Mumbai Crime: ಅಮ್ಮನ ಶವ ಕೊಂದು ಪ್ಯಾಕ್ ಮಾಡಿ ಎಸೆದ ಜುಹುವಿನ ಶಿಕ್ಷಕ ಅಂದರ್..!
74 ವರ್ಷದ ತಾಯಿ ವೀಣಾ ಕಪೂರ್ ಅವರನ್ನು ಕೊಂದು ಆಕೆಯ ಮೃತದೇಹವನ್ನು 4 ಅಡಿ ಪೆಟ್ಟಿಗೆಯಲ್ಲಿ ತುಂಬಿ ಎಸೆದ ಆರೋಪದಡಿ 40 ವರ್ಷದ ವ್ಯಕ್ತಿಯನ್ನು ಜುಹು ಪೊಲೀಸರು ಬುಧವಾರ ಬಂಧಿಸಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯ (Delhi) ಶ್ರದ್ಧಾ ವಾಕರ್ (Shraddha Walkar) ಹತ್ಯೆ (Murder) ಪ್ರಕರಣದ ಬಳಿಕ ಹೆಚ್ಚೆಚ್ಚು ಅದೇ ರೀತಿಯ ಹತ್ಯೆ ಪ್ರಕರಣಗಳು ದೇಶದ ಮೂಲೆ ಮೂಲೆಗಳಿಂದ ವರದಿಯಾಗುತ್ತಲೇ ಇದೆ. ಇದೂ ಸಹ ಅಂತದ್ದೇ ಒಂದು ಕೇಸ್. 40 ವರ್ಷದ ಮುಂಬೈನ (Mumbai) ಜುಹು (Juhu) ಶಿಕ್ಷಕನೊಬ್ಬ ತನ್ನ ತಾಯಿಯನ್ನು (Mother) ಕೊಂದು ನಂತರ ಆಕೆಯ ದೇಹವನ್ನು ಮಹಾರಾಷ್ಟ್ರದ (Maharashtra) ರಾಯ್‌ಗಢ ಜಿಲ್ಲೆಯ ಮಾಥೆರಾನ್ ಬಳಿಯ ಕಮರಿಯಲ್ಲಿ ಬಿಸಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆ ಜುಹು ಪೊಲೀಸರು ಬುಧವಾರ ಆರೋಪಿಯನ್ನು ಬಂಧಿಸಿದ್ದಾರೆ (Arrest).
ತನ್ನ 74 ವರ್ಷದ ತಾಯಿ ವೀಣಾ ಕಪೂರ್ ಅವರನ್ನು ಕೊಂದು ಆಕೆಯ ಮೃತದೇಹವನ್ನು 4 ಅಡಿ ಪೆಟ್ಟಿಗೆಯಲ್ಲಿ ತುಂಬಿ ಎಸೆದ ಆರೋಪದಡಿ 40 ವರ್ಷದ ವ್ಯಕ್ತಿಯನ್ನು ಜುಹು ಪೊಲೀಸರು ಬುಧವಾರ ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಅಮೆರಿಕದಲ್ಲಿ ನೆಲೆಸಿರುವ ಆಕೆಯ ಎರಡನೇ ಮಗ ನೆವಿನ್ ಕಪೂರ್ ಅನುಮಾನದಿಂದ ಸಚಿನ್ ಕಪೂರ್ ಬಂಧನಕ್ಕೆ ಕಾರಣವಾಗಿದೆ ಎಂದು ತಿಳಿದುಬಂದಿದೆ. ಇನ್ನು, ವೀಣಾ ಕಪೂರ್ ಅವರ ಮೃತದೇಹಕ್ಕಾಗಿ ಇನ್ನೂ ಹುಡುಕಾಟ ಮುಂದುವರಿದಿದ್ದು, ಮಹಾರಾಷ್ಟ್ರ ಪೊಲೀಸರು ನವಿ ಮುಂಬೈನ ಕಾಡು ಮತ್ತು ತೊರೆ ಎರಡನ್ನೂ ಹುಡುಕುತ್ತಿದ್ದಾರೆ ಎಂದು ತಿಳಿದುಬಂದಿದೆ. ಏಕೆಂದರೆ ಆರೋಪಿ ಸಚಿನ್ ಕಪೂರ್ ತಾಯಿಯ ಮೃತದೇಹ ಎಸೆದ ನಿಖರವಾದ ಸ್ಥಳದ ಬಗ್ಗೆ ಪೊಲೀಸರ ದಾರಿ ತಪ್ಪಿಸುತ್ತಿದ್ದಾನೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ: ಚರಂಡಿಯಲ್ಲಿ ಸಿಕ್ಕ ಸೂಟ್‌ಕೇಸ್‌ನಲ್ಲಿ ಮಹಿಳೆಯ ಶವಪತ್ತೆ
ಮಂಗಳವಾರ ರಾತ್ರಿ ತಾಯಿಯನ್ನು ಕೊಂದಿರುವುದಾಗಿ ಸಚಿನ್ ಕಪೂರ್ ಪೊಲೀಸರಿಗೆ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ವೀಣಾ ಗೋವರ್ಧನ್‌ದಾಸ್ ಕಪೂರ್ ಮತ್ತು ಸಚಿನ್ ಕಪೂರ್ ವಾಸಿಸುತ್ತಿದ್ದ ಜುಹುವಿನ ಕಲ್ಪತರು ಸಾಲಿಟೇರ್‌ನಲ್ಲಿರುವ ಸಿಸಿಟಿವಿ ಕ್ಯಾಮೆರಾಗಳು ಈ ಘಟನೆಗಳನ್ನು ಸೆರೆಹಿಡಿದಿವೆ ಎಂದು ಪೊಲೀಸರು ಹೇಳಿದ್ದಾರೆ. ಹಾಗೆ, ಮೃತದೇಹವನ್ನು ಹೇಗೆ ವಿಲೇವಾರಿ ಮಾಡಿದ್ದಾನೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಈ ದೃಶ್ಯಾವಳಿಗಳು ಪೊಲೀಸರಿಗೆ ಸಹಾಯ ಮಾಡುತ್ತಿದೆ ಎಂದೂ ವರದಿಯಾಗಿದೆ.
ಮೃತ ವೀಣಾ ಕಪೂರ್ ಅವರ ಇನ್ನೊಬ್ಬ ಮಗ, ನೆವಿನ್ ಕಪೂರ್ ಯುಎಸ್‌ನಲ್ಲಿ ವಾಸಿಸುತ್ತಿದ್ದು, ಅವರೊಂದಿಗೆ ಸಂಪರ್ಕ ಸಾಧಿಸಲು ಸಾಧ್ಯವಾಗದ ಕಾರಣ ಪೊಲೀಸರಿಗೆ ದೂರು ನೀಡಲಾಯ್ತು. ನೆವಿನ್ ಕಪೂರ್ ಅವರು ವೀಣಾ ಕಪೂರ್ ಅವರೊಂದಿಗೆ ಪ್ರತಿದಿನ ಗಂಟೆಗಳ ಕಾಲ ಮಾತನಾಡುತ್ತಿದ್ದರು ಮತ್ತು ಮಂಗಳವಾರ ರಾತ್ರಿ 9 ಗಂಟೆಗೆ ಅವರು ಅವರಿಗೆ ಕರೆ ಮಾಡಿದಾಗ ಅವರು ಉತ್ತರಿಸಲಿಲ್ಲ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: Kolar: ಮಕ್ಕಳಿಬ್ಬರಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ
ನಂತರ, ಚಿಂತೆಗೀಡಾದ ನೆವಿನ್ ಕಪೂರ್, ಮನೆ ಕೆಲಸದವರಾದ ಚೋಟುಗೆ ಕರೆ ಮಾಡಿದರು. ಬಳಿಕ, ಚೋಟು ರಾತ್ರಿ 2 ಗಂಟೆ ಸುಮಾರಿಗೆ ಫ್ಲಾಟ್‌ಗೆ ಹೋದಾಗ, ಅಲ್ಲಿ ಯಾರೂ ಕಾಣಲಿಲ್ಲ ಎಂದು ನೆವಿನ್‌ಗೆ ಮಾಹಿತಿ ನೀಡಿದರು ಮತ್ತು ಸಚಿನ್ ಕಪೂರ್ ಫೋನ್ ಸ್ವಿಚ್ ಆಫ್ ಆಗಿದೆ ಎಂದೂ ಹೇಳಿದರು.
ನಂತರ, ನೆವಿನ್ ಕಪೂರ್ ಜುಹು ಪೊಲೀಸ್ ಠಾಣೆಯಲ್ಲಿ ವೀಣಾ ಕಪೂರ್ ಕಾಣೆಯಾದ ಬಗ್ಗೆ ದೂರು ದಾಖಲಿಸಲು ಚೋಟುಗೆ ಕೇಳಿದರು. ಆತ, ಅಪಾರ್ಟ್‌ಮೆಂಟ್ ಸೊಸೈಟಿ ಮೇಲ್ವಿಚಾರಕ ಜಾವೇದ್ ಮಾಪಾರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿ ದೂರು ದಾಖಲಿಸಿದ್ದಾರೆ. ಬಳಿಕ, ಪೊಲೀಸರು ಸ್ಥಳಕ್ಕೆ ಧಾವಿಸಿ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ವೀಲ್‌ಚೇರ್‌ನಲ್ಲಿ 4 ಅಡಿ ಉದ್ದದ ಪೆಟ್ಟಿಗೆಯನ್ನು ಹೊತ್ತುಕೊಂಡು ಹೋಗುತ್ತಿರುವ ಸಚಿನ್ ಕಪೂರ್ ಅವರನ್ನು ಸಿಸಿ ಕ್ಯಾಮೆರಾ ದೃಶ್ಯದಲ್ಲಿ ಗಮನಿಸಿದರು. ಬಳಿಕ, ಪೊಲೀಸರು ಸಚಿನ್‌ನನ್ನು ಎಲ್ಲೆಡೆ ಹುಡುಕಿದರು,. ಆದರೆ, ಆರೋಪಿ ತಮ್ಮ ಫ್ಲಾಟ್‌ನ ಕೋಣೆಯೊಳಗೆ ಬೀಗ ಹಾಕಿಕೊಂಡು ಅಡಗಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಕುಮಟಾ: ತಂದೆ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ
ನಂತರ, ಪೊಲೀಸರು ಬಾಗಿಲು ಒಡೆದು ಆರೋಪಿಯನ್ನು ಹಿಡಿದಿದ್ದಾರೆ. ವಿಚಾರಣೆ ವೇಳೆ, ಸಚಿನ್ ಕಪೂರ್ ತನ್ನ ತಾಯಿಯನ್ನು ಕತ್ತು ಹಿಸುಕಿ, ನಂತರ ಆಕೆಯ ದೇಹವನ್ನು ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ನವಿ ಮುಂಬೈನ ತೊರೆಗೆ ಎಸೆದಿದ್ದೇನೆ ಎಂದು ಹೇಳಿದ್ದಾನೆ. ಇನ್ನೊಮ್ಮೆ, ಶವವನ್ನು ನವಿ ಮುಂಬೈನ ಅರಣ್ಯ ಪ್ರದೇಶದಲ್ಲಿ ಎಸೆದಿರುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸರು ಇದೀಗ ಶವವನ್ನು ಎಸೆದಿರಬಹುದಾದ ಪ್ರದೇಶಗಳಲ್ಲಿ ಸಂಭವನೀಯ ಎಲ್ಲಾ ಸಿಸಿಟಿವಿ ಕ್ಯಾಮೆರಾಗಳನ್ನು ಸ್ಕ್ಯಾನ್ ಮಾಡುತ್ತಿದ್ದು, ಈವರೆಗೆ ಮೃತದೇಹ ಪತ್ತೆಯಾಗಿಲ್ಲ.