ದೃಶ್ಯಂ ಚಿತ್ರದ ಸ್ಟೈಲ್‌ನಲ್ಲಿ ನಡೆಯಿತು ಕೊಲೆ, ಗಂಡನನ್ನು ಹೂತು ಸೆಪ್ಟಿಕ್ ಟ್ಯಾಂಕ್ ಕಟ್ಟಿದ್ದ ಪತ್ನಿ!
ಕೊಲೆ ಮಾಡಿದ ರೀತಿ ಹಾಗೂ ಸಮಾಧಿ ಮಾಡಿದ ರೀತಿಯನ್ನು ಗಮನಿಸಿದರೆ, ರವಿಚಂದ್ರನ್ ನಟಿಸಿದ ದೃಶ್ಯಂ ಚಿತ್ರ ಖಂಡಿತಾ ನೆನಪಿಗೆ ಬರುತ್ತದೆ. ಆದರೂ, ಪೊಲೀಸರು ಆರೋಪಿಗಳು ಇದೇ ಚಿತ್ರದಿಂದ ಪ್ರೇರಣೆಗೊಂಡಿದ್ದಾರೆ ಎಂದು ಹೇಳಲು ನಿರಾಕರಿಸಿದ್ದಾರೆ.
ನವದೆಹಲಿ (ಜ.16): ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಹೇಯ ಘಟನೆಯೊಂದು ನಡೆದಿದ್ದು, ಪ್ರಿಯಕರ ಹಾಗೂ ಸ್ನೇಹತನ ಜೊತೆ ಸೇರಿ ಪತ್ನಿಯೇ ಗಂಡನನ್ನು ಕೊಲೆ ಮಾಡಿದ ಘಟನೆ ನಡೆದಿದೆ. ವರದಿಯ ಪ್ರಕಾರ, ಕೊಲೆ ಮಾಡಿದ ಬಳಿಕ ಪತ್ನಿಯು ಈ ಇಬ್ಬರ ಸಹಾಯದಿಂದ ಗಂಡನ ಶವವನ್ನು ಸ್ಥಳೀಯ ನಿರ್ಮಾಣ ಹಂತದ ಪ್ರದೇಶದಲ್ಲಿ ಸಮಾಧಿ ಮಾಡಿದ ಘಟನೆ ನಡೆದಿದೆ. ಬಿಸ್ರಖ್‌ನ ನಿರ್ಮಾಣ ಹಂತದ ಕಟ್ಟಡದ ಸ್ಥಳದಿಂದ ಶವವನ್ನು ವಶಪಡಿಸಿಕೊಂಡ ಬಳಿಕ ಪೊಲೀಸರು ಆತನ ಪತ್ನಿ ನೀತು ಹಾಗೂ ಆಕೆಯ ಪ್ರಿಯಕರ ಹರ್ಪಾಲ್‌ನನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ಗೌರವ್‌ನ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯನ್ನು ಸತೀಶ್ ಪಾಲ್ ಎಂದು ಗುರುತಿಸಲಾಗಿದ್ದು, ಪ್ರಕರಣ ದಾಖಲಾಗುವ ಒಂದು ವಾರದ ಮೊದಲು ನಾಪತ್ತೆಯಾಗಿದ್ದ. ಸಂತ್ರಸ್ತೆಯ ಸಹೋದರ ಸಲ್ಲಿಸಿದ್ದ ನಾಪತ್ತೆ ಪ್ರಕರಣದ ಕುರಿತು ಪೊಲೀಸರು ಕ್ರಮ ಕೈಗೊಂಡಿದ್ದು, ನಂತರ ಪೊಲೀಸರು ಪ್ರಕರಣದಲ್ಲಿ ತನಿಖೆ ಆರಂಭಿಸಿದ್ದಾರೆ. ಪೊಲೀಸರು ಸತೀಶ್ ಪಾಲ್ ಅವರ ಪತ್ನಿ ನೀತು ಅವರನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಪ್ರಾಥಮಿಕ ತನಿಖೆಯಲ್ಲಿ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿರಲಿಲ್ಲ.
ತನಿಖೆಯನ್ನು ಮುಂದುವರಿಸಿದ ನಂತರ, ದಂಪತಿಗಳ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಿದ್ದ ನೀತು ಅವರ ಪ್ರೇಮಿ ಹರ್ಪಾಲ್ ಅನ್ನು ಪೊಲೀಸರು ಪತ್ತೆಹಚ್ಚಲು ಸಾಧ್ಯವಾಯಿತು. ಪೊಲೀಸರು ಹರ್ಪಾಲ್‌ನೊಂದಿಗೆ ತಮ್ಮ ಎಂದಿನ ಶೈಲಿನ ವಿಚಾರಣೆಯನ್ನು ಮುಂದುವರೆಸಿದರು ಮತ್ತು ಹೆಚ್ಚಿನ ಮಾಹಿತಿಗಾಗಿ ಆತನನ್ನು ವಿದವಿಧವಾಗಿ ವಿಚಾರಣೆಗೆ ಒಳಪಡಿಸಿದರು. ಈ ವೇಳೆ ಹರ್ಪಾಲ್ ಅಪರಾಧವನ್ನು ಒಪ್ಪಿಕೊಂಡಿದ್ದು, ತಾನು ನೀತು ಮತ್ತು ಗೌರವ್ ಜೊತೆಗೂಡಿ ಸತೀಶ್ ಪಾಲ್ ನನ್ನು ಕೊಂದಿರುವುದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಸತೀಶ್ ಪಾಲ್ ಅವರನ್ನು ಕೊಲೆ ಮಾಡಿದರೆ ತಾನು ಮತ್ತು ನೀತು ಪರಸ್ಪರ ಮದುವೆಯಾಗಬಹುದು ಎಂಬ ಭರವಸೆಯಿಂದ ಹರ್ಪಾಲ್ ಪೂರ್ವಯೋಜಿತ ಕೊಲೆಯನ್ನು ರೂಪಿಸಿದ್ದಾನೆ ಎಂದು ವರದಿಗಳು ಹೇಳಿವೆ. ಇವರಿಬ್ಬರು ಸ್ನೇಹಿತನ ನೆರವಿನೊಂದಿಗೆ ಸಂತ್ರಸ್ತೆಯ ಶವವನ್ನು ಹತ್ತಿರದ ಜಮೀನಿನಲ್ಲಿ ಮನೆ ನಿರ್ಮಿಸಲು ಯೋಜಿಸಿದ್ದ ಸ್ಥಳದಲ್ಲಿ ಕೊಂದು ಹೂತು ಹಾಕಿದ್ದರು. ಆರೋಪಿಗಳು ಶವ ಹೂತಿಟ್ಟ ಜಾಗದಲ್ಲಿ ಸೆಪ್ಟಿಕ್ ಟ್ಯಾಂಕ್ ಕೂಡ ನಿರ್ಮಾಣ ಮಾಡಿದ್ದರು.
ನಿತಿನ್ ಗಡ್ಕರಿಗೆ ಜೀವ ಬೆದರಿಕೆ ಹಾಕಿದವನ ಕ್ರೈಂ ಹಿಸ್ಟರಿ, ತಾಯಿ-ಮಗುವನ್ನ ಕೊಂದಿದ್ದ ಪಾತಕಿ ಜಯೇಶ್!
ಒಟ್ಟಾರೆ ಈ ಎಲ್ಲಾ ಘಟನೆಗಳನ್ನು ನೋಡಿದಾಗ ಕನ್ನಡದಲ್ಲಿ ರವಿಚಂದ್ರನ್ ನಟಿಸಿರುವ ದೃಶ್ಯ ಚಿತ್ರ ನೆನಪಿಗೆ ಬರುವುದು ಖಚಿತ. ಆದರೆ, ಗಾಜಿಯಾಬಾದ್‌ನ ಪೊಲೀಸರು ಈ ಚಿತ್ರಕ್ಕೂ, ಕೊಲೆ ಘಟಿಸಿದ ರೀತಿಗೂ ತಳುಕು ಹಾಕಲು ನಿರಾಕರಿಸಿದ್ದಾರೆ. ಚಿತ್ರದ ಪ್ರೇರಣೆಯಿಂದಲೇ ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ಹೇಳಲು ನಿರಾಕರಿಸಿದ್ದಾರೆ.
9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್ ಮಾಡಿ ಬ್ಲ್ಯಾಕ್‌ಮೇಲ್..!
ಮೃತದೇಹವನ್ನು ಹೂತಿಟ್ಟ ಜಾಗದಲ್ಲಿ ಪ್ರೇಮಿಗಳಿಬ್ಬರೂ ಸೇರಿ ಕಟ್ಟುತ್ತಿದ್ದರು ಎಂಬ ಮಾಹಿತಿಯೂ ಸಿಕ್ಕಿದೆ. ಜನವರಿ 2 ರಂದು ಪತಿಗೆ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧಿ ಬೆರೆಸಲಾಗಿತ್ತು. ಪ್ರಜ್ಞೆ ತಪ್ಪಿದ ಬಳಿಕ, ನೀತು, ಹರ್ಪಾಲ್ ಹಾಗೂ ಗೌರವ್ ಸೇರಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸತೀಶ್ ಪಾಲ್‌ರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ವರದಿಗಳ ಪ್ರಕಾರ ಪೊಲೀಸರು ಗೌರವ್‌ಗಾಗಿ ಹುಡುಕಾಟ ನಡೆಸುತ್ತಿರುವಾಗಲೇ ಹರ್ಪಾಲ್ ಮತ್ತು ನೀತು ಅವರನ್ನು ಬಂಧಿಸಿದ್ದಾರೆ. ಇಬ್ಬರು ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಐಪಿಸಿಯ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯಾಧಾರ ಕಣ್ಮರೆಯಾಗುವುದು ಅಥವಾ ಅಪರಾಧಿಯನ್ನು ಉಳಿಸಲು ತಪ್ಪು ಮಾಹಿತಿ ನೀಡುವುದು) 34 (ಸಾಮಾನ್ಯ ಉದ್ದೇಶ) ಮತ್ತು 120 ಬಿ (ಅಪರಾಧ ಸಂಚು) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.