Asianet Suvarna News Asianet Suvarna News

ಪ್ರಿಯಕರನ ತೋಳ ತೆಕ್ಕೆಗೆ ಬರಲೊಪ್ಪದ ತಾಯಿ, ಬಲಿಯಾಗಿದ್ದು ಮಾತ್ರ ಪುಟ್ಟ ಮಗು!

ಮಗುವಿನ ಸಾವಿನಿಂದ ನೊಂದ ತಂದೆ ಆತ್ಮಹತ್ಯೆ/ ಹೆಂಡತಿಗೆ ಪರಪುರುಷನೊಂದಿಗೆ ಸಂಬಂಧ/ ಅನೈತಿಕ ಸಂಬಂಧಕ್ಕೆ ಪುಟ್ಟ ಮಗು ಬಲಿಯಾಗಿತ್ತು/ ಮಗಳು ಹತ್ಯೆಯಾಗಿ ಹತ್ತು ದಿನಗಳ ನಂತರ ಆತ್ಮಹತ್ಯೆ

Hyderabad Father commits suicide 10 days after his daughter Murder
Author
Bengaluru, First Published Jul 12, 2020, 2:39 PM IST
  • Facebook
  • Twitter
  • Whatsapp

ಹೈದರಾಬಾದ್(ಜು.  12)  ಮಗಳು ಹತ್ಯೆಯಾಗಿ ಹತ್ತು ದಿನಗಳ ನಂತರ ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.   ಐದು ವರ್ಷದ ಮಗಳನ್ನು ತಾಯಿಯ ಪ್ರಿಯತಮ ಕರುಣಾಕರನ್ ಎಂಬಾತ ಹತ್ಯೆ ಮಾಡಿದ್ದ. ಮಗಳನ್ನು ಕಳೆದುಕೊಂಡು ನೊಂದಿದ್ದ ತಂದೆ ಬೋನ್ಗಿರ್ ನಲ್ಲಿ ಚಲಿಸುವ ರೈಲಿಗೆ ತಲೆ ಕೊಟ್ಟಿದ್ದಾರೆ.

ಶನಿವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ರೈಲ್ವೆ ಹಳಿ ಬಳಿ ಆಟವಾಡುತ್ತಿದ್ದ ಮಕ್ಕಳು ಮೃತದೇಹವನ್ನು ಕಂಡಿದ್ದಾರೆ. ತಮ್ಮ ಪೋಷಕರಿಗೆ ವಿಷಯ ತಿಳಿಸಿದ್ದು ಅಲ್ಲಿಂದ ಪೊಲೀಸರಿಗೆ ಮಾಹಿತಿ ಬಂದಿದೆ.

ಅಪ್ಪ ಸತ್ತಿದ್ದಾರೆ ಎಂಬ ಅರಿವಿಲ್ಲದೆ ಅಳುತ್ತಲೆ ಕೂತಿದ್ದ ಕಂದ

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶಿಲನೆ ನಡೆಸಿದಾಗ  37  ವರ್ಷದ ವ್ಯಕ್ತಿಯ ಚಹರೆ ಪತ್ತೆಯಾಗಿದೆ.  ಸರ್ಕಾರಿ ಕೆಲಸದಲ್ಲಿದ್ದ ವ್ಯಕ್ತಿ ಘಟ್ ಕೇಸರ್ ನಲ್ಲಿ ವಾಸ ಮಾಡುತ್ತಿದ್ದರು.  ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯ ಹೆಂಡತಿ ಅಂದರೆ ಮಗುವಿನ ತಾಯಿಯ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಕರುಣಾಕರನ್ ಎಂಬಾತ ಜುಲೈ 1  ರಂದು ಮಗುವನ್ನು ಹತ್ಯೆ ಮಾಡಿದ್ದ. ಮಗುವಿನ ಕಾರಣಕ್ಕೆ ಪ್ರಿಯತಮೆ ತನ್ನಿಂದ ದೂರ ಆಗುತ್ತಿದ್ದಾಳೆ ಎಂದು ಭಾವಿಸಿ ಹತ್ಯೆ ಮಾಡಿದ್ದ.

ಮಗಳ ಸಾವಿನ ನಂತರ ತಂದೆ ತನ್ನ ಸಹೋದರರೊಂದಿಗೆ ವಾಸಮಾಡುತ್ತಿದ್ದರೂ ತುಂಬಾ ನೊಂದಿದ್ದರು.  ಶನಿವಾರ ಮುಂಜಾನೆ ಮನೆ ತೊರೆದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಜುಲೈ  1 ರಂದು ಮಗುವನ್ನು ಹತ್ಯೆ ಮಾಡಿದ ಆರೋಪಿ ಕರುಣಾಕರನ್ ಪ್ರಿಯತಮೆ ಅಂದರೆ ಮಗುವಿನ ತಾಯಿ ಭೇಟಿ ಮಾಡಲು ತೆರಳಿದ್ದ. ಈ ವೇಳೆ ಆಕೆ ಇನ್ನೊಬ್ಬನ ತೋಳಿನಲ್ಲಿ ಇದ್ದಳು.  ಇಲ್ಲಿಂದ ಹೊರಗೆ ಬಾ, ಇಲ್ಲವಾದರೆ ಮಗುವನ್ನು ಸಾಯಿಸುತ್ತೇನೆ ಎಂದು ಬೆದರಿಸಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಹರಿತವಾದ ಬ್ಲೇಡ್ ನಿಂದ ಮಗುವಿನ ಹೊಟ್ಟೆಗೆ ಚುಚ್ಚಿ ಕೊಲೆ ಮಾಡಿದ್ದಾನೆ.

Follow Us:
Download App:
  • android
  • ios