ಪತಿ ಸಾವಿನ ನಂತರ ನಡೆದ ವಿಚಾರಣೆ ವೇಳೆ ಅನಿತಾ ತನ್ನ ಪತಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಳು.  ಕರುಣೆಯ ಆಧಾರದ ಮೇಲೆ ಆತನ ಕೆಲಸ ಪಡೆಯಲು ಕೊಲೆ ಮಾಡಿರುವುದಾಗಿಯೂ ಅಪರಾಧಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಚಾಯ್‌ಬಾಸಾ (ಜಾರ್ಖಂಡ್) (ಮಾರ್ಚ್ 18, 2023): ಪತಿಯೇ ಪರದೈವ ಅಂತಾರೆ. ಆದ್ರೆ ಈ ಪ್ರಕರಣದಲ್ಲಿ ಮಹಿಳೆಯೊಬ್ಳು ತನ್ನ ಪತಿಯನ್ನು ಕೊಲೆ ಮಾಡಿ ಸೀಲಿಂಗ್ ಫ್ಯಾನ್‌ಗೆ ನೇತು ಹಾಕಿದ್ದಾಳೆ. ಇದಕ್ಕೆ ಕಾರಣ ಗಂಡನ ಅನುಕಂಪದ ಆಧಾರದ ಮೇಲೆ ಸಿಗುವ ಉದ್ಯೋಗ ಪಡೆಯೋಕೆ. 2017 ರಲ್ಲಿ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ತನ್ನ ಪತಿಯನ್ನು ಸಹಾನುಭೂತಿಯ ಆಧಾರದ ಮೇಲೆ ತನ್ನ ಉದ್ಯೋಗವನ್ನು ಭದ್ರಪಡಿಸಿಕೊಳ್ಳಲು ಪತಿಯನ್ನು ಕೊಂದ ಪ್ರಕರಣದಲ್ಲಿ ತಪ್ಪಿತಸ್ಥಳೆಂದು ಕಂಡುಕೊಂಡ ನಂತರ ಜಾರ್ಖಂಡ್ ನ್ಯಾಯಾಲಯವು ಶುಕ್ರವಾರ ಮಹಿಳೆಯೊಬ್ಬರಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.

ಜನವರಿ 25, 2017 ರಂದು ಪತಿ ರಾಜೀವ್ ಕುಮಾರ್ ಸಿಂಗ್ ಅವರನ್ನು ಕೊಂದ ಅನಿತಾ ಕುಮಾರಿ ಅಲಿಯಾಸ್ ಅನಿತಾ ಸಿಂಗ್ ಅವರ ಮೇಲೆ ಚಾಯ್‌ಬಾಸಾದ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ವಿಶ್ವನಾಥ್ ಶುಕ್ಲಾಈ ತೀರ್ಪು ಪ್ರಕಟಿಸಿದ್ದಾರೆ. ಅಲ್ಲದೆ ಅಪರಾಧಿಗೆ 10,000 ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಕೃತ್ಯ ನಡೆಸಿದ ನಂತರ ಅನಿತಾ ತನ್ನ ಪತಿಯ ಶವವನ್ನು ಸೀಲಿಂಗ್‌ ಫ್ಯಾನ್‌ಗೆ ನೇಣು ಹಾಕಿದ್ದಾಳೆ. ಪ್ರಕರಣ ಸಂಬಂಧ ಕೇಸ್‌ ದಾಖಲಿಸಿಕೊಂಡಿದ್ದ ಪೊಲೀಸರು, ಪತ್ನಿ ಅನಿತಾ ಕುಮಾರಿ ಭಾಗಿಯಾಗಿರುವ ಬಗ್ಗೆ ಸಾಕ್ಷ್ಯಾಧಾರ ದೊರೆತ ನಂತರ ಅವರನ್ನು ಬಂಧಿಸಲಾಗಿತ್ತು.

ಇದನ್ನು ಓದಿ; ತನ್ನ ಕತ್ತು ತಾನೇ ಕೊಯ್ಕೊಂಡ: ಚಾಕು, ಪಿಸ್ತೂಲ್ ಹಿಡಿದು ಗಾಳೀಲಿ ಗುಂಡು ಹಾರಿಸುತ್ತಾ ಓಡಿದ ಭೂಪ..!

ಅನಿತಾ ಮತ್ತು ರಾಜೀವ್ ಅವರು 2007 ರಲ್ಲಿ ವಿವಾಹವಾಗಿದ್ದರು. ಆದರೆ ಅವರ ಸಂಬಂಧವು ಸೌಹಾರ್ದಯುತವಾಗಿರಲಿಲ್ಲ ಮತ್ತು ಅವರಿಬ್ಬರೂ ಒಟ್ಟಿಗೆ ಇರಲಿಲ್ಲ ಎಂದು ಪೊಲೀಸ್ ವರಿಷ್ಠಾಧಿಕಾರಿ ಅಶುತೋಷ್ ಶೇಖರ್ ಹೇಳಿದ್ದು, ಆದರೆ, ಗಂಡನಿಗೆ 2013 ರಲ್ಲಿ ರೈಲ್ವೆಯಲ್ಲಿ ಗ್ರೂಪ್ ಡಿ ಸಿಬ್ಬಂದಿ ಹುದ್ದೆ ದೊರೆತಾಗ, ಪತ್ನಿ ವಾಪಸ್‌ ಪತಿಯ ಜತೆಗೆ ವಾಸ ಮಾಡುತ್ತಿದ್ದರು ಎಂದೂ ತಿಳಿದುಬಂದಿದೆ.

ರೈಲ್ವೆ ಉದ್ಯೋಗ ದೊರೆತ ಬಳಿಕ ಗಂಡನಿಗೆ ಚಾಯ್‌ಬಾಸಾದಲ್ಲಿ ನೀಡಲಾಗಿದ್ದ ಕ್ವಾರ್ಟರ್ಸ್‌ನಲ್ಲಿ ತಮ್ಮ ಮಗಳೊಂದಿಗೆ ಒಟ್ಟಿಗೆ ವಾಸವಿದ್ದು, ಅಲ್ಲಿಯೇ ಈ ಘಟನೆ ನಡೆದಿದೆ. ಪತಿ ಸಾವಿನ ನಂತರ ನಡೆದ ವಿಚಾರಣೆ ವೇಳೆ ಅನಿತಾ ತನ್ನ ಪತಿಯನ್ನು ತಾನೇ ಕೊಂದಿರುವುದಾಗಿ ಒಪ್ಪಿಕೊಂಡಿದ್ದಳು. ಕರುಣೆಯ ಆಧಾರದ ಮೇಲೆ ಆತನ ಕೆಲಸ ಪಡೆಯಲು ಕೊಲೆ ಮಾಡಿರುವುದಾಗಿಯೂ ಅಪರಾಧಿ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ.

ಇದನ್ನೂ ಓದಿ; ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್‌ ಸೆಕ್ಸ್‌: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!

ಒಟ್ಟಾರೆ, ಪತಿಯ ಜತೆಗೆ ವಾಸಿಸಲು ಇಷ್ಟಪಡದ ಮಹಿಳೆ ಆತ ಸತ್ತ ಬಳಿಕ ಆತನ ಕೆಲಸ ತನಗೆ ಸಿಗುತ್ತದೆ ಎಂಬ ಒಂದೇ ದೃಷ್ಟಿಯಿಂದ ಈ ಕೊಲೆ ಮಾಡಿರುವುದು ಸಾಬೀತಾಗಿದ್ದು, ಈತ ಆ ಮಹಿಳೆಗೆ ಜೀವಾವಧಿ ಶಿಕ್ಷೆ ಪ್ರಕಟವಾಗಿದೆ. 

ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು