ಬೆಂಗಳೂರು[ಫೆ. 09]  ಅನೈತಿಕ ಸಂಬಂಧದ ಕಾರಣಕ್ಕೆ ಪತ್ನಿ ಗಂಡನ ಮೇಲೆ ಬಿಸಿ ಎಣ್ಣೆ ಎರಚಿದ್ದಾಳೆ. ಬೆಂಗಳೂರಿನ ಯಶವಂತಪುರದ ಮಂಜುನಾಥ್ ನಗರದಲ್ಲಿ ಘಟನೆ ನಡೆದಿದೆ.

ಪತಿ ಮಂಜುನಾಥ್ ಮೇಲೆ ಪತ್ನಿ ಪದ್ಮಾ ಬಿಸಿಎಣ್ಣೆ ಎರಚಿದ್ದಾಳೆ. ಕಳೆದ 9 ವರ್ಷಗಳ ಹಿಂದೆ ಮದುವೆಯಾಗಿದ್ದ ದಂಪತಿ ಮಧ್ಯೆ ವಿರಸ ಬಂದಿದೆ.  ಗಾಯಾಳು ಮಂಜುನಾಥ್ ದೇಹ ಅರ್ಧದಷ್ಟು ಭಾಗ ಸುಟ್ಟಗಾಯಳಾಗಿದ್ದು ಪರಿಸ್ಥಿತಿ ಚಿಂತಾಜನಕವಾಗಿದೆ.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೆ ಬಿಟ್ಟ ಪಾಪಿ

ಕಳೆದ ಕೆಲ ವರ್ಷಗಳಿಂದ ಪತಿ ಮಂಜುನಾಥ್ ಗೆ ಇನ್ನೊಬ್ಬ ಮಹಿಳೆಯ ಜೊತೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಗಾಯಾಳು ಮಂಜುನಾಥ್ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಯಶವಂತಪುರ ಮಹಿಳಾ ಪೊಲೀಸರು ಮಹಿಳೆ ಪದ್ಮಾ ಬಂಧಿಸಿದ್ದಾರೆ.