ಹುಲಿ ಉಗುರು ಪ್ರಕರಣ; ತುಮಕೂರಿನ ಮತ್ತೊಬ್ಬ ಸ್ವಯಂಘೋಷಿತ ಗುರೂಜಿಗೆ ಸಂಕಷ್ಟ!

ಕನ್ನಡ ಕಿರುತೆರೆಯ  ರಿಯಾಲಿಟಿ  ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬನನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದೆ. 

Tiger claw case; Complaint filed against Dhananjaya Guruji at tumakuru rav

ತುಮಕೂರು (ಅ.24): ಕನ್ನಡ ಕಿರುತೆರೆಯ  ರಿಯಾಲಿಟಿ  ಶೋ ಬಿಗ್ ಬಾಸ್ ಕನ್ನಡ ಸೀಸನ್ 10ರ ಬಿಗ್ ಬಾಸ್ ಸ್ಪರ್ಧಿಯಾಗಿದ್ದ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಬಂಧನ ಬಳಿಕ ರಾಜ್ಯಾದ್ಯಂತ ಹುಲಿ ಉಗುರು ಪ್ರಕರಣಗಳು ಒಂದೊಂದೇ ಬೆಳಕಿಗೆ ಬರುತ್ತಿವೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಸ್ಪರ್ಧಿಯೊಬ್ಬನನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗಬಂಧನಕ್ಕೆ ಒಪ್ಪಿಸಿದೆ. 

ಈ ಪ್ರಕರಣದ ಬಳಿಕ ಹಲವು ಸೆಲೆಬ್ರಿಟಿಗಳು, ಸ್ವಾಮೀಗಳು ಹುಲಿ ಉಗುರು, ಹುಲಿ ಚರ್ಮ ಉಪಯೋಗಿಸುವುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಫೋಟೊ ವಿಡಿಯೋಗಳು ವೈರಲ್‌ ಆಗಿವೆ. ವರ್ತೂರು ಸಂತೋಷ್ ಬಂಧನ ಆಯ್ತು, ಇವರ ಬಂಧನ ಯಾವಾಗ ಎಂದು ನೆಟ್ಟಿಗರು ಕೇಳುತ್ತಿದ್ದಾರೆ. ಇದೀಗ ಹುಲಿ ಉಗುರು ಧರಿಸಿದ ಪ್ರಕರಣದಲ್ಲಿ ಮತ್ತೊಬ್ಬ ಸ್ವಾಮೀಜಿ ವಿರುದ್ಧ ದೂರು ದಾಖಲಾಗಿದೆ.

ಸ್ವಯಂಘೋಷಿತ ಗುರೂಜಿ ಒಬ್ಬ ಹುಲಿ ಉಗುರಿನ ಪೆಂಡೆಟ್ ಧರಿಸಿ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲ್ಲೂಕಿನ  ಬಿದನಗೆರೆಯ ಶನಿಮಹಾತ್ಮ ದೇವಾಲಯದ ಅರ್ಚಕನಾಗಿರುವ ಧನಂಜಯ ಗುರೂಜಿ.

ಚಿಕ್ಕಮಗಳೂರು: ಬಿಗ್‌ಬಾಸ್ ಸ್ಪರ್ಧಿ ಸಂತೋಷ್ ಬಂಧನ ಬೆನ್ನಲ್ಲೇ ಹುಲಿ ಉಗುರು ಧರಿಸಿದ್ದ ಇಬ್ಬರ ಬಂಧನ

ದೇವಾಲಯದ ಬಳಿ ಬಸವೇಶ್ವರ ಮಠ ಸ್ಥಾಪಿಸಿ ಗುರೂಜಿಯಾಗಿರುವ ಅರ್ಚಕ. ಮಠದ ಸ್ವಾಮೀಜಿಯಾದ ಬಳಿಕ ಮೈ ತುಂಬಾ ಬಂಗಾರದ ಓಡವೆ ಧರಿಸುತ್ತಿರುವ ಸ್ವಾಮೀಜಿ. ಒಡವೆಗಳ ಜೊತೆಗೆ ಕೊರಳಿಗೆ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಧನಂಜಯ ಗುರೂಜಿಯ ಫೋಟೊ ವೈರಲ್ ಆಗಿದ್ದು, ಸಾಮಾಜಿಕ ಕಾರ್ಯಕರ್ತ ನಾಗರಾಜ್ ಎಂಬುವವರು ಧನಂಜಯ ಗುರೂಜಿ ವಿರುದ್ಧ  ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ.

Latest Videos
Follow Us:
Download App:
  • android
  • ios