suicide In Madikeri Lodge rbj
Author
First Published Sep 8, 2022, 11:13 AM IST

ಕೊಡಗು, (ಸೆಪ್ಟೆಂಬರ್.08): ಮಂಗಳೂರು ಶಿಕ್ಷಣ ಇಲಾಖೆಯ ಸೂಪರಿಡೆಂಟ್​ ನೇಣಿಗೆ ಶರಣಾಗಿರುವ ಘಟನೆ ಮಡಿಕೇರಿ ವಸತಿಗೃಹದಲ್ಲಿ ನಡೆದಿದೆ. ಶಿವಾನಂದ್ (45) ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ. ಇವರು ಮಂಗಳೂರು ದಕ್ಷಿಣ ವಿಭಾಗದ ಬಿಇಓ ಕಚೇರಿಯಲ್ಲಿ ಸೂಪರಿಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಮಡಿಕೇರಿಯ ಹಳೆಯ ಬಸ್ ನಿಲ್ದಾಣದ ಬಳಿಯಿರುವ ವಸತಿಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಿವಾನಂದ್​ ಅವರು ಮಂಗಳೂರು ಬಜ್ಪೆ ಮೂಲದವರು. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಮಡಿಕೇರಿ ನಗರ ಠಾಣೆಯ ಪೊಲೀಸರು ಪರಿಶೀಲನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆತ್ಮಹತ್ಯೆ ಸುದ್ದಿ ತಿಳಿದ ಕೂಡಲೇ ಕುಟುಂಬಸ್ಥರಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. 

ನೀನ್ ಬೇಡ..ನನಗೆ ಬಾಯ್‌ಫ್ರೆಂಡೇ ಬೇಕು ಎಂದ ಪತ್ನಿ ಗಂಡನನ್ನೇ ಕೊಂದಳು..!

ವಿದ್ಯಾರ್ಥಿನಿ ಆತ್ಮಹತ್ಯೆ
ಮಧುಗಿರಿ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯಬ್ಬಳು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪಟ್ಟಣದ ದಂಡಿ ಮಾರಮ್ಮ ದೇವಸ್ಥಾನದ ಹಿಂಭಾಗ ಕಸಬಾ ಹೋಬಳಿ ಬಸವನಹಳ್ಳಿ ನಿವಾಸಿ ಅಶ್ವಿನಿ ಬಿನ್ ಹನುಮಂತರಾಯಪ್ಪ (20) ಎಂಬ ಯುವತಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಡಿಗ್ರಿ ಓದುತಿದ್ದ ಅಶ್ವಿನಿ ನಿನ್ನೆ(ಬುಧವಾರ) ಕಾಲೇಜಿಗೆ ತೆರಳಿದ್ದು, ಸಂಜೆಯಾದರೂ ಹಿಂತಿರುಗಿ ಮನೆಗೆ ಬಂದಿಲ್ಲ. ಮನೆಯರು ರಾತ್ರಿ ವರೆಗೂ ಹುಡುಕಾಡಿ ಬೆಳಿಗ್ಗೆ ದೂರು ಕೊಡಲು ನಿರ್ಧರಿಸಿದ್ದು, ಆ ಸಮಯದಲ್ಲೇ ಯುವತಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಅಕ್ಕ ತಮ್ಮನನ್ನು ಚೆನ್ನಾಗಿ ನೋಡಿಕೊಳ್ಳಿ ಎಂದು ಪತ್ರ ಬರೆದಿದ್ದು ಪತ್ತೆಯಾಗಿದೆ. ನಾನು ಕಷ್ಟ ಪಟ್ಟು ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕಿದ್ದು, ನನ್ನ ಮಗಳು ಆತ್ಮಹತ್ಯೆ ಮಾಡುವ ಸ್ಥಿತಿ ಇಲ್ಲ ಎಂದು ತಂದೆ ಹನುಮಂತರಾಯಪ್ಪ ಕಣ್ಣೀರು ಹಾಕಿದ್ದಾರೆ. ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ.

ಇದು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂದು ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ. ಸ್ಥಳಕ್ಕೆ ಸಿಪಿಐ ಎಂ.ಎಸ್. ಸರ್ದಾರ್ ಭೇಟಿ ನೀಡಿದ್ದಾರೆ.

Follow Us:
Download App:
  • android
  • ios