Asianet Suvarna News Asianet Suvarna News

ಕುಮಟಾ: ತಂದೆ ಜೊತೆ ಸೇರಿ ತಾಯಿಯನ್ನೇ ಕೊಂದ ಮಗ

ಮೃತದೇಹದ ಮೇಲಿನ ಗಾಯದ ಗುರುತು ನೋಡಿ ಸಂಶಯಗೊಂಡು, ಪೊಲೀಸರಿಗೆ ದೂರು ನೀಡಿದ ಗ್ರಾಮಸ್ಥರು. ದೂರಿನ ಮೇರೆಗೆ ಅಪ್ಪ-ಮಗ ಇಬ್ಬರನ್ನೂ ಬಂಧಿಸಿದ ಪೊಲೀಸರು 

Son Killed Mother at Kumta in Uttara Kannada grg
Author
First Published Dec 8, 2022, 2:31 AM IST

ಕುಮಟಾ(ಡಿ.08):  ಅಪ್ಪನ ಜತೆ ಸೇರಿ ಮಗ ತನ್ನ ತಾಯಿಯನ್ನೇ ಕೊಲೆಗೈದ ಘಟನೆ ತಾಲೂಕಿನ ಕೂಜಳ್ಳಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೇಲಿನ ಕೂಜಳ್ಳಿಯ ಬಚ್ಕಂಡದ ಗೀತಾ ವಿಶ್ವೇಶ್ವರ ಭಟ್ಟ(64) ಕೊಲೆಯಾದ ಮಹಿಳೆ. ಪ್ರಕರಣಕ್ಕೆ ಸಂಬಂಧಿಸಿ ಕೊಲೆಯಾದ ಮಹಿಳೆಯ ಪತಿ ವಿಶ್ವೇಶ್ವರ ನಾರಾಯಣ ಭಟ್ಟ(69) ಹಾಗೂ ಅವರ ಮಗ ಮಧುಕರ ವಿಶ್ವೇಶ್ವರ ಭಟ್ಟ(33) ಅವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

Karwar: ಸಮುದ್ರದಲ್ಲಿ ಈಜಲು ಹೋಗಿ ಮುಳುಗುತ್ತಿದ್ದ ಮಹಿಳೆ ಮತ್ತು ಮಗುವಿನ ರಕ್ಷಣೆ

ವಿಪರೀತ ಕುಡಿತದ ದಾಸರಾಗಿದ್ದ ಅಪ್ಪ -ಮಗ ಇಬ್ಬರೂ ಪದೇ ಪದೇ ಮನೆಯಲ್ಲಿ ಗಲಾಟೆ ಮಾಡುತ್ತಿದ್ದರು. ಮಂಗಳವಾರ ರಾತ್ರಿಯೂ 10 ಗಂಟೆ ಸುಮಾರಿಗೆ ಮನೆಗೆ ಬಂದು ವಿಪರೀತ ಗಲಾಟೆ ಮಾಡಿದರು. ಈ ವೇಳೆ, ಮಾತಿಗೆ ಮಾತು ಬೆಳೆದು, ಗೀತಾಗೆ ರೀಪಿನ ತುಂಡು ಹಾಗೂ ಸ್ಟೂಲಿನಿಂದ ಹೊಡೆದರು. ಇದರಿಂದ ಗಾಯಗೊಂಡು ಗೀತಾ ಅಸುನೀಗಿದರು.

ಬುಧವಾರ ಬೆಳಗ್ಗೆ ವಿಶ್ವೇಶ್ವರ ಭಟ್ಟ, ತನ್ನ ಪತ್ನಿ ಹೃದಯಾಘಾತದಿಂದ ಸತ್ತುಹೋದಳೆಂದು ಅಕ್ಕಪಕ್ಕದ ಮನೆಯವರಿಗೆ ತಿಳಿಸಿ, ಅಂತ್ಯಸಂಸ್ಕಾರಕ್ಕೆ ಸಿದ್ಧರಾಗಿದ್ದರು. ಆದರೆ, ಮೃತದೇಹದ ಮೇಲಿನ ಗಾಯದ ಗುರುತು ನೋಡಿ ಗ್ರಾಮಸ್ಥರು ಸಂಶಯಗೊಂಡು, ಪೊಲೀಸರಿಗೆ ದೂರು ನೀಡಿದರು. ದೂರಿನ ಮೇರೆಗೆ ಪೊಲೀಸರು ಅಪ್ಪ-ಮಗ ಇಬ್ಬರನ್ನೂ ಬಂಧಿಸಿದ್ದಾರೆ.
 

Follow Us:
Download App:
  • android
  • ios