ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಅಕ್ರಮ ಚಿನ್ನ ಸಾಗಾಟ, ಮಹಿಳೆ ಬಂಧನ, 38 ಲಕ್ಷ ಮೌಲ್ಯದ ಚಿನ್ನ ಜಪ್ತಿ

ಎರಡು ದಿನಗಳ ಹಿಂದೆ ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿ ₹37.85 ಲಕ್ಷ ಮೌಲ್ಯದ 611.51 ಗ್ರಾಂ ಚಿನ್ನಾಭರಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

Illegal gold smuggling woman arrested in kempegowda airport bengaluru rav

ಬೆಂಗಳೂರು (ಮಾ.2): ಎರಡು ದಿನಗಳ ಹಿಂದೆ ಅಕ್ರಮವಾಗಿ ಚಿನ್ನಾಭರಣ ಸಾಗಿಸುತ್ತಿದ್ದ ಮಹಿಳೆಯೊಬ್ಬರನ್ನು ಬಂಧಿಸಿ ₹37.85 ಲಕ್ಷ ಮೌಲ್ಯದ 611.51 ಗ್ರಾಂ ಚಿನ್ನಾಭರಣವನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.

ಶ್ರೀಲಂಕಾ ದೇಶದ ಆಗಮಿಸಿದ್ದ ಮಹಿಳೆ ಬಳಿ ಚಿನ್ನ ಪತ್ತೆಯಾಗಿದ್ದು, ಫೆ.28ರಂದು ಶ್ರೀಲಂಕಾ ದೇಶದ ವಿಮಾನದಲ್ಲಿ ಚಿನ್ನ ಸಾಗಾಣಿಕೆ ಬಗ್ಗೆ ಖಚಿತ ಮಾಹಿತಿ ಸಿಕ್ಕಿತು. ಈ ಸುಳಿವು ಆಧರಿಸಿ ಕಾರ್ಯಾಚರಣೆ ನಡೆಸಿದಾಗ ಮಹಿಳಾ ಪ್ರಯಾಣಿಕೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯಿಂದ ವಿವಿಧ ವಿನ್ಯಾಸದ ₹37.85 ಲಕ್ಷ ಮೌಲ್ಯದ 611.51 ಗ್ರಾಂ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ.

ಚಿತ್ರದುರ್ಗ: ನಾಪತ್ತೆಯಾಗಿದ್ದ ಆರೋಪಿ ಸೆರೆಹಿಡಿಯಲು ತೆಲಂಗಾಣ ಪೊಲೀಸರಿಗೆ ನೆರವಾದ ಭಿಕ್ಷುಕರ ಪುನರ್ವಸತಿ ಕೇಂದ್ರ!

ಬೈಕ್‌ ವ್ಹೀಲಿಂಗ್‌: 9 ದಿನದಲ್ಲಿ 91 ಕೇಸ್‌, 59 ಮಂದಿ ಸೆರೆ

ಬೆಂಗಳೂರು ನಗರದ ಸಾರ್ವಜನಿಕ ರಸ್ತೆಗಳಲ್ಲಿ ಅಪಾಯಕಾರಿ ದ್ವಿಚಕ್ರ ವಾಹನ ವ್ಹೀಲಿಂಗ್‌ ಮಾಡುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಮುಂದುವರೆಸಿರುವ ನಗರ ಸಂಚಾರ ಪೊಲೀಸರು, ಫೆ.21ರಿಂದ 29ರ ವರೆಗೆ 91 ಪ್ರಕರಣ ದಾಖಲಿಸಿ 59 ಮಂದಿ ದ್ವಿಚಕ್ರ ವಾಹನ ಸವಾರರನ್ನು ಬಂಧಿಸಿದ್ದಾರೆ.ಈ 91 ಪ್ರಕರಣಗಳಲ್ಲಿ 74 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. 24 ಅಪ್ರಾಪ್ತ ಸವಾರರನ್ನು ವಶಕ್ಕೆ ಪಡೆದು, 23 ಮಂದಿ ಪೋಷಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ವಿವಾಹಿತನೊಂದಿಗೆ ಸಂಬಂಧ: ಅಪ್ರಾಪ್ತ ಮಗಳನ್ನು ಕೊಂದ ಪೋಷಕರು

18 ಮಂದಿ ದ್ವಿಚಕ್ರ ವಾಹನ ಸವಾರರ ಚಾಲನಾ ಪರವಾನಗಿ(ಡಿಎಲ್‌)ಗಳನ್ನು ಅಮಾನತುಗೊಳಿಸಲು ಹಾಗೂ 38 ದ್ವಿಚಕ್ರ ವಾಹನಗಳ ನೋಂದಣಿ ಪ್ರಮಾಣ ಪತ್ರ(ಆರ್‌ಸಿ)ಗಳನ್ನು ರದ್ದುಗೊಳಿಸಲು ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಕಳುಹಿಸಲಾಗಿದೆ. ಈ ವಿಶೇಷ ಕಾರ್ಯಾಚರಣೆಯು ಮುಂದುವರೆಯಲಿದ್ದು, ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.

Latest Videos
Follow Us:
Download App:
  • android
  • ios