ಕುಟುಂಬ ಕಲಹಗಳಿಂದ ಮೊದಲ ಪತ್ನಿಗೆ ವಿಚ್ಚೇದನ ನೀಡಿರುವುದಾಗಿ ಸುಳ್ಳು ಹೇಳಿ ಆಂಧ್ರಪ್ರದೇಶದ ರೆಡ್ಡಿಲಕ್ಷ್ಮಿ  ಎಂಬುವಳನ್ನು ಕಳೆದ 2022 ಮದುವೆಯಾಗಿ, ಆಕೆಯೊಂದಿಗೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕಳೆದ ಮೂರು ದಿನಗಳ ಹಿಂದೆ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಹರೀಶ್ 

ಹೊಸಕೋಟೆ(ಏ.11):  ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ಹೆಂಡತಿಯನ್ನು ಕೊಲೆ ಮಾಡಿ ಪರಾರಿಯಾಗಿದ್ದ ಪತಿ ಮೂರು ದಿನಗಳ ಬಳಿಕ ಹೊಸಕೋಟೆಯ ಪೊಲೀಸ್ ಠಾಣೆಯಲ್ಲಿ ಬುಧವಾರ ಶರಣಾಗಿದ್ದಾನೆ.

ಮೃತಳ ಪತಿ ಹಾಗೂ ಕೊಲೆ ಆರೋಪಿ ಆಂಧ್ರಪ್ರದೇಶದ ಹರೀಶ್(35) ಪೊಲೀಸರಿಗೆ ಶರಣಾದ ವ್ಯಕ್ತಿ. ಹೂ ವ್ಯಾಪಾರಿಯಾದ ಈತ ಮೊದಲ ಪತ್ನಿಯ ಜತೆ ಹೊಸಕೋಟೆಯಲ್ಲಿ ವಾಸವಾಗಿದ್ದ. ಆಂಧ್ರಪ್ರದೇಶದ ರೆಡ್ಡಿಲಕ್ಷ್ಮಿ(30) ಕೊಲೆಯಾದ ಮಹಿಳೆ. ಆರೋಪಿ ಹರೀಶ್ ಮೊದಲ ಹೆಂಡತಿ ಜೊತೆ ಹೊಸಕೋಟೆಯಲ್ಲಿ ನೆಲೆಸಿ ಹೂವಿನ ವ್ಯಾಪಾರ ಮಾಡುತ್ತಿದ್ದ ಎನ್ನಲಾಗಿದೆ.

ಬೆಂಗ್ಳೂರಲ್ಲಿ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ವೈದ್ಯನ ಬಂಧನ

ಕುಟುಂಬ ಕಲಹಗಳಿಂದ ಮೊದಲ ಪತ್ನಿಗೆ ವಿಚ್ಚೇದನ ನೀಡಿರುವುದಾಗಿ ಸುಳ್ಳು ಹೇಳಿ ಆಂಧ್ರಪ್ರದೇಶದ ರೆಡ್ಡಿಲಕ್ಷ್ಮಿ(30) ಎಂಬುವಳನ್ನು ಕಳೆದ 2022 ಮದುವೆಯಾಗಿ, ಆಕೆಯೊಂದಿಗೆ ಚಿಂತಾಮಣಿ ನಗರದ ಸೊಣ್ಣಶೆಟ್ಟಿಹಳ್ಳಿ ಬಡಾವಣೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ. ಕಳೆದ ಮೂರು ದಿನಗಳ ಹಿಂದೆ ಆಕೆಯನ್ನು ಕೊಲೆ ಮಾಡಿ ಪರಾರಿಯಾಗಿದ್ದ.

ಪೊಲೀಸರು ಆರೋಪಿಯನ್ನು ಚಿಂತಾಮಣಿ ಟೌನ್ ಪೊಲೀಸರಿಗೆ ಒಪ್ಪಿಸಿದ್ದಾರೆ. ಮೃತಳ ಕುಟುಂಬಸ್ಥರು ನೀಡಿದ ದೂರಿನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.