Asianet Suvarna News Asianet Suvarna News

Omicron doomsday : ಒಮಿಕ್ರೋನ್ ಭೀತಿಯಿಂದ ಪತ್ನಿ, ಮಕ್ಕಳನ್ನು ಕೊಂದ ವೈದ್ಯ!

  • ಒಮಿಕ್ರೋನ್ ಭೀತಿಯಿಂದ ಪತ್ನಿ ಮಕ್ಕಳನ್ನು ಕೊಂದ ವೈದ್ಯಕೀಯ ಕಾಲೇಜಿನ ಮುಖ್ಯಸ್ಥ
  • ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದ ಆಘಾತಕಾರಿ ಘಟನೆ 
  • ಪ್ರೊಫೆಸರ್ ಆಗಿ ಕೂಡ ಕರ್ತವ್ಯ ನಿರ್ವಹಿಸುತ್ತಿರುವ ಆರೋಪಿ
Kanpur professor  killed his wife and two children about fear of Omicron gow
Author
Bengaluru, First Published Dec 4, 2021, 7:50 PM IST

ಕಾನ್ಪುರ (ಡಿ.4): ಒಮಿಕ್ರೋನ್ (Omicron) ಭಯದಿಂದ ವೈದ್ಯಕೀಯ ಕಾಲೇಜಿನ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥರು ಪತ್ನಿಯ ಕತ್ತು ಹಿಸುಕಿ, ಇಬ್ಬರು ಮಕ್ಕಳನ್ನು ಹತ್ಯೆಗೈದಿರುವ ಆಘಾತಕಾರಿ ಘಟನೆ ಉತ್ತರ ಪ್ರದೇಶದ (Uttar Pradesh) ಕಾನ್ಪುರದಲ್ಲಿ(Kanpur) ನಡೆದಿದೆ. ಇಲ್ಲಿನ  ಕಲ್ಯಾಣಪುರ ಪೊಲೀಸ್ ಠಾಣಾ ವ್ಯಾಪ್ತಿಯ ಇಂದಿರಾನಗರ ಬಡಾವಣೆಯಲ್ಲಿರುವ ಡಿವಿನಿಟಿ ಹೋಮ್ ಅಪಾರ್ಟ್‌ಮೆಂಟ್‌ನಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.

 ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರೊಫೆಸರ್‌ (Professor) ಹಾಗೂ ವೈದ್ಯನಾಗಿ (Doctor) ಕರ್ತವ್ಯ ನಿರ್ವಹಿಸುತ್ತಿರುವ  ಆರೋಪಿಯು  ಒಮಿಕ್ರೋನ್ ಭೀತಿಯಿಂದ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದು ತಾನು ಪರಾರಿಯಾಗಿದ್ದಾನೆ! 

Omicron Threat: ಒಮಿಕ್ರೋನ್ ಎಷ್ಟು ಡೇಂಜರ್.?ತಿಳಿದಿರಬೇಕಾದ ಸತ್ಯಗಳು

ಈ ಬಗ್ಗೆ ತನ್ನ ಸಹೋದರನಿಗೆ ವಾಟ್ಸಾಪ್‌ನಲ್ಲಿ (WhatsApp) ಸಂದೇಶ ಕಳುಹಿಸಿದ್ದು, ಖಿನ್ನತೆಗೆ ಒಳಗಾಗಿ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಕೊಂದಿರುವುದಾಗಿ ಬರೆದುಕೊಂಡಿದ್ದಾನೆ. 

ಒಮಿಕ್ರೋನ್ ಬಗ್ಗೆ ಭಯ ಬೇಡ ಎಂದ WHO ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್

ಕೊರೊನಾದಿಂದಾಗಿ ಮೃತ ದೇಹಗಳನ್ನು ನೋಡಿ ನೋಡಿ ಬೇಸರಗೊಂಡಿದ್ದೇನೆ. ಇನ್ನು ಒಮಿಕ್ರೋನ್ ಬಂದು ಸಾವು ಖಚಿತ. ಇಂತಹ  ಸಾವು ನೋಡುವ ಬದಲು ಎಲ್ಲರನ್ನೂ ಸಾವಿನಿಂದ ವಿಮೋಚನೆಗೊಳಿಸುತ್ತಿದ್ದೇನೆ'. ಇದರ ಅರ್ಥ ಏನು ಎಂದು ತಿಳಿದುಕೊಳ್ಳುವ ಮೊದಲೇ ಮೂರು ಹೆಣಗಳು ಉರುಳಿ ಹೋಗಿವೆ ಎಂದು ಸಂದೇಶ ಕಳುಹಿಸಿದ್ದಾನೆ.

Covid19 Vaccine: ಒಮಿಕ್ರೋನ್‌ ಮೇಲೆ ಲಸಿಕೆ ಎಷ್ಟು ಪರಿಣಾಮಕಾರಿ? ಕೇಂದ್ರ ಆರೋಗ್ಯ ಸಚಿವಾಲಯ ಹೇಳಿದ್ದೇನು?

ಮೊದಲಿಗೆ ಈಗ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಂದ ನಂತರ ತನ್ನ ಮಗ ಮತ್ತು ಮಗಳ ತಲೆಯನ್ನು ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದಾನೆ. ನಂತರ ಅಲ್ಲಿಂದ ವೈದ್ಯ ಪರಾರಿಯಾಗಿದ್ದಾನೆ. ವಾಟ್ಸ್‌ಆಯಪ್‌ ಸಂದೇಶ ನೋಡಿ ಫ್ಲ್ಯಾಟ್‌ಗೆ ಸಹೋದರ ಬರುವಷ್ಟರಲ್ಲಿ ಈ ಕೃತ್ಯ ಮುಗಿದು ಅಷ್ಟರಲ್ಲೇ ಎಲ್ಲರೂ ಸಾವನ್ನಪ್ಪಿದ್ದರು. ಬಳಿಕ ಸಹೋದರ  ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

Karnataka Omicron case:ವಿದೇಶಕ್ಕೆ ಹೋಗಿಲ್ಲ,ಯಾರ ಸಂಪರ್ಕವೂ ಇಲ್ಲ, ಆದರೂ ಓಮಿಕ್ರಾನ್ ಪತ್ತೆ!

ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸ್ ಕಮಿಷನರ್ (police commissioner) ಅಸೀಮ್ ಕುಮಾರ್ ಅರುಣ್ ನೇತೃತ್ವದ ಪೊಲೀಸ್ ತಂಡ, ವಿಧಿವಿಜ್ಞಾನ ಸಿಬ್ಬಂದಿ ಮತ್ತು ಶ್ವಾನದಳದೊಂದಿಗೆ ಸ್ಥಳಕ್ಕೆ ಧಾವಿಸಿ ತನಿಖೆ ಆರಂಭಿಸಿದ್ದಾರೆ.

ಪೊಲೀಸರ ಮಾಹಿತಿ ಪ್ರಕಾರ, ಆರೋಪಿ ಪ್ರೊ. ಸುಶೀಲ್ ಸಿಂಗ್ (55) ಮಂಧಾನದಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ವಿಧಿವಿಜ್ಞಾನ ವಿಭಾಗದ ಮುಖ್ಯಸ್ಥನಾಗಿದ್ದಾನೆ. ಈತ ಪತ್ನಿ ಚಂದ್ರಪ್ರಭಾ (50), ಮಗ ಶಿಖರ್ ಸಿಂಗ್ (21) ಪುತ್ರಿ ಖುಷಿ ಸಿಂಗ್ (16) ಅವರೊಂದಿಗೆ ಡಿವಿನಿಟಿ ಹೌಸ್ ಫ್ಲಾಟ್‌ಗಳ ಐದನೇ ಮಹಡಿಯ ಫ್ಲಾಟ್ ಕ್ವಾಂಟಿಟಿ 501 ರಲ್ಲಿ ವಾಸಿಸುತ್ತಿದ್ದ ಎಂದಿದ್ದಾರೆ.

ಚಂದ್ರಪ್ರಭಾ ಅವರು ಶಿವರಾಜಪುರದಲ್ಲಿ ಪ್ರಾಥಮಿಕ ಅಧ್ಯಾಪಕರಿಗೆ ತರಬೇತುದಾರರಾಗಿದ್ದರು. ಅವರ ಮಗ  CLATಗೆ ಆನ್‌ಲೈನ್‌ನಲ್ಲಿ ತಯಾರಾಗುತ್ತಿದ್ದ. ಮತ್ತು ಮಗಳು ಹತ್ತಿರದ ಕಾಲೇಜಿನಲ್ಲಿ ೧೦ನೇ ತರಗತಿ ವ್ಯಾಸಂಗ ಮಾಡುತ್ತಿದ್ದಳು.  ಕೊಲೆ ಮಾಡಿದ ಬಳಿಕ ಶುಕ್ರವಾರ ಸಂಜೆ 5.32 ರ ಸುಮಾರಿಗೆ ಸಹೋದರ ಡಾ ಸುನಿಲ್ ಸಿಂಗ್ ಅವರಿಗೆ ವಾಟ್ಸಾಪ್ ಸಂದೇಶವನ್ನು ಕಳುಹಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಸಂದೇಶ ಓದಿದ ತಕ್ಷಣವೇ ಸಹೋದರ ಡಾ ಸುನಿಲ್ ಸಿಂಗ್  ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಗಿಲು ಲಾಕ್ ಆಗಿತ್ತು. ಸಿಬ್ಬಂದಿಗಳ ಸಹಾಯದಿಂದ ಬಾಗಿಲುಗಳನ್ನು ಒಡೆದು ಒಳ ಪ್ರವೇಶಿಸಿದಾಗ, ಸುನೀಲ್ ಅವರ ಅತ್ತಿಗೆ ಚಂದ್ರಪ್ರಭಾ, ಸೋದರಳಿಯ ಶಿಖರ್ ಮತ್ತು ಖುಷಿ ಅವರು ಶವವಾಗಿದ್ದರು. ಬಳಿಕ ಸುನಿಲ್ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ಕಮಿಷನರ್ ತಿಳಿಸಿದ್ದಾರೆ.

ಪೊಲೀಸರು ಸ್ಥಳ ಮಹಜರು ನಡೆಸಿದಾಗ ಡೈರಿಯೊಂದು ಸಿಕ್ಕಿದ್ದು, ಡೈರಿಯಲ್ಲಿ ಆರೋಪಿ ಸುಶೀಲ್ ಮನೆಯವರ ಹತ್ಯೆ ಮತ್ತು ವಿವಿಧ ವಿಷಯಗಳ ಬಗ್ಗೆ ಬರೆದಿದ್ದಾನೆ. ಆರೋಪಿ ಸುಶೀಲ್ ತನ್ನ ಸಹೋದರನಿಗೆ ಕಳುಹಿಸಿದ ಸಂದೇಶಗಳನ್ನು ಗಮನಿಸಿದರೆ, ಅವನು ಜೀವಂತವಾಗಿರುವ ಸಾಧ್ಯತೆಗಳಿವೆ. ಆರೋಪಿಯ ಪತ್ತೆಗೆ ಮೂರು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

Follow Us:
Download App:
  • android
  • ios