ಇಶಾನ್ ಕಿಶನ್, ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಸನ್‌ರೈಸರ್ಸ್ ಹೈದರಾಬಾದ್‌ಗೆ 236 ರನ್ ಟಾರ್ಗೆಟ್ ಪ್ಲೇ ಆಫ್ ರೇಸ್ ಮತ್ತಷ್ಟು ಕುತೂಹಲ

ಅಬು ಧಾಬಿ(ಅ.08): ಸನ್‌ರೈಸರ್ಸ್ ಹೈದರಾಬಾದ್(SRH) ವಿರುದ್ಧ ಬೃಹತ್ ಮೊತ್ತದ ನಿರೀಕ್ಷೆಯಲ್ಲಿದ್ದ ಮುಂಬೈ ಇಂಡಿಯನ್ಸ್(Mumbai Indians) 9 ವಿಕೆಟ್ ನಷ್ಟಕ್ಕೆ235 ರನ್ ಸಿಡಿಸಿದೆ. ಇಶಾನ್ ಕಿಶಾನ್(Ishan Kishan) ಹಾಗೂ ಸೂರ್ಯಕುಮಾರ್ ಯಾದವ್(Suryakumar yadav) ಸ್ಫೋಟಕ ಬ್ಯಾಟಿಂಗ್‌ನಿಂದ ಹೈದರಾಬಾದ್ ತಂಡಕ್ಕೆ ರನ್ 236 ಟಾರ್ಗೆಟ್ ನೀಡಿದೆ. ಇದು ಮುಂಬೈ ದಾಖಲಿಸಿದ ಗರಿಷ್ಠ ಸ್ಕೋರ್ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂಲಕ ಪ್ಲೇ ಆಫ್ ಪ್ರವೇಶಕ್ಕೆ ಮುಂಬೈ ಕಠಿಣ ಹೋರಾಟ ನೀಡುತ್ತಿದೆ.

IPL 2021: ಅತೀವೇಗದಲ್ಲಿ ಅರ್ಧಶತಕ, ದಾಖಲೆ ಬರೆದ ಇಶಾನ್ ಕಿಶನ್!

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಿದೆ. ಆರಂಭಿಕರ ಜೋಡಿ 80 ರನ್ ಜೊತೆಯಾಟ ನೀಡಿತು. ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ನಾಯಕ ರೋಹಿತ್ ಶರ್ಮಾ 18 ರನ್ ಸಿಡಿಸಿ ಔಟಾದರು.

ಇಶಾನ್ ಕಿಶನ್ ಅಬ್ಬರ ಮುಂದುವರಿಯಿತು. ಕೇವಲ 16 ಎಸೆತದಲ್ಲಿ ಹಾಫ್ ಸೆಂಚುರಿ ಸಿಡಿಸಿ ದಾಖಲೆ ಬರೆದರು. ಬೌಂಡರಿ ಸಿಕ್ಸರ್ ಅಬ್ಬರ ಮುಂಬೈ ಇಂಡಿಯನ್ಸ್ ಪ್ಲೇಆಫ್ ಕನಸಿಗೆ ಮತ್ತಷ್ಟು ನೀರೆರೆಯಿತು. ಆದರೆ ಕಿಶನ್‌ಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ಹಾರ್ದಿಕ್ ಪಾಂಡ್ಯ ಕೇವಲ 10 ರನ್ ಸಿಡಿಸಿ ಔಟಾದರು.

ಹೃದಯ ಕದಿಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ 7 ಕ್ರಿಕೆಟ್ ಕಳ್ಳರು!

ಕೀರನ್ ಪೋಲಾರ್ಡ್ 13 ರನ್ ಸಿಡಿಸಿ ಔಟಾದರು. ಇತ್ತ ಜೇಮ್ಸ್ ನೀಶಮ್ ಡಕೌಟ್ ಆದರು. ಇತ್ತ ಅಬ್ಬರಿಸಿದ ಕಿಶನ್ 32 ಎಸೆತದಲ್ಲಿ 11 ಬೌಂಡರಿ ಹಾಗೂ 4 ಸಿಕ್ಸರ್ ಮೂಲಕ 84 ರನ್ ಸಿಡಿಸಿ ಔಟಾದರು. ಇಶಾನ್ ಕಿಶನ್ ಬಳಿಕ ಸೂರ್ಯಕುಮಾರ್ ಯಾದವ್ ಅಬ್ಬರ ಆರಂಭಗೊಂಡಿತು.

ಯಾದವ್‌ಗೆ ಇತರರಿಂದ ಸಾಥ್ ಸಿಗಲಿಲ್ಲ. ಆದರೆ ಕಿಶನ್ ರೀತಿ ಏಕಾಂಗಿ ಹೋರಾಟ ಮುಂದುವರಿಸಿದರು. ಸ್ಪೋಟಕ ಬ್ಯಾಟಿಂಗ್ ಮೂಲಕ ಹಾಫ್ ಸೆಂಚುರಿ ಪೂರೈಸಿದರು. ಇತ್ತ ಕ್ರುನಾಲ್ ಪಾಂಡ್ಯ 9 ರನ್ ಸಿಡಿಸಿ ಔಟಾದರು. ನಥನ್ ಕೌಲ್ಟರ್ ನೈಲ್ 3 ರನ್ ಸಿಡಿಸಿ ಔಟಾದರು. 

ಪಂದ್ಯ ಸೋತರೂ ಪ್ರೀತಿ ಗೆದ್ದ ಸಿಎಸ್‌ಕೆ ಬೌಲರ್.. ಮೈದಾನದ ಹೊರಗೊಂದು ಕ್ಯೂಟ್ ಲವ್ ಸ್ಟೋರಿ!

ಪಿಯುಷ್ ಚಾವ್ಲಾ ಯಾವುದೇ ರನ್ ಗಳಿಸಲಿಲ್ಲ. ಆದರೆ ಸೂರ್ಯಕುಮಾರ್ ಯಾದವ್ ಹೋಾಟ ಮುಂದುವರಿಸಿದರು. ಸತತ ವಿಕೆಟ್ ಪತನದಿಂದ ಅಂತಿಮ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್‌ಗೆ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ಸೂರ್ಯಕುಮಾರ್ 82 ರನ್ ಸಿಡಿಸಿ ಔಟಾದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 9 ವಿಕೆಟ್ ನಷ್ಟಕ್ಕೆ 235 ರನ್ ಸಿಡಿಸಿದೆ. 

ಮುಂಬೈ ಇಂಡಿಯನ್ಸ್ ಗರಿಷ್ಠ ಸ್ಕೋರ್:
235/9 v ಹೈದರಾಬಾದ್ , ಅಬು ಧಾಬಿ, 20221
223/6 v ಪಂಜಾಬ್ ಕಿಂಗ್ಸ್, ಮುಂಬೈ 2016
219/6 v ಚೆನ್ನೈ ಸೂಪರ್ ಕಿಂಗ್ಸ್, ದೆಹಲಿ 2021
218/7 v ಡೆಲ್ಲಿ ಕ್ಯಾಪಿಟಲ್ಸ್, ದೆಹಲಿ 2010


Scroll to load tweet…