ಜೊತೆಯಾಗಿ ಸಾಯೋಣ ಅಂತಾ ದಂಪತಿ ತೀರ್ಮಾನಿಸಿದ್ರು.. ಅತಿಯಾದ ತೂಕದಿಂದಾಗಿ ಹೆಂಡ್ತಿ ಬಚಾವ್ ಆದಳು!
ಆಗ್ರಾದ ಫತೇಪುರ್ ಸಿಕ್ರಿ ಪ್ರದೇಶದಲ್ಲಿ ಪತಿ ಮತ್ತು ಪತ್ನಿ ಮರಕ್ಕೆ ಹಗ್ಗ ಬಿಗಿದು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದಾರೆ. ಪತಿ ಮೃತಪಟ್ಟರೂ ಪತ್ನಿ ನೇಣು ಬಿಗಿದುಕೊಂಡ ಹಗ್ಗ ತುಂಡಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸದ್ಯ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕೌಟುಂಬಿಕ ಸಮಸ್ಯೆಯಿಂದ ಇಬ್ಬರೂ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದರು.
ಆಗ್ರಾ (ಸೆ.13): ಭೂಮಿಯ ಮೇಲೆ ಬದುಕುವ ಹುಲ್ಲುಕಡ್ಡಿಯಷ್ಟು ಆಯಸ್ಸಿದ್ದರೂ, ಅದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎನ್ನುವ ಮಾತು ನಿಜ. ಇನ್ನೇನು ತಮ್ಮ ಜೀವನ ಸಾಕು. ಪ್ರತಿ ದಿನ ಜಗಳವಾಡಿಕೊಂಡೇ ಬದುಕುವುದರಲ್ಲಿ ಅರ್ಥವಿಲ್ಲ ಎಂದುಕೊಂಡ ಪತಿ-ಪತ್ನಿ ಜೊತೆಯಾಗಿಯೇ ಸಾಯೋಕೆ ನಿರ್ಧಾರ ಮಾಡಿದ್ದರು. ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನವೇನೋ ಮಾಡಿದ್ದರು. ಆದರೆ, ವಿಧಿ ಇಬ್ಬರಿಗೂ ಜೊತೆಯಾಗಿಯೇ ಸಾಯೋಕೆ ಬಿಡಲಿಲ್ಲ. ಪತ್ನಿ ಬಿಗಿದುಕೊಂಡಿದ್ದ ನೇಣು ಹಗ್ಗ ಅತಿಯಾದ ಭಾರದಿಂದಾಗಿ ತುಂಡಾಗಿದೆ. ಆದರೆ, ಈ ಭಾಗ್ಯ ಪತಿಗಿರಲಿಲ್ಲ. ಗಂಡನನ್ನು ರಕ್ಷಿಸಿ ಎಂದು ಜನರು ಕರೆದುಕೊಂಡು ಬರುವಷ್ಟರಲ್ಲಿ ಪತಿ ನೇಣು ಹಗ್ಗದಲ್ಲಿ ಶವವಾಗಿ ನೇತಾಡುತ್ತಿದ್ದ. ಉತ್ತರ ಪ್ರದೇಶದ ಫತೇಪುರ್ ಸಿಕ್ರಿ ಪ್ರದೇಶದ ಗಿಲೋಯ್ ಗ್ರಾಮದಲ್ಲಿ ಕೌಟುಂಬಿಕ ಸಮಸ್ಯೆಯ ಕಾರಣದಿಂದಾಗಿ ಪತಿ ಹಾಗೂ ಪತ್ನಿ ಇಬ್ಬರೂ ಗದ್ದೆಗೆ ತೆರಳಿ ಅಲ್ಲಿನ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದರು. ಗಂಡ ಬಿಗಿದುಕೊಂಡ ನೇಣು ಹಗ್ಗ ಗಟ್ಟಿಯಾಗಿದ್ದರಿಂದ ಸಾವು ಕಂಡರೆ, ಅತಿಯಾದ ತೂಕದಿಂದಾಗಿ ಪತ್ನಿ ಬಿಗಿದುಕೊಂಡಿದ್ದ ನೇಣು ಹಗ್ಗ ತುಂಡಾಗಿ ನೆಲಕ್ಕೆ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ.
ಆಗ್ರಾದಿಂದ (Agra) ಸುಮಾರು 50 ಕಿಲೋಮೀಟರ್ ದೂರದಲ್ಲಿ ಈ ಘಟನೆ ನಡೆದಿದೆ. ಮಾಹಿತಿಯ ಪ್ರಕಾರ, ಇಲ್ಲಿ 54 ವರ್ಷದ ರೈತ ಮಾನ್ ಸಿಂಗ್ (Man Singh) ಅಲಿಯಾಸ್ ಕಲುವಾ ಮತ್ತು ಅವರ 50 ವರ್ಷದ ಪತ್ನಿ ಸಂತಾ ದೇವಿ (Santa Devi) ತಮ್ಮ ಮನೆಯಿಂದ ಸುಮಾರು 300 ಮೀಟರ್ ದೂರದಲ್ಲಿರುವ ಹೊಲದಲ್ಲಿನ ಮರದ ಕೊಂಬೆಗೆ ನೇಣು (Noose) ಹಗ್ಗವನ್ನು ಕಟ್ಟಿದ್ದರು. ಆತ್ಮಹತ್ಯೆ (Sucide) ಮಾಡಿಕೊಳ್ಳುವ ಉದ್ದೇಶದಲ್ಲಿ ಇಬ್ಬರೂ ಮರಕ್ಕೆ ಹಗ್ಗೆ ಕಟ್ಟಿ ನೇಣು ಬಿಗಿದುಕೊಂಡಿದ್ದರು. ಪತಿ ಬಿಗಿದುಕೊಂಡ ನೇಣು ಹಗ್ಗ ಗಟ್ಟಿಯಾಗಿದ್ದರಿಂದ ಸಾವು ಕಂಡಿದ್ದರೆ, ಹೆಚ್ಚಿನ ತೂಕದ ಕಾರಣದಿಂದಾಗಿ ಪತ್ನಿಯ ಬಿಗಿದುಕೊಂಡಿದ್ದ ನೇಣು ಹಗ್ಗ ತುಂಡಾಗಿದೆ. ನೆಲಕ್ಕೆ ಬಿದ್ದ ಪತ್ನಿ ಬಳಿಕ ಗಂಡನನ್ನು ಬದುಕಿಸುವಂತೆ ಜನರನ್ನು ಕರೆಯಲು ಓಡಿದ್ದಾಳೆ. ಆದರೆ, ಜನರು ಬಂದು ಬಚಾವ್ ಮಾಡುವುದರ ಒಳಗಾಗಿ ಪತಿ ಸಾವು ಕಂಡಿದ್ದಾನೆ.
MISSING BOY FOUND DEAD: 2 ವರ್ಷದ ಬಾಲಕನ ಶವ ಪತ್ತೆ; ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಕಂಬನಿ
ದಿಕ್ಕು ತೋಚದ ಸ್ಥಿತಿಯಲ್ಲಿ ಜಮೀನಿನಿಂದ ಮನೆಗೆ ತೆರಳುತ್ತಿದ್ದ ಆಕೆ ದಾರಿಯಲ್ಲಿ ಇಬ್ಬರು ಪೊಲೀಸರನ್ನು (Police) ಭೇಟಿಯಾದರು. ಪೊಲೀಸರು ಸಂತಾ ದೇವಿಯ ಕತ್ತಿನಲ್ಲಿದ್ದ ಹಗ್ಗವನ್ನು ಬಿಡಿಸಿ ಆಂಬ್ಯುಲೆನ್ಸ್‌ಗೆ ಕರೆ ಮಾಡಿದರು. ಮಹಿಳೆ ಪೊಲೀಸರಿಗೆ ಇಡೀ ಘಟನೆಯನ್ನು ವಿವರಿಸಿದ ಬಳಿಕ, ಪೊಲೀಸರು ತಕ್ಷಣ ಆ ಮರದ ಬಳಿಗೆ ಬಂದರು. ಕುಣಿಕೆಯಲ್ಲಿ ನೇತಾಡುತ್ತಿದ್ದ ಮಾನ್ ಸಿಂಗ್‌ರ ಶವವನ್ನು ಕೆಳಗಿಳಿಸಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಅವರ ಉಸಿರಾಟ ನಿಂತುಹೋಗಿತ್ತು. ದೇಹದಲ್ಲಿ ಯಾವ ಚಲನೆಯೂ ಇದ್ದಿರಲಿಲ್ಲ. ಇನ್ನೊಂದೆಡೆ ಪತ್ನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬಲೆಗೆ ಬಿದ್ದ ಚಿರತೆ ಗುಂಡಿಟ್ಟು ಹತ್ಯೆಗೈದವರ ಬಂಧನ
ಅಚ್ಚನೇರಾದ ಸಿಒ ರಾಜೀವ್ ಸಿರೋಹಿ ಪ್ರಕಾರ, ಮನೆಯ ಆಂತರಿಕ ಕಲಹದ ಕಾರಣ ಪತಿ ಮತ್ತು ಪತ್ನಿ ಈ ನಿರ್ಧಾರ ಮಾಡಿದ್ದರು ಇಬ್ಬರಿಗೂ ಮದುವೆಯಾಗಿ ನಾಲ್ಕು ಮಕ್ಕಳಿದ್ದಾರೆ. ಪತಿ ಮತ್ತು ಪತ್ನಿಗೆ ಇತ್ತೀಚಿನ ದಿನಗಳಲ್ಲಿ ಹೊಂದಾಣಿಕೆ ಇದ್ದಿರಲಿಲ್ಲ ಎಂದು ಸಿಒ ಹೇಳಿದ್ದಾರೆ. ಈ ಕಾರಣದಿಂದ ಇಬ್ಬರೂ ತಮ್ಮ ಜೀವನವನ್ನು ಕೊನೆಗೊಳಿಸಲು ನಿರ್ಧರಿಸಿದರು. ಸದ್ಯ ಮಹಿಳೆಯ ವಿಚಾರಣೆ ನಡೆಯುತ್ತಿದೆ. ಈ ಬಗ್ಗೆ ಮನೆಯ ಇತರ ಸದಸ್ಯರನ್ನೂ ವಿಚಾರಣೆ ನಡೆಸಲಾಗುವುದು. ಪ್ರಕರಣದ ಪರಿಶೀಲನೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.