ಕೈದಿಗಳೊಂದಿಗೆ ಜೈಲಲ್ಲೇ ಮಹಿಳಾ ಗಾರ್ಡ್ಸ್ ಸೆಕ್ಸ್: 18 ಮಂದಿ ವಜಾ, ಮೂವರು ಕಂಬಿ ಹಿಂದೆ..!
ಯುಕೆಯ ಅತಿದೊಡ್ಡ ಪುರುಷ ಜೈಲು ಎಚ್‌ಎಂಪಿ ಬರ್ವಿನ್‌ನಲ್ಲಿನ ಕಾನೂನುಬಾಹಿರ ಚಟುವಟಿಕೆಗಳು 2017 ರಲ್ಲಿ ಈ ಕಟ್ಟಡವನ್ನು ತೆರೆದಾಗಿನಿಂದ ಪ್ರಾರಂಭವಾಗಿದ್ದು ಮತ್ತು ಮೂರು ಮಹಿಳೆಯರು ಈ ಕಾರಣಕ್ಕಾಗಿ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ ಎಂದೂ ಅಂತಾರಾಷ್ಟ್ರೀಯ ಮಾಧ್ಯಮಗಳು ಹೇಳಿದೆ.
ಲಂಡನ್ (ಮಾರ್ಚ್ 14, 2023): ಅಪರಾಧ ಮಾಡಿ ಜೈಲಿಗೆ ಹೋದವು ಮಹಿಳಾ ಕಾವಲುಗಾರರ ಜತೆಗೆ ಚಕ್ಕಂದವಾಡಿರುವ ಘಟನೆ ವರದಿಯಾಗಿದೆ ನೋಡಿ. ಈ ಹಿನ್ನೆಲೆ ಮಹಿಳಾ ಗಾರ್ಡ್ ಮತ್ತು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ. ಆದರೆ, ಇದು ನಮ್ಮ ದೇಶದಲ್ಲಲ್ಲ ಬಿಡಿ. ಕೈದಿಗಳೊಂದಿಗೆ ಜೈಲಿನಲ್ಲೇ ಲೈಂಗಿಕ ಸಂಬಂಧ ಹೊಂದಿದ ಆರೋಪದ ಮೇಲೆ ಹದಿನೆಂಟು ಮಹಿಳಾ ಗಾರ್ಡ್‌ಗಳು ಮತ್ತು ಸಿಬ್ಬಂದಿಯನ್ನು ವಜಾಗೊಳಿಸಲಾಗಿದೆ ಹಾಗೂ ರಾಜೀನಾಮೆ ಕೊಟ್ಟು ಹೊರ ಹೋಗಿದ್ದಾರೆ ಎಂದು ಯುಕೆ ವರದಿ ಹೇಳಿದೆ.
ಯುಕೆಯ ಅತಿದೊಡ್ಡ ಪುರುಷ ಜೈಲು ಎಚ್‌ಎಂಪಿ ಬರ್ವಿನ್‌ನಲ್ಲಿನ ಕಾನೂನುಬಾಹಿರ ಚಟುವಟಿಕೆಗಳು 2017 ರಲ್ಲಿ ಈ ಕಟ್ಟಡವನ್ನು ತೆರೆದಾಗಿನಿಂದ ಪ್ರಾರಂಭವಾಗಿದ್ದು ಮತ್ತು ಮೂರು ಮಹಿಳೆಯರು ಈ ಕಾರಣಕ್ಕಾಗಿ ಜೈಲು ಶಿಕ್ಷೆಯನ್ನು ಎದುರಿಸಬೇಕಾಗಿದೆ ಎಂದೂ ಅಂತಾರಾಷ್ಟ್ರೀಯ ಮಾಧ್ಯಮಗಳಾದ ಬಿಸಿಸಿ ಹಾಗೂ ಮಿರರ್ ಹೇಳಿದೆ.
ಇದನ್ನು ಓದಿ: ಚಾಕು ಹಿಡಿದು ಮಗನನ್ನೇ ದರೋಡೆ ಮಾಡಲು ಹೋದ ತಂದೆ..!
ದರೋಡೆಕೋರನೊಬ್ಬನಿಗೆ ಫೋನ್ ಅನ್ನು ಕಳ್ಳಸಾಗಣೆ ಮಾಡಲು ಗಾರ್ಡ್‌ವೊಬ್ಬರು ನೆರವಾಗಿದ್ದು, ಅದಕ್ಕೆ ಹಣವನ್ನೂ ಪಡೆದಿದ್ದರು. ಬಳಿಕ ಆ ಫೋನ್ ಮೂಲಕ ನಗ್ನ ಚಿತ್ರಗಳನ್ನು ಸಂದೇಶದ ಮೂಲಕ ಕಳಿಸಿಕೊಳ್ಳುತ್ತಿದ್ದರು ಎಂದು ಮಿರರ್ ವರದಿ ಮಾಡಿದೆ. ಬಳಿಕ, ಆ ಗಾರ್ಡ್‌ನನ್ನು ಕಳೆದ ವರ್ಷವೇ ವಜಾ ಮಾಡಲಾಗಿತ್ತಂತೆ. ಇನ್ನೊಂದೆಡೆ, ಜೈಲಿನಲ್ಲಿದ್ದ ಡ್ರಗ್ ಡೀಲರ್‌ನೊಂದಿಗೆ ಗಾರ್ಡ್ ಎಮಿಲಿ ವ್ಯಾಟ್ಸನ್ ಲೈಂಗಿಕ ಸಂಬಂಧ ಹೊಂದಿದ್ದರು ಎಂದೂ ತಿಳಿದುಬಂದಿದೆ. 2 ಬಾರಿ ಲೈಂಗಿಕ ಕ್ರಿಯೆ ನಡೆದಿದ್ದು, ಈ ಪೈಕಿ ಅವನ ಸೆಲ್‌ನೊಳಗೆ ಒಮ್ಮೆ ಸಂಭೋಗಿಸಿದಳು ಎಂದು ಯುಕೆ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಕೇಳಿಬಂದಿದೆ.
ಮತ್ತು ಪ್ರೊಬೇಷನ್ ಅಧಿಕಾರಿ ಆಯ್ಶಿಯಾ ಗುನ್ ಅವರು ಶಸ್ತ್ರಸಜ್ಜಿತ ದರೋಡೆಕೋರನೊಂದಿಗೆ ಸಂಭೋಗ ನಡೆಸಿದ್ದರು ಮತ್ತು ಇವರಿಬ್ಬರು ಪೋರ್ನ್ ಚಿತ್ರಗಳು ಮತ್ತು ವಿಡಿಯೋಗಳನ್ನು ವಿನಿಮಯ ಮಾಡಿಕೊಂಡಿದ್ದರು ಎಂದೂ ಮಿರರ್ ವರದಿ ಮಾಡಿದೆ. ಇನ್ನು, ಗುನ್ ಮತ್ತು ವ್ಯಾಟ್ಸನ್ ಇಬ್ಬರಿಗೂ ಜೈಲು ಶಿಕ್ಷೆ ವಿಧಿಸಲಾಗಿದೆ. ಇನ್ನು,
2,000 ಕೈದಿಗಳ ಸಾಮರ್ಥ್ಯದ ಈ ಜೈಲಿನಲ್ಲಿ ಸಿಕ್ಕಿಬಿದ್ದ 18 ಮಹಿಳೆಯರು ಕಾರ್ಯಾಚರಣೆಯ ಸಿಬ್ಬಂದಿ ಅಥವಾ ಪುನರ್ವಸತಿ ಮುಂತಾದ ಪಾಲುದಾರ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದರು ಎಂದು ಬಿಬಿಸಿ ವರದಿ ಮಾಡಿದೆ.
ಇದನ್ನೂ ಓದಿ: 5 ವರ್ಷದ ನಿರಂತರ ಸಮ್ಮತಿ ಲೈಂಗಿಕ ಕ್ರಿಯೆ ಅತ್ಯಾಚಾರವಲ್ಲ: ಕರ್ನಾಟಕ ಹೈಕೋರ್ಟ್
ಇನ್ನು, ಸರಿಯಾದ ರೀತಿಯಲ್ಲಿ ಸಂದರ್ಶನ ನಡೆದಿರಲಿಲ್ಲ. ಮುಖಾಮುಖಿ ಸಂದರ್ಶನ ನಡೆಸದೆ ಝೂಮ್ ಮೂಲಕವೇ ಇಂಟರ್‌ವ್ಯೂ ಮಾಡಲಾಗಿತ್ತು. ಈ ಕಾರಣದಿಂದ ಹೀಗಾಗಿದೆ ಎಂದು ಜೈಲು ಅಧಿಕಾರಿಗಳ ಸಂಘದ ಅಧ್ಯಕ್ಷರು ದೂರಿದ್ದಾರೆ ಎಂದೂ ತಿಳಿದುಬಂದಿದೆ. ಮಹಿಳೆಯರಿಗೆ ತರಬೇತಿಯನ್ನು ಹೆಚ್ಚಿಸುವುದಾಗಿ ಈ ಹಿಂದೆ HM Prison Service ಘೋಷಿಸಿತ್ತು ಮತ್ತು "ನಮ್ಮ ಆದರ್ಶಪ್ರಾಯ ಸೇವೆಯನ್ನು ದುರ್ಬಲಗೊಳಿಸುವ ಗಾರ್ಡ್‌ಗಳನ್ನು ಬೇರುಸಹಿತ ಕಿತ್ತೊಗೆಯುವುದಾಗಿಯೂ ಎಚ್ಚರಿಕೆ ನೀಡಿದೆ" ಎಂದು ಬಿಬಿಸಿ ವರದಿ ಮಾಡಿದೆ. ತಾವು ಕಾನೂನಿಗಿಂತ ಹೆಚ್ಚು ಎಂದು ಭಾವಿಸುವ ಕೆಲವು ಅಧಿಕಾರಿಗಳನ್ನು ಸಹಿಸುವುದಿಲ್ಲ ಎಂದೂ ಸಂಸ್ಥೆ ಒತ್ತಿಹೇಳಿತು.
ಇದೇ ರೀತಿ, 2019 ರಲ್ಲಿ ಇಂಗ್ಲೆಂಡ್ ಮತ್ತು ವೇಲ್ಸ್‌ನಲ್ಲಿ 31 ಮಹಿಳಾ ಅಧಿಕಾರಿಗಳನ್ನು ಅನುಚಿತ ಸಂವಾದದ ಕಾರಣದಿಂದ ವಜಾಗೊಳಿಸಲಾಗಿದೆ ಎಂದು ಮಿರರ್ ವರದಿ ಮಾಡಿದೆ.
ಇದನ್ನೂ ಓದಿ: Bengaluru: ಹೀಗೂ ಉಂಟು..! ಪತ್ನಿ ತಡವಾಗಿ ಏಳ್ತಾಳೆ ಎಂದು ಪತಿಯಿಂದ ಪೊಲೀಸರಿಗೆ ದೂರು