Chitradurga crime: ವೈಯಕ್ತಿಕ ದ್ವೇಷ; ಜಗಳ ನಡೆದ ಎರಡೇ ತಿಂಗಳಿಗೆ ಬಿತ್ತು ಹೆಣ!
ಒಂದು ಏರಿಯಾ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಆಗುವುದು ಕಾಮನ್ ಕಣ್ರಿ. ಆದ್ರೆ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಕೋಟೆನಾಡಿನಲ್ಲಿ ನಡೆದಿದೆ.
ಚಿತ್ರದುರ್ಗ (ಜೂ.9) : ಒಂದು ಏರಿಯಾ ಅಂದ್ಮೇಲೆ ಸಣ್ಣ ಪುಟ್ಟ ಜಗಳ ಆಗುವುದು ಕಾಮನ್ ಕಣ್ರಿ. ಆದ್ರೆ ಯುವಕರ ಮಧ್ಯೆ ಕ್ಷುಲ್ಲಕ ಕಾರಣಕ್ಕೆ ಶುರುವಾದ ಗಲಾಟೆ ಕೊನೆಗೆ ಭೀಕರ ಕೊಲೆಯಲ್ಲಿ ಅಂತ್ಯವಾಗಿರೋ ಘಟನೆ ಕೋಟೆನಾಡಿನಲ್ಲಿ ನಡೆದಿದೆ.
ಮೃತ ಯುವಕನ ಹೆಸರು ಗುರು ಅಲಿಯಾಸ್ ಗುರುಕಿರಣ್. ವಯಸ್ಸು ಕೇವಲ 20 ವರ್ಷ. ಚಿತ್ರದುರ್ಗ ನಗರದ ಜೋಗಿಪಾಳ್ಯ ಬಡಾವಣೆಯ ನಿವಾಸಿ. ಕಳೆದ ಎರಡು ತಿಂಗಳ ಹಿಂದಷ್ಟೆ ಗುರುಕಿರಣ್ ಹಾಗೂ ರಮೇಶ್ ಪುತ್ರ ಗೋಪಿ ಎಂಬಾತನ ನಡುವೆ ಗಲಾಟೆ ನಡೆದಿರುತ್ತೆ.
ಕ್ಷುಲ್ಲಕ ಕಾರಣಕ್ಕೆ ಯುವಕನ ಬರ್ಬರ ಹತ್ಯೆ; ಬೆಚ್ಚಿಬಿಳಿಸುತ್ತೆ ಸಿಸಿಟಿವಿ ದೃಶ್ಯ!
ಅಂದು ಶುರುವಾಗಿದ್ದ ಗಲಾಟೆ ಇಂದು ಕೊಲೆಯಲ್ಲಿ ಅಂತ್ಯವಾಗಿರೋದು ದುರಂತವೇ ಸರಿ. ಮೃತ ಯುವಕ ಗುರುಕಿರಣ್ ಗೋಪಿಯ ಕಣ್ಣಿಗೆ ಬಲವಾಗಿ ಹೊಡೆದಿದ್ದ ಪರಿಣಾಮ ಅಂದು ಒಂದು ಕಣ್ಣು ಕಾಣದ ರೀತಿ ಸಮಸ್ಯೆ ಆಗಿತ್ತದೆ. ಬಳಿಕ ಎರಡೂ ಕುಟುಂಬಗಳ ನಡುವೆ ಜೋಗಿಪಾಳ್ಯದಲ್ಲಿ ಗಲಾಟೆ ನಡೆದು ಚಿತ್ರದುರ್ಗ ನಗರದ ಪೊಲೀಸ್ ಠಾಣೆಯಲ್ಲಿ ಕೇಸ್ ಅಂಡ್ ಕೌಂಟರ್ ಕೇಸ್ ದಾಖಲಾಗಿರುತ್ತದೆ. ಆದ್ರೆ ಇದೇ ದ್ವೇಷವನ್ನು ಮನದಲ್ಲಿ ಇಟ್ಕೊಂಡಿದ್ದ ಗೋಪಿ ತಂದೆ ರಮೇಶ ಹಾಗೂ ಸಂಬಂಧಿಕರಾದ ಸೋಮ, ವಿರುಪಾಕ್ಷ ಸೇರಿ ಏಪ್ರಿಲ್ ತಿಂಗಳು 20ನೇ ತಾರೀಕು ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೊಲೆ ಮಾಡಿರುವ ಶಂಕೆ ಮೃತ ಯುವಕನ ಪೋಷಕರಿಗೆ ತಿಳಿಯುತ್ತದೆ.
ಕೂಡಲೇ ಅವರು ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಯಾವುದೇ ಸಾಕ್ಷಾಧಾರಗಳು ಇಲ್ಲದ ಕಾರಣ ಪೊಲೀಸರು ಕೂಡ ಬೆಜವಾಬ್ದಾರಿ ಯಿಂದ ವರ್ತಿಸಿದ್ರು ಎಂದು ಪೋಷಕರು ಆರೋಪಿಸಿದ್ದಾರೆ. ಬಳಿಕ ಪೋಷಕರು ಈ ಕುರಿತು ಎಸ್ಪಿ ಗಮನಕ್ಕೆ ತಂದಾಗ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದಾಗ ಸತತ ಒಂದೂವರೆ ತಿಂಗಳುಗಳ ಬಳಿಕ ಕೊಲೆ ಮಾಡಿ ಊತಿಟ್ಟಿದ್ದ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಆರೋಪಿಗಳಾದ ರಮೇಶ, ಸೋಮ, ವಿರುಪಾಕ್ಷ ಸೇರಿ ಗುರುಕಿರಣ್ ನನ್ನು ಕೊಲೆ ಮಾಡಿ ತುಂಡು ತುಂಡಾಗಿ ಕತ್ತರಿಸಿ ಚೀಲದಲ್ಲಿ ತುಂಬಿಕೊಂಡು ಚಿತ್ರದುರ್ಗ ತಾಲ್ಲೂಕಿನ ಕೆನ್ನೆಡಲು ಬಳಿಯ ಹಳ್ಳವೊಂದರಲ್ಲಿ ಊತಿಟ್ಟಿದ್ದನ್ನು ಆರೋಪಿಗಳಿ ಒಪ್ಪಿಕೊಳ್ತಾರೆ.
ಕೂಡಲೇ ಪೊಲೀಸರು ಪರಿಶೀಲನೆ ನಡೆಸಿ ಮೃತ ಯುವಕನ ಶವವನ್ನು ಹೊರತೆಗೆಯುತ್ತಾರೆ. ಇನ್ನೂ ಈ ಕೊಲೆಗೆ ನೇರ ಹೊಣೆ ಅವರೇ, ಈ ಕುರಿತು ಪೊಲೀಸರಿಗೆ ಮೊದಲೇ ಮಾಹಿತಿ ನೀಡಿದ್ರೂ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಅವರು ವಿಫಲರಾದ್ರು, ಕೊಲೆ ಮಾಡಿದ ಆರೋಪಿಗಳಿಗೆ ಉಗ್ರ ಶಿಕ್ಷೆ ಆಗಬೇಕು. ರಾಜ್ಯದಲ್ಲಿ ಯಾವ ಪೋಷಕರಿಗೂ ಈ ರೀತಿ ನೋವು ಆಗಬಾರದು ಆ ರೀತಿ ಆರೋಪಿಗಳನ್ನು ಎನ್ ಕೌಂಟರ್ ಮಾಡಿ ಎಂದು ಪೋಷಕರು ತಮ್ಮ ಆಕ್ರೋಶ ಹೊರಹಾಕಿದರು.
ಈ ಘಟನೆ ಕುರಿತು ತನಿಖೆ ಶುರು ಮಾಡಿದ ಚಿತ್ರದುರ್ಗ ಕೋಟೆ ಪೊಲೀಸ್ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ಇನ್ನೂ ಈ ಬಗ್ಗೆ ಎಸ್ಪಿ ಅವರನ್ನೇ ವಿಚಾರಿಸಿದ್ರೆ, ಮಾರ್ಚ್ ೧೩ ರಂದು ಗೋಪಿ ಹಾಗೂ ಗುರುಕಿರಣ್ ಮಧ್ಯೆ ಜಗಳ ಶುರುವಾಗಿರುತ್ತದೆ. ಅಂದು ಗುರುಕಿರಣ್ ಗೋಪಿ ಕಣ್ಣಿಗೆ ಪಂಚ್ ಮಾಡಿದ್ರಿಂದ ಎರಡು ದೃಷ್ಟಿ ಹೋಗಿರುತ್ತದೆ. ಈ ಸಂಬಂಧ ಕೋಟೆ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಾಗಿತ್ತು. ಆದ್ರೆ ಏಪ್ರಿಲ್ ೨೫ ರಂದು ಗುರುಕಿರಣ್ ಮಿಸ್ಸಿಂಗ್ ಎಂದು ಕಂಪ್ಲೇಟ್ ದಾಖಲಾಗುತ್ತದೆ. ಕೂಡಲೇ ಆತನ ಪೋಷಕರು ಅರೋಪಿಗಳ ಮೇಲೆ ಕೊಲೆ ಆರೋಪದಡಿ ಪೊಲೀಸರಿಗೆ ಮಾಹಿತಿ ನೀಡಿರುತ್ತಾರೆ.
ಈ ಕುರಿತು ಪೊಲೀಸರು ರಮೇಶ,ಸೋಮನನ್ನು ವಿಚಾರಣೆ ಮಾಡಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ. ಗುರುಕಿರಣ್ ನಿಗೆ ತಲೆಗೆ ಬಾಟಲಿಯಿಂದ ರಮೇಶ ಹೊಡೆದು ಕತ್ತು ಇಸುಕಿ ಕೊಲೆ ಮಾಡಿ ಕೆನ್ನೆಡಲು ಗ್ರಾಮದಲ್ಲಿ ಊತ್ತಿಟ್ಟಿದ್ದನ್ನು ಒಪ್ಪಿಕೊಂಡಿದ್ದರ ಪರಿಣಾಮ ಆರೋಪಿಗಳನ್ನು ಈಗಾಗಲೇ ದಸ್ತಗಿರಿ ಮಾಡಲಾಗಿದೆ. ಹಳೆಯ ವೈಯಕ್ತಿಕ ವೈಷಮ್ಯದಿಂದ ಈ ಘಟನೆ ನಡೆದಿದೆ. ಆ ಏರಿಯಾದಲ್ಲಿ ಗಾಂಜಾ ಸೇವನೆ ಮಾಡ್ತಾ ಯುವಕರು ಆಗಾಗ ಗಲಾಟೆ ಮಾಡ್ತಾರೆ ಎಂಬ ಮಾಹಿತಿ ಬಂದಿದೆ ಸೂಕ್ತ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಉರುವಲು ಕಟ್ಟಿಗೆಗಾಗಿ ಮಾರಣಾಂತಿಕ ಹಲ್ಲೆ: ಆಸ್ಪತ್ರೆಯಲ್ಲೂ ಥಳಿಸಿದ ಕ್ರೂರಿಗಳು
ಒಟ್ಟಾರೆಯಾಗಿ ಇನ್ನೂ ಬಾಳಿ ಬದುಕಬೇಕಿದ್ದ ಚಿರ ಯುವಕ ಇಂದು ಕೊಲೆಯಾಗಿ ಬಿದ್ದಿರೋದು ದುರಂತವೇ ಸರಿ. ಈ ಘಟನೆಗೆ ವೈಯಕ್ತಿಕ ದ್ವೇಷವೋ, ಗಾಂಜಾ ಗಮ್ಮತ್ತೋ ಎಂಬುದನ್ನು ಪೊಲೀಸರು ಕಂಡು ಹಿಡಿದು, ಇನ್ನಾದ್ರು ಜೋಗಿಪಾಳ್ಯ ಸುತ್ತಮುತ್ತ ಸಾರ್ವಜನಿಕರಿಗೆ ಹಾವಳಿ ಕೊಡ್ತಿರುವ ಪುಂಡರ ಎಡೆಮುರಿ ಕಟ್ಟಬೇಕಿದೆ.
ಕ್ಯಾಮರಾಮ್ಯಾನ್ ಶ್ರೀನಿವಾಸ್ ಜೊತೆ ಕಿರಣ್ಎಲ್ ತೊಡರನಾಳ್ ಏಷ್ಯಾನೆಟ್ ಸುವರ್ಣ ನ್ಯೂಸ್