9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತರಿಂದ ರೇಪ್: ವಿಡಿಯೋ ರೆಕಾರ್ಡ್‌ ಮಾಡಿ ಬ್ಲ್ಯಾಕ್‌ಮೇಲ್..!

ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತ ಹುಡುಗರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜತೆಗೆ, ಆರೋಪಿಗಳು ಕೃತ್ಯದ ವಿಡಿಯೋ ಸೆರೆ ಹಿಡಿದಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

2 minors rape 9 year old girl records video to blackmail cops ash

ದೇಶದಲ್ಲಿ ಪ್ರತಿದಿನ ಸಾಮಾನ್ಯವಾಗಿ ಒಂದಿಲ್ಲೊಂದು ಅತ್ಯಾಚಾರ ಪ್ರಕರಣಗಳು ದಾಖಲಾಗುತ್ತಲೆ ಇವೆ. ಅದರಲ್ಲೂ, ಪೋಕ್ಸೋ ಕಾಯ್ದೆಯಡಿಯೂ ಹೆಚ್ಚು ರೇಪ್‌ ಕೇಸ್‌ಗಳು ವರದಿಯಾಗುತ್ತರುತ್ತದೆ. ಆದರೆ, ಇತ್ತೀಚೆಗೆ ಅಪ್ರಾಪ್ತ ಯುವಕರೇ ಬಾಲಕಿಯರ ಮೇಲೆ ಅತ್ಯಾಚಾರ ಮಾಡುತ್ತಿರುವ ಹೆಚ್ಚು ಹೆಚ್ಚು ವರದಿಗಳು ಬೆಳಕಿಗೆ ಬರುತ್ತಿದೆ. ಇದೇ ರೀತಿ, ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ 9 ವರ್ಷದ ಬಾಲಕಿ ಮೇಲೆ ಇಬ್ಬರು ಅಪ್ರಾಪ್ತ ಹುಡುಗರು ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ. ಇದರ ಜತೆಗೆ, ಆರೋಪಿಗಳು ಕೃತ್ಯದ ವಿಡಿಯೋ ಸೆರೆ ಹಿಡಿದಿದ್ದು, ಈ ಬಗ್ಗೆ ಯಾರಿಗಾದರೂ ಹೇಳಿದರೆ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಹೆದ್ದಾರಿ ಪೊಲೀಸ್‌ ಠಾಣೆಯ ಪೊಲೀಸರು ಭಾನುವಾರ ಮಾಹಿತಿ ನೀಡಿದ್ದಾರೆ. 

ಸಂತ್ರಸ್ತೆಯ (Victim) ಸಂಬಂಧಿಕರು (Relatives) ನೀಡಿದ ದೂರಿನ ಆಧಾರದ ಮೇಲೆ ಎಫ್‌ಐಆರ್ (FIR) ದಾಖಲಿಸಲಾಗಿದೆ ಮತ್ತು ಬಾಲಕಿಯನ್ನು (Girl) ವೈದ್ಯಕೀಯ ಪರೀಕ್ಷೆಗೆ (Medical Test) ಕಳುಹಿಸಲಾಗಿದೆ ಎಂದು ಹೆದ್ದಾರಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಆಫೀಸರ್ (Station House Officer) (ಎಸ್‌ಎಚ್‌ಒ) ಛೋಟೆ ಲಾಲ್ ತಿಳಿಸಿದ್ದಾರೆ. ಶನಿವಾರ ಸಂಜೆ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಾಗ ಘಟನೆ ನಡೆದಿದೆ. ನೆರೆಹೊರೆಯಲ್ಲಿ ವಾಸಿಸುವ ಹುಡುಗರು (Boys) ಮನೆಗೆ ನುಗ್ಗಿ ಲೈಂಗಿಕ ಕಿರುಕುಳ (Molest) ನೀಡಲು ಪ್ರಾರಂಭಿಸಿದರು. ಸಂತ್ರಸ್ಥೆ ವಿರೋಧಿಸಿದಾಗ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂಬಂಧಿಕರು ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. 

ಇದನ್ನು ಓದಿ: ಬಸ್‌ಗೆ ಕಾಯುತ್ತಿದ್ದ 90 ವರ್ಷದ ವೃದ್ಧೆಗೆ ಬೈಕ್‌ನಲ್ಲಿ ಲಿಫ್ಟ್, ಅತ್ಯಾಚಾರ ಎಸಗಿ ಪರಾರಿ!

ಅಲ್ಲದೆ, ಆರೋಪಿಗಳು ಘಟನೆಯ ವಿಡಿಯೋವನ್ನು ಸಹ ಮಾಡಿದ್ದಾರೆ ಮತ್ತು ಸಂತ್ರಸ್ತೆ ಈ ಬಗ್ಗೆ ಯಾರಿಗಾದರೂ ಹೇಳಿದರೆ ಅದನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದೂ ದೂರಿನಲ್ಲಿ ತಿಳಿಸಲಾಗಿದೆ. ಇನ್ನು, ಈ ಕೃತ್ಯವೆಸಗಿದ್ದಾರೆ ಎನ್ನಲಾದ ಆರೋಪಿಗಳು ಸಹ ಅಪ್ರಾಪ್ತರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

ಶನಿವಾರ ಸಂಜೆ 6:30 ರ ವೇಳೆಗೆ ಮನೆಗೆ ಬಂದ ಅಪ್ರಾಪ್ತ ಬಾಲಕರು ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಸಂತ್ರಸ್ಥೆಯ ಪೋಷಕರು ಹೇಳಿಕೊಂಡಿದ್ದಾರೆ. ಅಲ್ಲದೆ, ಆರೋಪಿಗಳು ತಮ್ಮ ಮಗಳ ಮನೆಯ ಬಳಿಯೇ ವಾಸ ಮಾಡುತ್ತಿದ್ದರು ಎಂದೂ ಅವರು ಆರೋಪಿಸಿದ್ದಾರೆ. ಈ ಮಧ್ಯೆ, ಈ ಪ್ರಕರಣ ಸಂಬಂಧ ಕೇಸ್‌ ದಾಖಲಿಸಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಉತ್ತರ ಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ. 

ಇದನ್ನೂ ಓದಿ: ಬಾಯ್‌ಫ್ರೆಂಡ್ ಎದುರೇ ಕಾಲೇಜು ವಿದ್ಯಾರ್ಥಿನಿ ಮೇಲೆ ಐವರಿಂದ ಗ್ಯಾಂಗ್ ರೇಪ್!

ತಮಿಳುನಾಡಿನಲ್ಲಿ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್..!

ಈ ರೀತಿ ಅತ್ಯಾಚಾರ ಪ್ರಕರಣಗಳು ಆಗಾಗ್ಗೆ ವರದಿಯಾಗುತ್ತಲೇ ಇರುತ್ತದೆ. ಇತ್ತೀಚೆಗೆ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ 19 ವರ್ಷದ ವಿದ್ಯಾರ್ಥಿನಿ ತನ್ನ ಬಾಯ್‌ಫ್ರೆಂಡ್ ಜೊತೆ ಹೊರಗಡೆ ಹೋಗಿದ್ದಾಗ. ನಿರ್ಜನ ಪ್ರದೇಶದಲ್ಲಿ ಇವರನ್ನು ಅಡ್ಡಹಾಕಿದ ಐವರ ಗ್ಯಾಂಗ್, ಬಾಯ್‌ಫ್ರೆಂಡ್ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ವಿದ್ಯಾರ್ಥಿನಿಯ ಮೇಲೆ ಐವರು ಗ್ಯಾಂಗ್ ರೇಪ್ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಕೃತ್ಯಕ್ಕೆ ಸಹಕರಿಸಿದಿದ್ದರೆ ಚಾಕುವಿನಲ್ಲಿ ಹತ್ಯೆ ಮಾಡಿ ಇಲ್ಲೇ ಸುಟ್ಟು ಭಸ್ಮಮಾಡುವುದಾಗಿ ಬೆದರಿಸಿ ಒಬ್ಬರ ನಂತರ ಮತ್ತೊಬ್ಬರು ಅತ್ಯಾಚಾರ ಎಸಗಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡಿನ ಕಾಂಚಿಪುರಂ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪ್ರಕರಣ ಸಂಬಂಧ ಪೊಲೀಸರು ಐವರನ್ನು ಬಂಧಿಸಿದ್ದು, 6ನೇ ಆರೋಪಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ತಿಳಿದುಬಂದಿದೆ. 

ಖಾಸಗಿ ಕಾಲೇಜಿನಲ್ಲಿ ಬಿಬಿಎ ಹಾಗೂ ಬಿಕಾಂ ಒದುತ್ತಿದ್ದ ವಿದ್ಯಾರ್ಥಿನಿ ಹಾಗೂ ಆಕೆಯ ಬಾಯ್‌ಫ್ರೆಂಡ್ ಸಂಜೆ 6 ಗಂಟೆಗೆ ಹೊರಗಡೆ ಹೋಗಿದ್ದಾರೆ. ಪುದುಚೇರಿ-ಬೆಂಗಳೂರು ರಸ್ತೆಯಲ್ಲಿ 2 ಕಿಲೋಮೀಟರ್ ಮುಂದೆ ಸಾಗಿದ್ದಾರೆ. ಕಾಂಚಿಪುರಂ ಜಿಲ್ಲೆಯ ಹೊರವಲಯದ ನಿರ್ಜನ ಪ್ರದೇಶ ತಲುಪುತ್ತಿದ್ದಂತೆ ಕಾಮುಕರ ಗ್ಯಾಂಗ್ ಇವರನ್ನು ಅಡ್ಡಹಾಕಿದೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: ಅತ್ಯಾಚಾರ ಮಾಡಿದ ಅಪ್ರಾಪ್ತನ ತಾಯಿಗೆ ಶೂಟ್‌ ಮಾಡಿದ 16 ವರ್ಷದ ಬಾಲಕಿ..!

Latest Videos
Follow Us:
Download App:
  • android
  • ios