2ನೇ ಮಗುವಿನ ಜನ್ಮ ನೀಡಿದ ಒಂದು ತಿಂಗಳಲ್ಲೇ ಸೆಕ್ಸ್‌ಗೆ ಒತ್ತಾಯಿಸಿದ ಪತಿ, ಮುಂದಾಗಿದ್ದು ಘನಘೋರ!
Man Killed Wife For Refusing Sex: ಮೇ 20ರ ಮಧ್ಯರಾತ್ರಿಯಂದು ನಡೆದ ಘಟನೆ ಇದಾಗಿದ್ದು, ಘಟನೆ ನಡೆದ 10 ದಿನಗಳ ಬಳಿಕ ಪೊಲೀಸರು ಈ ಘಟನೆಯನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನವದೆಹಲಿ (ಜೂ.2): ಅಪ್ರಾಪ್ತ ಯುವತಿಗೆ ಚೂರಿ ಇರಿದು ಸಾಯಿಸಿದ ಘಟನೆ ದೇಶದೆಲ್ಲೆಡೆ ಚರ್ಚೆಯಾಗುತ್ತಿರುವ ನಡುವೆ ಹೈದರಾಬಾದ್‌ನಲ್ಲಿ ಆಘಾತಕಾರಿ ಕೊಲೆ ಪ್ರಕರಣದ ವರದಿಯಾಗಿದೆ. 2ನೇ ಮಗುವನ್ನು ಹೆತ್ತ ಸಂಭ್ರಮದಲ್ಲಿದ್ದ ಯುವತಿಯನ್ನು ಆಕೆಯ ಪತಿಯೇ ಉಸಿರುಗಟ್ಟಿಸಿ ಸಾಯಿಸಿದ ಘಟನೆ ನಡೆದಿದೆ. ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕವೇ ಪತಿ ತನ್ನ ಪತ್ನಿಯನ್ನು ಸಾಯಿಸಿದ್ದು ಹೇಗೆ ಎನ್ನುವುದು ಗೊತ್ತಾಗಿದೆ. ಮೇ 20 ರಂದು ನಡೆದ ಘಟನೆ ಇದಾಗಿದ್ದರೂ, ಘಟನೆ ನಡೆದ 10 ದಿನಗಳ ಬಳಿಕ ಪೊಲೀಸರು ಘಟನೆಯ ಪೂರ್ವಾಪರಗಳನ್ನು ಪತ್ತೆ ಮಾಡಲು ಯಶಸ್ವಿಯಾಗಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ 24 ವರ್ಷದ ಜತಾವತ್ ತರುಣ್‌ನನ್ನು ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ತನ್ನೊಂದಿಗೆ ಸೆಕ್ಸ್ ನಡೆಸಲು ನಿರಾಕರಿಸಿದ ಹಿನ್ನಲೆಯಲ್ಲಿ 20 ವರ್ಷದ ಪತ್ನಿಯನ್ನು ಸಾಯಿಸಿದ್ದಾಗಿ ಪೊಲೀಸರ ಎದುರು 10 ದಿನಗಳ ಬಳಿಕ ಹೇಳಿದ್ದಾನೆ. ಕೇವಲ ಒಂದು ತಿಂಗಳ ಹಿಂದೆಯಷ್ಟೇ ಜಾನ್ಸಿ 2ನೇ ಮಗುವಿಗೆ ಜನ್ಮ ನೀಡಿದ್ದರು. ಈ ಹಂತದಲ್ಲಿ ಸೆಕ್ಸ್‌ಗೆ ಒತ್ತಾಯಿಸಿದ್ದ. ಆದರೆ, ಜಾನ್ಸಿ ನಿರಾಕರಿಸಿದ ಕಾರಣಕ್ಕೆ ಸಿಟ್ಟಿನ ಭರದಲ್ಲಿ ಜತಾವತ್ ತರುಣ್ ಪತ್ನಿಯನ್ನು ಕೊಲೆ ಮಾಡಿದ್ದಾರೆ.
ತೆಲಂಗಾಣದ ನಗರಕರ್ನೂಲ್ ಜಿಲ್ಲೆಯವರಾದ ಜತಾವತ್ ತರುಣ್ ಹಾಗೂ ಜಾನ್ಸಿ ಪ್ರೀತಿ ಮಾಡುತ್ತಿದ್ದರು. 2021ರಲ್ಲಿ ಮನೆಯವರ ಒಪ್ಪಿಗೆಯೊಂದಿಗೆ ವಿವಾಹ ಕೂಡ ನಡೆದಿತ್ತು. ಆಟೋರಿಕ್ಷಾ ಚಾಲಕನಾಗಿದ್ದ ತರುಣ್, ಮದುವೆಯಾದ ಬಳಿಕ ಸಂಸಾರ ಸಾಗಿಸುವ ಸಲುವಾಗಿ ಪತ್ನಿಯೊಂದಿಗೆ ಹೈದರಾಬಾದ್‌ಗೆ ಆಗಮಿಸಿದ್ದರು. ನಗರದ ಐಎಸ್ ಸದನ್ ಪ್ರದೇಶದ ಕಾಜಾ ಭಾಗ್‌ನಲ್ಲಿ ದಂಪತಿ ವಾಸವಿತ್ತು. ದಂಪತಿಗೆ ಎರಡು ವರ್ಷದ ಮಗನಿದ್ದು, ಏಪ್ರಿಲ್ 16 ರಂದು ಜಾನ್ಸಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.
ಮೇ 20 ರಂದು ಮನೆಗೆ ಬಂದಿದ್ದ ತರುಣ್, ಪತ್ನಿಯ ಎದುರು ಸೆಕ್ಸ್ ಮಾಡುವ ಆಸೆ ವ್ಯಕ್ತಪಡಿಸಿದ್ದ. ಆದರೆ, ತನಗೆ ಸುಸ್ತಾಗಿದ್ದು ಸಾಧ್ಯವೇ ಇಲ್ಲ ಎಂದು ತಿಳಿಸಿದ್ದಳು. ಆದರೆ, ತರುಣ್ ಮಾತ್ರ ಜಾನ್ಸಿಗೆ ಒತ್ತಾಯ ಮಾಡಲು ಆರಂಭ ಮಾಡಿದ್ದ. ಆಕೆ ದೊಡ್ಡ ದನಿಯಲ್ಲಿ ಕೂಗಲು ಆರಂಭಿಸಿದಾಗ, ತರುಣ್ ತನ್ನ ಕೈಗಳಿಂದ ಆಕೆಯ ಬಾಯಿಯನ್ನು ಮುಚ್ಚಿದ್ದ. ಆದರೆ, ಕೈಗಳಿಂದ ಆಕೆಯ ಬಾಯಿಯನ್ನು ಮುಚ್ಚಿವ ಭರದಲ್ಲಿ ಆಕೆಯ ಮೂಗನ್ನು ಒತ್ತಿಹಿಡಿದಿದ್ದ. ಇದರಿಂದಾಗಿ ಆಕೆಗೆ ಉಸಿರಾಡಲು ಕೂಡ ಸಾಧ್ಯವಾಗಿರಲಿಲ್ಲ. ಒದ್ದಾಟ ನಡೆಸಿದರೂ ಜಾನ್ಸಿಯನ್ನು ಬಿಟ್ಟಿರಲಿಲ್ಲ. ಕೆಲ ಸಮಯದಲ್ಲಿ ಆಕೆ ಪ್ರಜ್ಞಾಹೀನಳಾಗಿದ್ದು ಮಾತ್ರವಲ್ಲದೆ, ಬಾಯಿಯಿಂದ ನೊರೆ ಬರಲು ಕೂಡ ಆರಂಭವಾಗಿತ್ತು. ಇದರಿಂದ ಹೆದರಿಹೋಗಿದ್ದ ತರುಣ್, ಸಂಬಂಧಿಕರಿಗೆ ತಕ್ಷಣವೇ ಈ ವಿಚಾರ ತಿಳಿಸಿದ್ದ. ತಕ್ಷಣವೇ ಜಾನ್ಸಿಯನ್ನು ಓವೈಸಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ, ವೈದ್ಯರು ಆಕೆ ಮೃತಪಟ್ಟಿದ್ದಾಳೆ ಎಂದು ತಿಳಿಸಿದ್ದಾರೆ.
ಒಳಿಕ ಆಸ್ಪತ್ರೆಯ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಒಸ್ಮಾನಿಯಾ ಸರ್ಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಲಾಗಿತ್ತು. ಆದರೆ, ಅಲ್ಲಿಯವರೆಗೂ ಆಕೆ ಹೇಗೆ ಸಾವು ಕಂಡಳು ಎನ್ನುವ ಬಗ್ಗೆ ತರುಣ್ ಯಾರಲ್ಲಿಯೂ ಮಾತನಾಡಿರಲಿಲ್ಲ. ಇದರ ಬೆನ್ನಲ್ಲಿಯೇ ಜಾನ್ಸಿಯ ತಂದೆ ನೆನಾವತ್ ರೇಕಿಯಾ, ಸೈದಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ಕೂಡ ದಾಖಲು ಮಾಡಿದ್ದರು. ಮೇ 30 ರಂದು ಬಂದ ಮರಣೋತ್ತರ ವರದಿಯಲ್ಲಿ ಜಾನ್ಸಿಗೆ ಸಹಜ ಉಸಿರಾಟಕ್ಕೆ ಸಮಸ್ಯೆ ಆದ ಕಾರಣದಿಂದ ಸಾವು ಕಂಡಿದ್ದಾಳೆ ಎಂದು ಹೇಳಲಾಗಿತ್ತು.
'ಸೆಕ್ಸ್' ಅನ್ನು ಕ್ರೀಡೆಯಾಗಿ ಪರಿಗಣಿಸಿದ ಸ್ವೀಡನ್, ಜೂ.8ಕ್ಕೆ ಮೊದಲ ಯುರೋಪಿಯನ್ ಸೆಕ್ಸ್ ಚಾಂಪಿಯನ್‌ಷಿಪ್!
ಇದರ ಬೆನ್ನಲ್ಲಿಯೇ ಜತಾವತ್ ತರುಣ್‌ನನ್ನು ಕರೆಸಿ ಮತ್ತೊಮ್ಮೆ ವಿಚಾರಣೆ ನಡೆಸಿದ ಜಾನ್ಸಿಯ ಸಾವಿನ ಕಾರಣ ಬಹಿರಂಗವಾಗಿದೆ. ತಪ್ಪನ್ನು ಒಪ್ಪಿಕೊಂಡ ಬಳಿಕ ಪೊಲೀಸರು ಈತನನ್ನು ಬಂಧಿಸಿದ್ದು, ಬಳಿಕ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
'ನಿನ್ನ ಖುಷಿಯೇ ನನ್ನ ಖುಷಿ' ಕೈಹಿಡಿದ 20 ದಿನಕ್ಕೆ ಪತ್ನಿಯನ್ನು ಲವರ್‌ಗೆ ಕೊಟ್ಟು ಮದುವೆ ಮಾಡಿಸಿದ ಪತಿ!