ಗಜೇಂದ್ರಗಡ(ಮಾ.21): ಪಟ್ಟಣದಿಂದ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ನವಜಾತ ಶಿಶುವನ್ನು ಕೊಂದು ಎಸೆದು ಹೋಗಿರುವ ಅಮಾನುಷ ಘಟನೆ ಇಲ್ಲಿನ ಯಲಬುರ್ಗಾ ರಸ್ತೆಯ ಹೊಲವೊಂದರಲ್ಲಿ ಭಾನುವಾರ ಪತ್ತೆಯಾಗಿದೆ.

ಸ್ಥಳೀಯ ಕಿತ್ತೂರ ರಾಣಿ ಚೆನ್ನಮ್ಮ ವೃತ್ತದ ಕೂಗಳತೆಯ ದೂರದ ಯಲಬುರ್ಗಾ ರಸ್ತೆಗೆ ಹೊಂದಿಕೊಂಡಿರುವ ಹೊಲವೊಂದರಲ್ಲಿ ಎಸೆದು ಹೋಗಿದ್ದ ಹಸುಗೂಸಿನ ಮುಖದಲ್ಲಿ ಗಾಯ ಹಾಗೂ ಕುತ್ತಿಗೆ ಸುತ್ತ ಬಿಗಿಯಾಗಿ ಬಿಗಿದಿದ್ದ ಸೀರೆ ಕಂಡ ಸಾರ್ವಜನಿಕರು ದುಷ್ಕರ್ಮಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಕಲಬುರಗಿ: ಚಿಂಚೋಳಿಯಲ್ಲಿ ನವಜಾತ ಶಿಶು ಪತ್ತೆ

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಟ್ಟಣದ ಪಿಎಸ್‌ಐ ಗುರುಶಾಂತ ದಾಶ್ಯಾಳ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.