ಪರಿಸರ ಪ್ರೇಮಿ 'ಸಾಲುಮರದ ವೀರಾಚಾರಿ' ಮಿಟ್ಲಕಟ್ಟೆ ನೇಣಿಗೆ ಶರಣು!
ಸಾಲುಮರದ ತಿಮ್ಮಕ್ಕಳಂತೆ, ವೃಕ್ಷತಪಸ್ವಿಯಾಗಿಯಾದ್ದ "ಸಾಲುಮರದ ವೀರಾಚಾರಿ" ಮಿಟ್ಲಕಟ್ಟೆ ನೇಣಿಗೆ ಶರಣಾಗಿದ್ದಾರೆ. ಅವರು ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಹೋರಾಟ ನಡೆಸಿದ್ದರು.ಇದೇ ಕಾರಣದಿಂದ ಮನನೊಂದು ನೇಣಿಗೆ ಶರಣಾಗಿದ್ದಾರೆ.
ದಾವಣಗೆರೆ (ಸೆ.20): ಸಾಲುಮರದ ವೀರಾಚಾರಿ, ಪರಿಸರ ಪ್ರೇಮಿ ಎಂದೇ ಪ್ರಸಿದ್ಧಿ ಪಡೆದಿದ್ದ ಮಿಟ್ಲಕಟ್ಟೆ ವೀರಾಚಾರಿ ನೇಣಿಗೆ ಶರಣಾಗಿದ್ದಾರೆ..ಮಧ್ಯೆರಾತ್ರಿ ಮರಕ್ಕೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲುಮರದ ತಿಮ್ಮಕ್ಕನಂತೆಯೇ ವೃಕ್ಷತಪಸ್ವಿಯಾಗಿದ್ದ ಮಿಟ್ಲಕಟ್ಟೆ ವೀರಾಚಾರಿ ಹೋದಲ್ಲೆಲ್ಲ ಹಸಿರು ಬೆಳೆಸುವ ಕಾಯಕದಲ್ಲಿ ತೊಡಗಿಕೊಂಡಿದ್ದರು. ಅವರ ಪರಿಸರ ಪ್ರೇಮ, ಕಾಳಜಿಯನ್ನು ಗುರುತಿಸಿ ರಾಜ್ಯ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತ್ತು.
ನೇಣು ಹಾಕೋದನ್ನ ತಪ್ಪಿಸೋದು ಬಿಟ್ಟು ವಿಡಿಯೋ ಮಾಡಿದ ಭೂಪರು: ಮಾನವೀಯತೆ ಮರೆತು ಬಿಟ್ರಾ ಜನ?
ಮಿಟ್ಲಕಟ್ಟೆ ಗ್ರಾಮದಲ್ಲಿ ನ್ಯಾಯಬೆಲೆ ಅಂಗಡಿ ಅಕ್ರಮದ ವಿರುದ್ಧ ಕಳೆದೊಂದು ವರ್ಷದಿಂದ ಹೋರಾಟ ನಡೆಸುತ್ತಿದ್ದ ವೀರಾಚಾರಿ ಅವರು, ನ್ಯಾಯಬೆಲೆ ಅಂಗಡಿ ಮಾಲೀಕ ಬಡವರಿಗೆ ಪಡಿತರ ವಿತರಿಸುತ್ತಿಲ್ಲ, ಕಾಳಸಂತೆಗೆ ಪಡಿತರ ಮಾರಾಟ ಮಾಡುತ್ತಿದ್ದಾರೆ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ಹೋರಾಟ ನಡೆಸಿದ್ದರು.
ವೃಕ್ಷತಪಸ್ವಿಯಾಗಿದ್ದ ವೀರಾಚಾರಿ. 3000ಕ್ಕೂ ಹೆಚ್ಚು ಮರಗಳನ್ನು ಬೆಳೆಸಿದ್ದಾರೆ. ಯಾವಾಗಲೂ ಊರೂರು ಅಲೆಯುತ್ತಾ ಗಿಡಗಳನ್ನು ನಾಟಿಸುವಂತೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದರು. ದಾವಣಗೆರೆ ಜಿಲ್ಲೆಗೆ "ಸಾಲುಮರದ ವೀರಾಚಾರಿ" ಎಂದೇ ಚಿರಪರಿಚಿತರಾದ ವೀರಾಚಾರಿ. ಪರಿಸರ ಕುರಿತಾಗಿ ಅವರ ಕಾಳಜಿ ರಾಜ್ಯಾದ್ಯಂತ ಮೆಚ್ಚುಗೆ ವ್ಯಕ್ತವಾಗಿತ್ತು. ಹಲವು ಸಂಘ-ಸಂಸ್ಥೆಗಳನ್ನು ವೀರಾಚಾರಿಯವರನ್ನು ಸನ್ಮಾನಿಸಿ ಗೌರವಿಸಿದ್ದರು.,
ಪರಿಸರ ಪ್ರೇಮದ ಜತೆಗೆ ಬಡವರ ಪರ ದನಿಯಾಗಿದ್ದ ಮಿಟ್ಲಕಟ್ಟೆ ವೀರಾಚಾರಿ,. ಮಿಟ್ಲಗಟ್ಟೆ ಗ್ರಾಮದ ನ್ಯಾಯಬೆಲೆ ಅಂಗಡಿಯಲ್ಲಿ ಬಡವರಿಗೆ ಸರಿಯಾಗಿ ಪಡಿತರ ವಿತರಿಸುತ್ತಿಲ್ಲ ಎಂದು ನ್ಯಾಯಬೆಲೆ ಅಕ್ರಮದ ವಿರುದ್ಧ ವಿರುದ್ಧ ನಿರಂತರವಾಗಿ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದ್ದರು. ನಿನ್ನೆ ಇದೇ ವಿಚಾರವಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನ್ಯಾಯ ಬೆಲೆ ಅಂಗಡಿ ರದ್ದು ಮಾಡಬೇಕೇ, ಬೇಡವೇ ಎಂಬ ಬಗ್ಗೆ ಚರ್ಚೆ ನಡೆದಿತ್ತು. ನ್ಯಾಯಾಲಯದಲ್ಲಿ ನ್ಯಾಯ ಸಿಗದಿದ್ದರೆ ಜನರಲ್ಲಿ ನ್ಯಾಯ ಸಿಗದಿದ್ದರೆ ದೇವರಲ್ಲಿ ನ್ಯಾಯ ಸಿಗದಿದ್ದರೆ ನೇಣಿಗೆ ಶರಣಾಗುವುದಾಗಿ ವೀರಾಚಾರಿ ವಾಗ್ದಾನ ಮಾಡಿದ್ದರು. ಸುದೀರ್ಘ ಹೋರಾಟದ ನಂತರವೂ ನ್ಯಾಯಬೆಲೆ ಅಂಗಡಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ವೀರಾಚಾರಿ ಮನನೊಂದು, ಮೊದಲೇ ಕೊಟ್ಟಿದ್ದ ವಾಗ್ದಾನದಂತೆ ನೆನ್ನೆ ತಡರಾತ್ರಿ 2 ಗಂಟೆಗೆ ನೇಣಿಗೆ ಶರಣಾಗಿದ್ದಾರೆ.
ಜೊತೆಯಾಗಿ ಸಾಯೋಣ ಅಂತಾ ದಂಪತಿ ತೀರ್ಮಾನಿಸಿದ್ರು.. ಅತಿಯಾದ ತೂಕದಿಂದಾಗಿ ಹೆಂಡ್ತಿ ಬಚಾವ್ ಆದಳು!
ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು: ಪರಿಸರ ಪ್ರೇಮಿ ವೀರಾಚಾರಿ ನೇಣಿಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ ರೊಚ್ಚಿಗೆದ್ದ ಗ್ರಾಮಸ್ಥರು, ಮಿಟ್ಲಕಟ್ಟೆ ಗ್ರಾಮದ ರಸ್ತೆಗಳನ್ನು ಬಂದ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಯಾರೂ ಕೂಡ ಗ್ರಾಮಕ್ಕೆ ಬಾರದಂತೆ ರಸ್ತೆ ಬಂದ್ ಮಾಡಿದ್ದಾರೆ. ಜಿಲ್ಲಾಧಿಕಾರಿ, ಆಹಾರ ಇಲಾಖೆ ಅಧಿಕಾರಿಗಳು ಬರುವರೆಗೂ ಶವವನ್ನು ಕುಣಿಕೆಯಿಂದ ಕೆಳಗಿಸದಂತೆ ಪಟ್ಟು ಹಿಡಿದು ಕುಳಿತಿದ್ದಾರೆ.. ನ್ಯಾಯಬೆಲೆ ಅಂಗಡಿಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು. ನ್ಯಾಯಬೆಲೆ ಅಂಗಡಿ ಮಾಲೀಕ ಸಿದ್ದರಾಮಪ್ಪ ವಿರುದ್ದ ಆಕ್ರೋಶಗೊಂಡ. ಗ್ರಾಮಸ್ಥರನ್ನು ಮುತ್ತಿಗೆ ಹಾಕಲು ತೆರಳಿದ್ದರು. ಈ ವೇಳೆ ನ್ಯಾಯಬೆಲೆ ಅಂಗಡಿಯಿಂದ ಕಳುಹಿಸಿದ ಪೊಲೀಸರು.ಗ್ರಾಮದಲ್ಲಿ ಬಿಗುವಿನ ವಾತಾವರಣ. ಹರಿಹರ ಗ್ರಾಮಾಂತರ ಠಾಣೆ ಪೊಲೀಸರಿಂದ ಗ್ರಾಮದಲ್ಲಿ ಬಿಗಿಭದ್ರತೆ.