Asianet Suvarna News Asianet Suvarna News

ಬಸ್‌ಸ್ಟಾಪ್‌ನಲ್ಲಿ ಮಹಿಳೆ ಮೈಕೈ ಮುಟ್ಟಿದ ಇಂಜಿನಿಯರ್!

ಮಹಿಳೆ ಮೇಲೆ ಬಸ್ ಸ್ಟ್ಯಾಂಡ್ ನಲ್ಲಿ ಲೈಂಗಿಕ ದೌರ್ಜನ್ಯ/ ದೌರ್ಜನ್ಯ ನೀಡುತ್ತಿದ್ದ ಸಾಫ್ಟ್ ವೇರ್ ಇಂಜಿನಿಯರ್ ಬಂಧನ/ ಮಹಿಳೆ ರಕ್ಷಣೆ ಮಾಡಲು ಬಂದ ಪೊಲೀಸ್ ಅಧಿಕಾರಿ ಮೇಲೆಯೂ ದಾಳಿ/ ಇಂಜಿನಿಯರ್ ನನ್ನು ಬಂಧಿಸಲಾಗಿದೆ

Hyderabad techie arrested for sexually assaulting woman at bus stop mah
Author
Bengaluru, First Published Nov 10, 2020, 5:49 PM IST

ಹೈದರಾಬಾದ್(ನ.  10)  ಬಸ್ ಸ್ಟ್ಯಾಂಡ್ ನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದ  28  ವರ್ಷದ ಸಾಫ್ಟವೇರ್ ಇಂಜಿನಿಯರ್ ನನ್ನು ಬಂಧಿಸಲಾಗಿದೆ.

ಅಮರ್‌ಪೇಟೆಯ ಕೆಎಂಎಲ್ ಬಸ್ ಸ್ಟಾಪ್ ನಲ್ಲಿ ಘಟನೆ ನಡೆದಿದೆ. ಮಹಿಳೆಯನ್ನು ರಕ್ಷಣೆ ಮಾಡಲು ಬಂದ ಪೊಲೀಸ್ ಅಧಿಕಾರಿಯ ಮೇಲೆಯೂ ಟೆಕ್ಕಿ ದಾಳಿ ಮಾಡಲು ಮುಂದಾಗಿದ್ದಾನೆ.

ಅಮೀರ್ ಪುತ್ರಿಗೆ ಹದಿನಾಲ್ಕು ವರ್ಷವಿದ್ದಾಗಲೆ ದೌರ್ಜನ್ಯ ಎಸಗಿದ್ದರಂತೆ!

 28  ವರ್ಷದ ಮಹಿಳೆ ಬಸ್ ಗಾಗಿ ಕಾದು ಕುಳಿತಿದ್ದರು.  ವೆಸ್ಟ್ ಗೋದಾವರಿ ಮನೆಗೆ ಹಿಂದಿರುಗುತ್ತಿದ್ದರು. ಈ ವೇಳೆ ಮಾಹಿತಿಗಾಗಿ ಆರೋಪಿ ಮಹೇಶ್ ಬಳಿ ಮಾತನಾಡಿದ್ದಾರೆ. ಕೈ ಹಿಡಿದುಕೊಂಡ ಮಹೇಶ್ ಆಕೆಯ ಶರ್ಟ್ ಕಾಲರ್ ಗೂ ಕೈ ಹಾಕಿದ್ದಾನೆ.  ಮಹಿಳೆಯ ಕುತ್ತಿಗೆ ಹಿಡಿಯಲು ಯತ್ನ ಮಾಡಿದ್ದಾನೆ.

ಮಹಿಳೆಯೊಬ್ಬರಿಗೆ ಕಿರುಕುಳ ನೀಡುತ್ತಿದ್ದಾನೆ ಎಂಬುದನ್ನು ಅವರಿತ ಪಂಜಗುಟ್ಟ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.  ಸ್ಥಳಕ್ಕೆ ಬಂದು ಪ್ರಶ್ನೆ ಮಾಡಿದ ಪೊಲೀಸ್ ಅಧಿಕಾರಿಯ ಮೇಲೆಯೂ ಹಲ್ಲೆಗೆ ಮಹೇಶ್ ಮುಂದಾಗಿದ್ದಾನೆ. ಉಳಿದ ಅಧಿಕಾರಿಗಳ ನೆರವಿನಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.  ಆರೋಪಿ ನಶೆಯಲ್ಲಿ ಇದ್ದ ಎಂಬ ಮಾಹಿತಿಯೂ ಲಭ್ಯವಾಗಿದೆ.

Follow Us:
Download App:
  • android
  • ios