Winter Session: ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಹೊಂದಿದ್ದರೆ ಅಪರಾಧ ಅಲ್ಲ!
* ಚಳಿಗಾಲದ ಕಲಾಪದಲ್ಲಿ ಮಸೂದೆ ಮಂಡನೆಗೆ ಕೇಂದ್ರ ಸಿದ್ಧತೆ
* ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಹೊಂದಿದ್ದರೆ ಅಪರಾಧ ಅಲ್ಲ
* ಚಟ ಬಿಟ್ಟವರಿಗೆ ಜೈಲು ಶಿಕ್ಷೆ ವಿನಾಯ್ತಿ ಪ್ರಸ್ತಾವ
ನವದೆಹಲಿ(ನ.25): ಮಾದಕವಸ್ತು ವ್ಯಸನಿಗಳನ್ನು ಅಪರಾಧಿಗಳು ಎಂದು ಪರಿಗಣಿಸದೆ ‘ಸಂತ್ರಸ್ತರು’ ಎಂದು ಪರಿಗಣಿಸುವ ಮಸೂದೆಯೊಂದು ನ.29ರಿಂದ ಆರಂಭ ಆಗುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ (Winter Session) ಮಂಡನೆ ಆಗಲಿದೆ. ಮಂಗಳವಾರ ಸರ್ಕಾರ ಬಿಡುಗಡೆ ಮಾಡಿರುವ ಮಸೂದೆಗಳ ಪಟ್ಟಿಯಲ್ಲಿ ಮಾದಕ ವಸ್ತು ನಿಗ್ರಹ ಕಾಯ್ದೆ (NDPS) ತಿದ್ದುಪಡಿ ಮಸೂದೆ-2021 ಕೂಡ ಇದೆ. ತಿದ್ದುಪಡಿ ಮಸೂದೆಯಲ್ಲಿ ಎನ್‌ಡಿಪಿಎಸ್ ಕಾಯ್ದೆ-1985ರಲ್ಲಿನ (NDPS Act, 195) ಸೆಕ್ಷನ್ 39 ಹಾಗೂ ಇತರ ಕೆಲವು ಸೆಕ್ಷನ್‌ಗಳಿಗೆ ತಿದ್ದುಪಡಿ ಮಾಡಲಾಗುತ್ತದೆ. ವೈಯಕ್ತಿಕ ಉದ್ದೇಶಕ್ಕೆ ಡ್ರಗ್ಸ್ ಸೇವನೆಯನ್ನು ಅಪರಾಧ ಎಂದು ಪರಿಗಣಿಸುವ ಸೆಕ್ಷನ್ 39ರಲ್ಲಿ ಮಾರ್ಪಾಡು ಮಾಡಲಾಗುತ್ತದೆ. ‘ಸಣ್ಣ ಪ್ರಮಾಣ’ದ ಡ್ರಗ್ಸ್ ಸೇವನೆಯನ್ನು ಅಪರಾಧದಿಂದ ಹೊರಗಿಡಲಾಗುತ್ತದೆ. ತಾವಾಗಿಯೇ ವ್ಯಸನಿಗಳು ಮನಃಪರಿವರ್ತನೆ ಮಾಡಿಕೊಂಡು ಮರುವಸತಿ ಕೇಂದ್ರಗಳಲ್ಲಿ ತಮ್ಮ ಚಟ ಬಿಟ್ಟರೆ ಅವರಿಗೆ ಜೈಲಿನಿಂದ ವಿನಾಯ್ತಿ ದೊರಕುತ್ತದೆ ಎಂದು ಮೂಲಗಳು ಹೇಳಿವೆ.
ಅಕ್ಟೋಬರ್‌ನಲ್ಲಿ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯವು ಕಾಯ್ದೆ ತಿದ್ದುಪಡಿಗೆ ಶಿಫಾರಸು ಮಾಡಿತ್ತು. ವೈಯಕ್ತಿಕ ಉದ್ದೇಶಕ್ಕಾಗಿ ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸುತ್ತಿರುವ ವ್ಯಕ್ತಿಗಳನ್ನು ಜೈಲುಶಿಕ್ಷೆಯಿಂದ ಹೊರಗಿಡಬೇಕು ಎಂದು ಕೋರಿತ್ತು.
ಈಗಿನ ಎನ್‌ಡಿಪಿಎಸ್ ಕಾಯ್ದೆಯ 27ನೇ ಪರಿಚ್ಛೇದ ಹೇಳುವಂತೆ ಯಾವುದೇ ಮಾದಕ ವಸ್ತು ಇಟ್ಟುಕೊಂಡವರಿಗೆ 1 ವರ್ಷದವರೆಗೆ ಜೈಲು ಶಿಕ್ಷೆ ಹಾಗೂ 20 ಸಾವಿರ ರು.ವರೆಗೆ ದಂಡ ವಿಧಿಸಲಾಗುತ್ತದೆ.
ಇತ್ತೀಚೆಗೆ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ. ಇದಕ್ಕೂ ಮುನ್ನ ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಕೂಡ ಇದೇ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದರು. ಹೀಗಾಗಿ ತಿದ್ದುಪಡಿ ಮಸೂದೆಗೆ ಮಹತ್ವ ಬಂದಿದೆ.
ಯಾಕೆ ಈ ನಿರ್ಧಾರ?
- ಅಲ್ಪ ಪ್ರಮಾಣದಲ್ಲಿ ಡ್ರಗ್ಸ್ ಸೇವಿಸುವವರಿಗೆ ಪರಿವರ್ತನೆ ಅಗತ್ಯ
- ಆದರೆ ಡ್ರಗ್ಸ್ ಇಟ್ಟುಕೊಂಡವರಿಗೆ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ
- ಅಂಥವರನ್ನು ಶಿಕ್ಷಿಸುವ ಬದಲು ಮನಃಪರಿವರ್ತನೆ ಮಾಡಬೇಕು
- ಸಣ್ಣ ಪ್ರಮಾಣದಲ್ಲಿ ಡ್ರಗ್ಸ್ ಹೊಂದುವುದನ್ನು ಅಪರಾಧವಾಗಿಸಬಾರದು
- ಹೀಗೆಂದು ಸಾಮಾಜಿಕ ನ್ಯಾಯ ಸಚಿವಾಲಯ ಶಿಫಾರಸು ಮಾಡಿತ್ತು
- ಅದರನ್ವಯ ಸ್ವಯಂ ಚಟ ಬಿಟ್ಟವರಿಗೆ ಜೈಲು ಶಿಕ್ಷೆ ವಿನಾಯ್ತಿ
ಸಮೀರ್ ವಾಂಖೆಡೆಗೆ ಶಾಕ್: ನವಾಬ್ ಮಲಿಕ್ ವಿರುದ್ಧದ ಕೇಸ್ ವಜಾ!
): ಸಮೀರ್ ವಾಂಖೆಡೆಗೆ (Narcotics Control Bureau (NCB) Zonal Director Sameer Wankhede) ನ್ಯಾಯಾಲಯದಲ್ಲಿ (Bombay High Court) ಭಾರೀ ಹಿನ್ನಡೆಯಾಗಿದೆ. ಎನ್‌ಸಿಬಿ ಅಧಿಕಾರಿ ವಾಂಖೆಡೆ ಅವರ ತಂದೆ ಜ್ಞಾನದೇವ್ ವಾಂಖೆಡೆ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ (Minister Nawab Malik) ವಿರುದ್ಧ ತಮ್ಮ ಕುಟುಂಬದ ಬಗ್ಗೆ ಮಾಡಿದ ಟ್ವೀಟ್‌ನಿಂದ ಮಾನನಷ್ಟ ಮೊಕದ್ದಮೆಯಲ್ಲಿ ಮಧ್ಯಂತರ ಪರಿಹಾರವನ್ನು ನಿರಾಕರಿಸಲಾಗಿದೆ.
ಮಲಿಕ್ ಅವರ ಟ್ವೀಟ್ ಅನ್ನು "ದುರುದ್ದೇಶಪೂರಿತ" ಎಂದು ಬಣ್ಣಿಸಿದ ನ್ಯಾಯಾಲಯ, ಅವರು ಮಾಡಿದ ಆರೋಪಗಳನ್ನು ಈ ಹಂತದಲ್ಲಿ ಸುಳ್ಳಾಗಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಸಚಿವರು ಟ್ವೀಟ್ ಮಾಡಲು ಸ್ವತಂತ್ರರು ಆದರೆ ಸತ್ಯಾಸತ್ಯತೆಗಳ ಸರಿಯಾದ ಪರಿಶೀಲನೆಯ ನಂತರ ಮಾತ್ರ ಎಂದು ಬಾಂಬೆ ಹೈಕೋರ್ಟ್ ಹೇಳಿದೆ. ಫಿರ್ಯಾದಿದಾರರಿಗೆ ಖಾಸಗಿತನದ ಹಕ್ಕಿದೆ, ಪ್ರತಿವಾದಿಯವರಿಗೆ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿದೆ, ಮೂಲಭೂತ ಹಕ್ಕುಗಳ ಸಮತೋಲನ ಇರಬೇಕು ಎಂದು ನ್ಯಾಯಾಲಯ ಹೇಳಿದೆ.