Min read

ಗಂಡನೊಂದಿಗೆ ಅಕ್ರಮ ಸಂಬಂಧ ಶಂಕೆ; ಮಹಿಳೆ ಮನೆ ಮೇಲೆ ದಾಳಿ ಮಾಡಿಸಿದ ಪತ್ನಿ!

illicit relationship with husband  wife who attacked the woman's house in Bengaluru rav
Bengaluru crime

Synopsis

ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮಹಿಳೆಯೋರ್ವಳ ಮನೆ ಮೇಲೆ ಪತ್ನಿ ದಾಳಿ ಮಾಡಿಸಿರುವ ಘಟನೆ ನಗರದ ಮಾರುತಿ ಲೇಔಟ್‌ನ ಬಿಳೇಶಿವಾಲೆ ದೊಡ್ಡ ಗುಬ್ಬಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಬೆಂಗಳೂರು (ಫೆ.5): ತನ್ನ ಗಂಡನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಶಂಕಿಸಿ ಮಹಿಳೆಯೋರ್ವಳ ಮನೆ ಮೇಲೆ ಪತ್ನಿ ದಾಳಿ ಮಾಡಿಸಿರುವ ಘಟನೆ ನಗರದ ಮಾರುತಿ ಲೇಔಟ್‌ನ ಬಿಳೇಶಿವಾಲೆ ದೊಡ್ಡ ಗುಬ್ಬಿ ಮುಖ್ಯ ರಸ್ತೆಯಲ್ಲಿ ನಡೆದಿದೆ.

ಕಳೆದ ಮೂರು ವರ್ಷಗಳ ಹಿಂದೆ  ಮಹಿಳೆಗೆ ಆತ್ಮೀಯರಾಗಿದ್ದ ಶರಣ್ ಎಂಬಾತ. ಮಹಿಳೆ ಮನೆ ಕಟ್ಟಿಸುವಾಗ ಜಲ್ಲಿ , ಎಂ ಸ್ಯಾಂಡ್ , ಬ್ಲಾಕ್ಸ್ ಗಳನ್ನ ಖರೀದಿ ಮಾಡಿದ್ದಾರೆ. ಖರೀದಿ ಮಾಡಿದ ಬಳಿಕ ಕ್ಯಾಶ್ ರೂಪದಲ್ಲಿ ಶರಣ್ ಎಂಬುವವರಿಗೆ ಹಣ ನೀಡಿರುವ ಮಹಿಳೆ. ಇದನ್ನೆ ತಪ್ಪಾಗಿ ತಿಳಿದು ಶರಣ್ ಪತ್ನಿ ಸಮಾಂತಾ, 'ನನ್ನ ಗಂಡನ ಜೊತೆ ಅಕ್ರಮ ಸಂಬಂದ ಇಟ್ಟುಕೊಂಡಿದ್ದಿಯಾ?' ಎಂದು ಗಲಾಟೆ ಮಾಡಿ ಮಹಿಳೆಗೆ ವಾರ್ನಿಂಗ್ ಕೊಟ್ಟಿದ್ದಾರೆ.  

 

ಪರ ಪುರುಷನೊಂದಿಗೆ ಅಕ್ರಮ ಸಂಬಂಧ ಹೊಂದಿರುವ 'ಮಹಿಳೆ'ಗೆ ಏನಾಗುತ್ತೆ ಗೊತ್ತಾ?

ಈ ಘಟನೆ ಬಳಿಕ ಮಹಿಳೆಯ ಜೊತೆ ಶರಣ್ ಮಾತಾಡೋದನ್ನು ಬಿಟ್ಟಿದ್ದಾನೆ. ಆದರೆ ಅದಾದ ಬಳಿಕವು ಮಾಲ್ ಒಂದರಲ್ಲಿ ಶರಣ್ ಮಹಿಳೆ ಜೊತೆ ಕಾಣಿಸಿಕೊಂಡಿದ್ದಾನೆ. ಈ ವಿಚಾರ ಪತ್ನಿಗೆ ತಿಳಿದು ಮಹಿಳೆ ಮೇಲೆ ರೊಚ್ಚಿಗೆದ್ದಿದ್ದಾಳೆ. ಸಮಂತಾ ಹಾಗೂ ಕೆಂಪರಾಜು, ಶರತ್ ಎಂಬುವವರು ಮಹಿಳೆಯ ಮನೆಗೆ ರಾತ್ರೋರಾತ್ರಿ ನುಗ್ಗಿ ಗಲಾಟೆ ಮಾಡಿದ್ದಾರೆ. ಮಹಿಳೆಯ ಮನೆ ಕಿಟಕಿ ಗಾಜು, ಡೋರ್ ಹಾಗೂ ಮನೆಮುಂದೆ ನಿಲ್ಲಿಸಿದ್ದ ಕಾರು, ಬೈಕ್‌ಗಳನ್ನು ಹೊಡೆದು ಗೂಂಡಾವರ್ತನೆ ತೋರಿಸಿರುವ ಮಹಿಳೆ. ಸದ್ಯ ಘಟನೆ ಸಂಬಂಧ ಮಹಿಳೆ ಕೊತ್ತನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಹಿಳಾ ಸಹದ್ಯೋಗಿ ಮೇಲೆ ಹಲ್ಲೆ; ಕರ್ನಾಟಕದ ಐಪಿಎಸ್ ಅಧಿಕಾರಿ ತಮಿಳನಾಡಲ್ಲಿ ಅರೆಸ್ಟ್!

Latest Videos