ಪಾದರಾಯಪುರ ಪುಂಡರಿಗೆ ಜಾಮೀನು ಸಿಕ್ಕಿದೆ. ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ. 

ಬೆಂಗಳೂರು, (ಮೇ.29): ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನಾ ವಾರಿಯರ್ಸ್ ಮೇಲೆ ಹಲ್ಲೆಗೆ ಯತ್ನಿಸಿದ್ದ 126 ಆರೋಪಿಗಳಿಗೂ ಜಾಮೀನು ಸಿಕ್ಕಿದೆ.

ಪಾದರಾಯನಪುರ ಪುಂಡರಿಗೆ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿ ಇಂದು (ಶುಕ್ರವಾರ) ಆದೇಶ ಹೊರಡಿಸಿದೆ. ಆರೋಪಿಗಳು 1 ಲಕ್ಷ ರೂ. ಬಾಂಡ್, ಶ್ಯೂರಿಟಿ ನೀಡೇಕೆಂದು ನ್ಯಾಯಾಮೂರ್ತಿ ಮೈಕೆಲ್ ಕುನ್ಹಾ ಪೀಠ ಆದೇಶಿಸಿದೆ.

ಪಾದರಾಯನಪುರ ಪುಂಡಾಟಕ್ಕೆ ಬಿಗ್ ಟ್ವಿಸ್ಟ್‌; ಸಿಕ್ಕಿದೆ ಎಕ್ಸ್‌ಕ್ಲೂಸಿವ್ ಆಡಿಯೋ..!

ಜೈಲಿನಿಂದ ಬಿಡುಗಡೆಗೈ ಮುನ್ನ ಎಲ್ಲಾ ಆರೋಪಿಗಳಿಗೂ ಕೋವಿಡ್19 ಪರೀಕ್ಷೆ ನಡೆಸಬೇಕು. ಪಾಸಿಟಿವ್ ಬಂದ್ರೆ ಅವರಿಗೆ ಸರ್ಕಾರದ ನಿಯಮದಂತೆ ಕ್ರಮಕೈಗೊಳ್ಳಿ. ಎಲ್ಲಾ ಆರೋಪಿಗಳು ಕೋವಿಡ್19 ಮಾರಗಸೂಚಿ ಪಾಲಿಸಬೇಕು. ಇಲ್ಲವಾದರೆ ಮುಂದಿನ ದಿನ ಜಾಮೀನು ರದ್ದುಗೊಳಿಸುವುದಾಗಿ ನ್ಯಾಯಮೂರ್ತಿ ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್ 20ರಂದು ಬೆಂಗಳೂರಿನ ಪಾದರಾಯನಪುರದಲ್ಲಿ ಸೋಂಕಿತನ ಸಂಪರ್ಕದಲ್ಲಿದ್ದ 58 ಜನರನ್ನು ಕ್ವಾರಂಟೈನ್‌ಗೆ ಅಂತ ಕರೆದುಕೊಂದು ಹೋಗಲು ಬಂದಿದ್ದ ವೇಳೆ ಈ ಆರೋಪಿಗಳು ಗಲಾಟೆ ಮಾಡಿದ್ದು. ಬ್ಯಾರಿಕೇಡ್ ಕಿತ್ತು ಬಿಬಿಎಂಪಿ ಸಿಬ್ಬಂದಿ, ಪೊಲೀಸ್ ಹಾಗೂ ವೈದ್ಯಕೀಯ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದರು.

ಆರೋಪಿಗಳ ಪರ ಇಸ್ಮಾಯಿಲ್ ಜಬೀವುಲ್ಲಾ ವಾದ ಮಂಡಿಸಿದ್ದರು.