Asianet Suvarna News Asianet Suvarna News

ಕಲಬುರಗಿ: ತೋಳ ದಾಳಿಗೆ 9 ತಿಂಗಳ ಹಸುಗೂಸು ಬಲಿ

Kalaburagi News: ತೋಳದ ದಾಳಿಗೆ 9 ತಿಂಗಳ ಹಸುಗೂಸು ಬಲಿಯಾದ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ

Kalaburagi 9 month old baby allegedly dies of wolf attack mnj
Author
First Published Aug 27, 2022, 12:39 PM IST

ಕಲಬುರಗಿ (ಆ. 27):  ತೋಳದ ದಾಳಿಗೆ 9 ತಿಂಗಳ ಹಸುಗೂಸು ಬಲಿಯಾದ ಘಟನೆ ಕಲಬುರಗಿ ಜಿಲ್ಲೆ ಯಡ್ರಾಮಿ ತಾಲೂಕಿನ ಮಳ್ಳಿ ಗ್ರಾಮದಲ್ಲಿ ನಡೆದಿದೆ. 9 ತಿಂಗಳ ಗಂಡು ಕೂಸು ಭೀರಪ್ಪ ಮೃತ ದುರ್ದೈವಿ. ತಾಯಿ ಹೊಲದಲ್ಲಿ ಕಳೆ ತೆಗೆಯುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.  ಮರಕ್ಕೆ ಸೀರೆಯಿಂದ ಜೋಳಿಗೆ ಕಟ್ಟಿ ಅದರಲ್ಲಿ ಮಗವನ್ನು ಮಲಗಿಸಿ ತಾಯಿ ಕಳೆ ತೆಗೆಯುತ್ತಿದ್ದರು.  ಸ್ವಲ್ಪ ಹೊತ್ತಿನ ನಂತರ ನೋಡಿದಾಗ ಜೋಳಿಗೆಯಲ್ಲಿ ಮಗು ಕಾಣದೇ ತಾಯಿ ಕಂಗಾಲಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಮಗುವಿನ ಸುಳಿವು ಸಿಕ್ಕಿಳ್ಳ. 

ಎರಡು ದಿನಗಳ ಬಳಿ ನಾಪತ್ತೆಯಾಗಿದ್ದ ಸ್ಥಳದಿಂದ ತುಸು ದೂರದಲ್ಲಿ ಮಗುವಿನ ಕಳೆಬರ ಪತ್ತೆಯಾಗಿದೆ. ಅರ್ಧಂಬರ್ದ ದೇಹದೊಂದಿಗೆ ಮಗುವಿನ ಶವ ಪತ್ತೆಯಾಗಿದೆ. ತೋಳ ದಾಳಿ ಮಾಡಿ ಮಗುವನ್ನು ಹೊತ್ತೊಯ್ದು ತಿಂದಿರುವ ಶಂಕೆ ವ್ಯಕ್ತವಾಗಿದೆ. ಈ ಕುರಿತು ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಮಗು ಮಾಯ: ಸ್ವಲ್ಪ ಹೊತ್ತಿನ ನಂತರ ತಾಯಿ ಮರಳಿ ಮರದ ಬಳಿ ಬಂದು ಜೋಳಿಗೆಯಲ್ಲಿ ನೋಡಿದಾಗ ಮಗು ಇರಲಿಲ್ಲ. ಆ ತಾಯಿ ಹಾಗೂ ಹೊಲದಲ್ಲಿದ್ದ ಇತರೇ ಜನರೆಲ್ಲಾ ಸೇರಿ ಎಲ್ಲೆಡೆ ಹುಡುಕಿದರೂ ಮಗು ಪತ್ತೆಯಾಗಲಿಲ್ಲ. ಈ ಘಟನೆ ಇದೇ ತಿಂಗಳ 23 ನೇ ತಾರಿಖಿನಂದೆ ನಡದಿದೆ. 

ದೂರು ದಾಖಲು:  9 ವರ್ಷದ ಗಂಡು ಮಗು ಭೀರಪ್ಪ, ಕಾಣೆಯಾದ ನಂತರ ವಾಸ್ತವವಾಗಿ ಹೆತ್ತವರು ಇದು ಆಗದವರ ಕೃತ್ಯ ಎಂದೇ ಭಾವಿಸಿದ್ದರು. ಮಗುವನ್ನು ಯಾರೋ ಎತ್ತಿಕೊಂಡು ಹೋಗಿದ್ದಾರೆ ಎಂದೇ ಹೆತ್ತವರು ನಂಬಿದ್ದರು. ಅದೇ ರೀತಿ ಮಗು ಕಾಣೆಯಾದ ಬಗ್ಗೆ ಯಡ್ರಾಮಿ ಪೊಲೀಸ್ ಠಾಣೆಯಲ್ಲಿ ದೂರು ಸಹ ಸಲ್ಲಿಸಲಾಗಿತ್ತು

ಮೂರು ದಿನ ಸಿಗದ ಕುರುಹು: ಮರಕ್ಕೆ ಸೀರೆಯಿಂದ ಕಟ್ಟಲಾಗಿದ್ದ ಜೋಳಿಗೆಯಲ್ಲಿ ಮಲಗಿಸಲಾಗಿದ್ದ ಮಗು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಾದ ನಂತರ ಪೊಲೀಸರೂ ಸಹ ತನಿಖೆ ಶುರು ಮಾಡಿದ್ದರು. ಅಲ್ಲದೇ ಇಡೀ ಗ್ರಾಮಸ್ಥರು ಸೇರಿ ಆ ಹೊಲದಲ್ಲಿ ಹಾಗೂ ಅಲ್ಲಿನ ಹಳ್ಳದ ಸುತ್ತ ಮುತ್ತ ಸೇರಿ ಎಲ್ಲೆಡೆ ವ್ಯಾಪಕ ಶೋಧ ನಡೆಸಿದ್ದರು. ಆದ್ರೂ ಯಾವುದೇ ಕುರುಹು ಪತ್ತೆಯಾಗಿರಲಿಲ್ಲ. 

ನಾಲ್ಕನೆ ದಿನ ಸಿಕ್ಕ ಶವ:  ಕಳೆದ 23 ರಂದು ಕಾಣೆಯಾಗಿದ್ದ 9 ವರ್ಷದ ಮಗುವಿನ ಶವ ಕಾಣೆಯಾದ ಸ್ಥಳದಿಂದ ಕೇವಲ 100 ಮೀಟರ್ ಅಂತರದಲ್ಲಿಯೇ ನಾಲ್ಕು ದಿನಗಳ ಬಳಿಕ ಪತ್ತೆಯಾಗಿದೆ. ಇದು ಹಲವು ಅನುಮಾನಗಳಿಗೆ ಕಾರಣವಾಗಿದೆ. 

ಹುಲಿ ದಾಳಿಗೆ ಹಸು ಬಲಿ: ಗಿರಿ ಪ್ರದೇಶದ ಜನರು, ಪ್ರವಾಸಿಗರಲ್ಲೂ ಹೆಚ್ಚಿದ ಆತಂಕ

ಅರ್ಧಂಬರ್ಧ ತಿಂದ ಪ್ರಾಣಿಗಳು:  ಮಗುವಿನ ಕತ್ತಿನಿಂದ ಮುಖದ ಭಾಗದಲ್ಲಿ ಯಾವುದೇ ಗಂಭೀರ ಗಾಯದ ಗುರುತುಗಳಿಲ್ಲ. ಆದ್ರೆ ಹೊಟ್ಟೆಯ ಭಾಗ ಸಂಪೂರ್ಣ ಕಾಣೆಯಾಗಿದೆ. ಹೊಟ್ಟೆ ಭಾಗದ ಎಲುಬುಗಳು ಬಿಟ್ರೆ ಬೇರೆನೂ ಕಾಣಿಸದು. ಹಾಗಾಗಿ ಇದು ಪ್ರಾಣಿಗಳ ದಾಳಿ ಎಂದು ಹೇಳಲಾಗುತ್ತಿದೆ. ವಿಶೇಷವಾಗಿ ತೋಳ ದಾಳಿ ಮಾಡಿ ಕುರಿಗಳನ್ನು ತಿಂದು ಹಾಕುವುದು ಇದೇ ಶೈಲಿಯಲ್ಲಿ ಎನ್ನಲಾಗಿದೆ. ಹಾಗಾಗಿ ಇದು ತೋಳದ ದಾಳಿಯೇ ಎಂದು ಅಂದಾಜಿಸಲಾಗುತ್ತಿದೆ. 

ಶೋಕ ಸಾಗರದಲ್ಲಿ ಮಳ್ಳಿ ಗ್ರಾಮ:  ಈ ಒಂಬತ್ತು ವರ್ಷದ ಹಸುಗೂಸಿನ ಪರಿಸ್ಥಿತಿಯನ್ನು ಕಂಡು ಹೆತ್ತವರ ಆಕ್ರಂಧನ ಮುಗಿಲು ಮುಟ್ಟಿದೆ. ಅಷ್ಟೇ ಅಲ್ಲ, ಈ ಕೂಸಿನ ಸಾವು ಇಡೀ ಮಳ್ಳಿ ಗ್ರಾಮವೇ ಶೋಕಸಾಗರದಲ್ಲಿ ಮುಳುಗುವಂತಾಗಿದೆ. 

ಪೊಲೀಸ್ ತನಿಖೆ ಚುರುಕು: ಪತ್ತೆಯಾಗಿರುವ ಮಗುವಿನ ಶವ ನೋಡಿದ್ರೆ ಇದು ತೋಳದ ದಾಳಿಯೇ ಎಂದು ನಂಬಲಾಗುತ್ತಿದೆ. ಅದಾಗ್ಯೂ ಈ ಸಾವಿನ ಬಗ್ಗೆ ಇನ್ನೂ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಈ ಬಗ್ಗೆ ಪೊಲೀಸ್ ತನಿಖೆ ಮುಂದುವರೆದಿದೆ.

Follow Us:
Download App:
  • android
  • ios