ವೀಲಿಂಗ್ ಮಾಡುವ ವೇಳೆ ಅಡ್ಡ ಬಂದಿದ್ದಕ್ಕೆ ಯುವತಿಗೆ ನಿಂದನೆ; ರಕ್ಷಣೆಗೆ ಬಂದವನ ಮೇಲೆ ಮಾರಣಾಂತಿಕ ಹಲ್ಲೆ!
ಬೈಕ್ ವೀಲಿಂಗ್ ಮಾಡುವ ವೇಳೆ ಅಡ್ಡ ಬಂದ ಯುವತಿಯನ್ನು ಚುಡಾಯಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಪುಂಡನೋರ್ವ ಯುವತಿ ಪರ ಮಾತನಾಡಿದ ವ್ಯಕ್ತಿಯ ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ.
ತುಮಕೂರು (ಸೆ.26): ಬೈಕ್ ವೀಲಿಂಗ್ ಮಾಡುವ ವೇಳೆ ಅಡ್ಡ ಬಂದ ಯುವತಿಯನ್ನು ಚುಡಾಯಿಸುತ್ತಿದ್ದನ್ನು ಪ್ರಶ್ನಿಸಿದ್ದಕ್ಕೆ ಪುಂಡನೋರ್ವ ಯುವತಿ ಪರ ಮಾತನಾಡಿದ ವ್ಯಕ್ತಿಯ ಮೇಲೆ ಮಚ್ಚಿನಿಂದ ಮನಸೋ ಇಚ್ಛೆ ಹಲ್ಲೆ ನಡೆಸಿ ಪರಾರಿಯಾದ ಘಟನೆ ತುಮಕೂರು ನಗರದ ಮರಳೂರು ದಿಣ್ಣೆಯಲ್ಲಿ ನಡೆದಿದೆ.
ಇರ್ಫಾನ್ ಮಚ್ಚಿನಿಂದ ಹಲ್ಲೆ ನಡೆಸಿದ ಆರೋಪಿ, ಯುವತಿ ರಕ್ಷಣೆಗೆ ಮುಂದಾಗಿದ್ದ ಮತ್ತೊರ್ವ ಇರ್ಫಾನ್(30) ಮೇಲೆ ಹಲ್ಲೆ. ಕುತ್ತಿಗೆ, ಕೈ, ತಲೆಗೆ ಲಾಂಗ್ ನಿಂದ ಹಲ್ಲೆ. ಇರ್ಫಾನ್ (30) ಸ್ಥಿತಿ ಗಂಭೀರ, ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು. ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಮೈಸೂರಲ್ಲಿ ಮಗನ ಬೈಕ್ ವ್ಹೀಲಿಂಗ್ ಶೋಕಿಗೆ ವೃದ್ಧನ ಬಲಿ: ಪಿಎಸ್‌ಐ ಯಾಸ್ಮೀನ್ ತಾಜ್ ಎತ್ತಂಗಡಿ!
ನಗರದ ಮುಖ್ಯರಸ್ತೆಗಳಲ್ಲಿ ವೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುವ ಇರ್ಫಾನ್. ವೀಲಿಂಗ್ ಮಾಡುವ ಯುವತಿ ಅಡ್ಡ ಬಂದಿದ್ದಕ್ಕೆ ಯುವತಿಯನ್ನು ಕೆಳಗೆ ತಳ್ಳಿ ಅವಾಚ್ಯವಾಗಿ ನಿಂದಿಸಿ ಚುಡಾಯಿಸಿದ್ದ ಆರೋಪಿ. ಈ ವೇಳೆ ಯುವತಿಯ ರಕ್ಷಣೆಗೆ ಬಂದಿದ್ದ ಇನ್ನೋರ್ವ ಇರ್ಫಾನ್, ಸಾದೀಕ್. ಆರೋಪಿಗೆ ಬೈದು ಬುದ್ಧಿ ಹೇಳಿದ್ದರು. ಇದರಿಂದ ಕುಪಿತಗೊಂಡ ಆರೋಪಿ ಇರ್ಫಾನ್ ಸ್ನೇಹಿತರೊಂದಿಗೆ ಬಂದು ಸಾಧಿಕ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ.
ತುಮಕೂರು ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪುಂಡರ ಹಾವಳಿ ಮಿತಿಮೀರಿದ್ದು, ವೀಲಿಂಗ್ ಹಾವಳಿ ತಡೆಗಟ್ಟಲು ಜಯನಗರ ಪೊಲೀಸರು ವಿಫಲರಾಗಿದ್ದಾರೆ. ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.