ಜಾರಕಿಹೊಳಿಗೆ ದೊಡ್ಡ ಸಂಕಟ; ಕೊಟ್ಟ ಹೇಳಿಕೆಯೇ ಮುಳುವಾಯ್ತು!
ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ/ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ದೂರು/ ಇಡಿ ಅಧಿಕಾರಿಗಳಿಗೆ ದೂರು ನೀಡಿದ ಕಾಂಗ್ರೆಸ್ ಮುಖಂಡ/ ಮಾಧ್ಯಮಗಳ ಮುಂದೆ ಸಿಡಿ ಬಿಡುಗಡೆಗೆ ಕೋಟ್ಯಂತರ ರೂಪಾಯಿ ಡೀಲ್ ಆಗಿದೆ ಎಂದಿದ್ದ ಜಾರಕಿಹೊಳಿ
ಬೆಂಗಳೂರು(ಮಾ. 23) ಸಿಡಿ ಪ್ರಕರಣ ಅದು ಎಷಷ್ಟು ತಿರುವು ಪಡೆದುಕೊಲ್ಳುತ್ತಿದೆಯೋ ಗೊತ್ತಿಲ್ಲ. ರಮೇಶ್ ಜಾರಕಿಹೊಳಿಗೆ ಮತ್ತೊಂದು ಸಂಕಷ್ಟ ಎದುರಾಗುವ ಸ್ಥಿತಿ ನಿರ್ಮಾಣವಾಗಿದೆ.
ಜಾರಿ ನಿರ್ದೇಶನಲಾಯದ ಕಚೇರಿಗೆ ರಮೇಶ್ ಜಾರಕಿಹೊಳಿ ವಿರುದ್ಧ ದೂರು ದಾಖಲಾಗಿದೆ ಇಡಿ ಕಚೇರಿಗೆ ಕಾಂಗ್ರೆಸ್ ಮುಖಂಡ ಪುಟ್ಟರಾಜು ದೂರು ಸಲ್ಲಿಸಿದ್ದಾರೆ.
ಕಾಂಗ್ರೆಸ್ 'ಸಿಡಿ' ದಾಳಿಗೆ ಮೂಲ ಬಿಜೆಪಿಗ ಮೌನ.. ಮಿತ್ರ ಮಂಡಳಿ ಕತೆ ಮುಂದೇನು?
ಶಾಂತಿ ನಗರದಲ್ಲಿರೋ ಇಡಿ ಕಚೇರಿಗೆ ದೂರು ಕೊಟ್ಟಿದ್ದಾರೆ ಮಾಧ್ಯಮಗಳ ಮುಂದೆ ಸಿಡಿ ಬಿಡುಗಡೆಗೆ ಕೋಟ್ಯಂತರ ರೂಪಾಯಿ ಡೀಲ್ ಆಗಿದೆ ಎಂದು ಜಾರಕಿಹೊಳಿ ಹೇಳಿದ್ದರು. ಹಾಗಾದರೆ ಹಣದ ಮೂಲ ಯಾವುದು..? ಯಾವ ಆಧಾರದಲ್ಲಿ ಈ ಹೇಳಿಕೆ ಹೇಳಿದ್ರು? ಎಂದು ದೂರು ಸಲ್ಲಿಕೆಯಾಗಿದೆ.
ಯುವತಿಗೆ ಎರಡು ಫ್ಲಾಟ್ ಕೊಟ್ಟಿದ್ದಾರೆ ಅಂತ ಕೂಡಾ ಆರೋಪಿಸಿದ್ದಾರೆ. ಹಾಗಾದರೆ ರಮೇಶ್ ಬಳಿ ಮಾಹಿತಿ ಇದೆ ಎಂದ ಮೇಲೆ ಹಣದ ಮೂಲದ ವಿಚಾರಣೆಯಾಗಬೇಕು ಎಂದು ಒತ್ತಾಯಿಸಿದ್ದಾರೆ. ಸಿಡಿ ಪ್ರಕರಣ ಸದನದಲ್ಲಿಯೂ ಪ್ರತಿಧ್ವನಿಸಿತ್ತು. ಕಾಂಗ್ರೆಸ್ ಮುಖಂಡರು ಪ್ರಶ್ನೆಗಳ ಸರಮಾಲೆಯನ್ನೇ ಇಟ್ಟಿದ್ದರು .