Asianet Suvarna News Asianet Suvarna News

ಬಳ್ಳಾರಿ ಪರ್ಲ್ ವರ್ಲ್ಡ್‌ ಪ್ರಕರಣ: ಹಳ್ಳ ಹಿಡೀತಾ ಪೊಲೀಸರ ತನಿಖೆ..?

*  ಮುತ್ತಿನ‌ ಕತೆ ನಂಬಿ ಬೀದಿಗೆ ಬಿದ್ದವರ ಕಥೆ
*  ಪ್ರಕರಣದಲ್ಲಿ ಪೊಲೀಸರು ಸೈಲೆಂಟಾದ್ರಾ ?
*  ಎರಡು ತಿಂಗಳಾಗುತ್ತಾ ಬಂದ್ರೂ ಆರೋಪಿಗಳ ಸುಳಿವೇ ಇಲ್ಲ
 

Is it Ballari Police Failure of Accused Arrest on Pearl World Scam Case grg
Author
Bengaluru, First Published Apr 26, 2022, 12:45 PM IST

ವರದಿ: ನರಸಿಂಹ ಮೂರ್ತಿ ಕುಲಕರ್ಣಿ, ಏಷ್ಯಾನೆಟ್‌ ಸುವರ್ಣ ನ್ಯೂಸ್‌, ಬಳ್ಳಾರಿ

ಬಳ್ಳಾರಿ(ಏ.26):  ಐಎಂಎ ಮಾದರಿಯ ಬಳ್ಳಾರಿಯ ಮುತ್ತಿನ ವಂಚನೆಯ ಕೋಟಿ ಕೋಟಿ ಹಣ ಲೂಟಿ ಪ್ರಕರಣ ನಿಧಾನವಾಗಿ ಹಳ್ಳ ಹಿಡಿಯುತ್ತಾ ಸಾಗಿದೆ. ಮತ್ತಿನ ಕತೆ ನಂಬಿ ಕೋಟಿ ಕೋಟಿ ಕಳೆದುಕೊಂಡವರ ಇದೀಗ ಬೀದಿಗೆ ಬೀಳೋ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕಾರಣ ಈವರೆಗೂ ಆರೋಪಿಗಳನ್ನು(Accused) ಪತ್ತೆ ಹಚ್ಚುವಲ್ಲಿ ಪೊಲೀಸರು(Police) ವಿಫಲವಾಗಿದ್ದು, ಬಹುತೇಕ ಪ್ರಕರಣ ಇಲ್ಲಿಗೆ ಮುಗಿಯಿತೇ? ಎನ್ನುವ ಅನುಮಾನ ಕಾಡುತ್ತಿದೆ. 
ಮತ್ತು ಕಟ್ಟೋ ಕಟ್ಟು ಕತೆ ನಂಬಿಸಿ ವಂಚನೆ

ಹೌದು, ಅದೊಂದು ಸುಂದರವಾದ ಕಟ್ಟು ಕತೆ ಅದನ್ನು ನಂಬಿದ ಜನರು ಇದೀಗ ಕೋಟಿಗಟ್ಟಲೇ ಹಣ ಕಳೆದುಕೊಂಡು ಪೊಲೀಸ್ ಠಾಣೆ ಅಲೆಯುತ್ತಿದ್ದಾರೆ. ಎಂಟು ತಿಂಗಳ ಹಿಂದೆ ಬಳ್ಳಾರಿಗೆ(Ballari) ಬಂದಿರೋ ಆಂಧ್ರ ಮೂಲದ ವಂಚಕರು ಆರೇಳು ತಿಂಗಳಲ್ಲಿ ಜನರಿಂದ ಸರಿಸುಮಾರು ಎಂಟತ್ತು ಕೋಟಿ ಹಣ ವಸೂಲಿ ಮಾಡಿ ಪರಾರಿಯಾಗಿದ್ದಾರೆ. ಪ್ರಕರಣ  ಎರಡು ತಿಂಗಳ ಹಿಂದೇ ಬಯಲಿಗೆ ಬಂದಿದ್ರೂ ಈವರೆಗೂ ಆರೋಪಿಗಳ ಸುಳಿವೇ ಇಲ್ಲ. ಆಂಧ್ರಪ್ರದೇಶ(Andhra Pradesh) ಹಲವು ಸ್ಥಳದಲ್ಲಿ ಹುಡುಕಾಡಿ ಬಂದ ಬಳ್ಳಾರಿ ಪೊಲೀಸರು ಬರಿಗೈಯಲ್ಲಿ ವಾಪಸ್ ಆಗಿದ್ದಾರೆ.

Is it Ballari Police Failure of Accused Arrest on Pearl World Scam Case grg

ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ ಜನ: ಅತಿ ಆಸೆ ಗತಿಗೇಡು ಅನ್ನೋದು ಇದಕ್ಕೆ..!

ಏನಿದು ಪ್ರಕರಣ ಹಣ ಹೇಗೆ ಕಳೆದುಕೊಂಡ್ರು? 

ಕೊರೋನಾದಿಂದ(Coronavirus) ಕಂಗೆಟ್ಟ ಜನರಿಗೆ ಇರೋ ಹಣ ಉಳಿಸೋದ್ರ ಜೊತೆಗೆ ಅದೆಷ್ಟು ಬೇಗ ಮತ್ತಷ್ಟು ಹಣ ಗಳಿಸಬೇಕೆಂಬ ತವಕ ಇತ್ತು ಆಗಲೇ ಬಳ್ಳಾರಿಗೆ ಎಂಟ್ರಿಯಾಗಿದ್ದು ಆಂಧ್ರ ಮೂಲದ ಪರ್ಲ್ ವರ್ಲ್ಡ್‌(Pearl World) ಎನ್ನುವ ಕಂಪನಿ. ಜನರಿಗೆ ಬಣ್ಣ ಬಣ್ಣದ ಮಾತುಗಳನ್ನು ಹೇಳೋ ಮೂಲಕ ವಂಚನೆ ಮಾಡಿದೆ.

2000 ರೂಪಾಯಿ ಡಿಪಾಸಿಟ್ ಮಾಡಿದ್ರೇ, ಒಂದು ‌ಮುತ್ತಿನ ಪ್ಯಾಕೆಟ್ ‌ನೀಡ್ತಾರೆ. ಅದನ್ನು ಪೋಣಿಸಿ ಕೊಟ್ರೇ ಹತ್ತು ದಿನಗಳ ಬಳಿ 200 ರೂಪಾಯಿ ಹೆಚ್ಚುವರಿ ನೀಡೋ ಸ್ಕೀಂ ಇದಾಗಿತ್ತು.  ಹತ್ತು ದಿನದಲ್ಲಿ ಮುತ್ತಿನ ಸರ ಪೋಣಿಸಿಕೊಟ್ರೇ 2000 ರೂಪಾಯಿಗೆ 200 ರೂಪಾಯಿ ಹೆಚ್ಚುವರಿ ಹಣದ ಅಸೆಗೆ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ಸಾಮಾನ್ಯವಾಗಿ ಒಂದು ಮುತ್ತಿನ ಸರ ಪೊಣಿಸೋಕೆ ಆರ್ಧಗಂಟೆ ಸಾಕು ಆದ್ರೇ ಇಲ್ಲಿ ಇಷ್ಟೊಂದು ಹಣ ಯಾಕೆ ಕೊಡ್ತಾರೆ ಅನ್ನೋದನ್ನು ಜನರು ಯೋಚನೆ ಮಾಡಲೇ ಇಲ್ಲ..

 Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

ಬಡ್ಡಿ ಹಣದಾಸೆಗೆ ಮೋಸ ಹೋದ ಜನತೆ

ಹೆಸರಿಗೆ ಮಾತ್ರ ಮುತ್ತು ಪೋಣಿಸೋದಕ್ಕೆ ಹಣ ಕೊಡ್ತಾರೆ ಎನ್ನುವುದು. ಆದ್ರೇ, ಹಣಕ್ಕೆ ಬಡ್ಡಿ ಲೆಕ್ಕದಲ್ಲಿ 20-30 % ಹೆಚ್ಚುವರಿ ಹಣ ಬರುತ್ತದೆ ಎಂದು‌ ನಂಬಿಸಿ ಮೋಸ ಮಾಡಲಾಗಿದೆ. ಐದು‌ನೂರಕ್ಕೂ ಹೆಚ್ಚು ಜನರಿಂದ ಹತ್ತು ಕೋಟಿಗೂ ಹೆಚ್ಚು ಹಣ ಸಂಗ್ರಹ ಮಾಲೀಕ ಪ್ರಕರಣ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾಗಿದ್ದಾನೆ. ಕಳೆದ ಎಂಟು ತಿಂಗಳ ಹಿಂದೆ ಆರಂಭವಾಗಿದ್ದ  ಕಂಪನಿ ಬಂಡವಾಳ ಎರಡು ತಿಂಗಳ ಹಿಂದೆ ಹೊರಬಿದ್ದಿತ್ತು.‌ ಹಣ ಕಳೆದುಕೊಂಡು ಕಂಗಾಲಾಗಿರೋ ಜನರು ನಿತ್ಯ ಪೊಲೀಸ್ ಠಾಣೆ ಅಲೆಯೋದೇ ಕೆಲಸವಾಗಿದೆ.

ಐದು ನೂರಕ್ಕೂ ಹೆಚ್ಚು ಜನರಿಂದ ದೂರು ದಾಖಲಾದ್ರೂ ಕಂಪನಿ ಮಾಲೀಕ ರೊದ್ದಂ ರವಿ ಹುಡುಕಾಡುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಕೇವಲ ಮ್ಯಾನೇಜರ್ ಕುಮಾರ್ ಎನ್ನುವವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

Follow Us:
Download App:
  • android
  • ios