Asianet Suvarna News Asianet Suvarna News

ಬೆಂಗ್ಳೂರಲ್ಲಿ ಖೋಟಾ ನೋಟು ನೀಡಿ ವಂಚಿಸುತ್ತಿದ್ದ ವೈದ್ಯನ ಬಂಧನ

ಚೆನ್ನೈ ಮೂಲದ ಡಾ.ಕೆ.ಆರ್. ಸಂಜಯ್ ಬಂಧಿತ. ಆರೋಪಿಯಿಂದ 500 ರು. ಮುಖಬೆಲೆಯ 72 ಖೋಟಾ ನೋಟುಗಳು, ಪ್ರಿಂಟರ್, 90 ಸಾವಿರ ರು. ಮೌಲ್ಯದ 9 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಮೂಲದ ಕ್ಯಾಬ್ ಚಾಲಕ ಜರಿಪಿಟಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

Doctor  Arrested For who Cheated by giving Fake Notes in Bengaluru grg
Author
First Published Apr 9, 2024, 10:07 AM IST

ಬೆಂಗಳೂರು(ಏ.09):  ನಕಲಿ ನೋಟುಗಳನ್ನು ಮುದ್ರಿಸಿ ಆ ನೋಟು ಗಳನ್ನು ಕ್ಯಾಬ್ ಚಾಲಕರಿಗೆ ನೀಡಿ ಪರಾರಿಯಾಗುತ್ತಿದ್ದ ವೈದ್ಯ ಎನ್ನಲಾದವನೊಬ್ಬನನ್ನು ಮಾಗಡಿ ರಸ್ತೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಮೂಲದ ಡಾ.ಕೆ.ಆರ್. ಸಂಜಯ್ (44) ಬಂಧಿತ. ಆರೋಪಿಯಿಂದ 500 ರು. ಮುಖಬೆಲೆಯ 72 ಖೋಟಾ ನೋಟುಗಳು, ಪ್ರಿಂಟರ್, 90 ಸಾವಿರ ರು. ಮೌಲ್ಯದ 9 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಲಾಗಿದೆ. ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಮೂಲದ ಕ್ಯಾಬ್ ಚಾಲಕ ಜರಿಪಿಟಿ ಚಂದ್ರಶೇಖರ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ.

ಏನಿದು ಪ್ರಕರಣ?: 

ಆರೋಪಿ ಸಂಜಯ್ ಮಾ. 27ರಂದು ಇಂಟರ್‌ನೆಟ್‌ನಲ್ಲಿ ಟ್ರಾವೆಲ್ ವೊಂದರ ನಂಬರ್ ಪಡೆದು ಬೆಂಗಳೂರಿನಿಂದ ಕದ್ರಿಗೆ ಕ್ಯಾಬ್ ಬುಕ್ ಮಾಡಿದ್ದ. ಅದರಂತೆ ಕ್ಯಾಬ್ ಚಾಲಕ ಚಂದ್ರಶೇಖರ್ ಮಾ.27ರಂದು ರಾತ್ರಿ 8.30ಕ್ಕೆ ಕದ್ರಿಯಿಂದ ನಗರದ ಯಶವಂತಪುರದ ಮಣಿಪಾಲ್ ಆಸ್ಪತ್ರೆ ಬಳಿ ಬಂದಿದ್ದು, ಆರೋಪಿ ಸಂಜಯ್ ವೈದ್ಯನೆಂದು ಪರಿಚಯಿ ಸಿಕೊಂಡು ಕಾರ್ ಹತ್ತಿದ್ದಾನೆ.\

ಬೆಂಗಳೂರಿನ ಖಾಸಗಿ ಟ್ರಸ್ಟ್‌ಗಳಿಗೆ ಹಂಚಲು ತೋರಿಸುತ್ತಿದ್ದ 30 ಕೋಟಿ ರೂ. ಮೌಲ್ಯದ ನೋಟುಗಳು ಪತ್ತೆ

ಖೋಟಾ ನೋಟು ಕೈಗಿಟ್ಟು ಎಸ್ಟೇಪ್: 

ಬಳಿಕ ಮಾಗಡಿ ರಸ್ತೆಯ ಹೌಸಿಂಗ್ ಬೋರ್ಡ್ ಸಮೀಪದ ಬಾರ್ ಆ್ಯಂಡ್ ರೆಸ್ಟೋರೆಂಟ್‌ಗೆ ತೆರಳಿದ್ದಾನೆ. ಈ ವೇಳೆ ಕ್ಯಾಬ್ ಚಾಲಕ ಚಂದ್ರಶೇಖರ್‌ಗೆ 'ನನ್ನ ಬಳಿ ನಗದು ಹಣವಿದೆ. ನೀನು 10 ಸಾವಿರ ರು. ಹಣವನ್ನು ಫೋನ್ ಪೇ ಮುಖಾಂತರ ಕಳುಹಿ ಸುವೆಯಾ' ಎಂದು ಕೇಳಿದ್ದಾನೆ. ಅದರಂತೆ ಚಂದ್ರಶೇಖರ್ 10 ಸಾವಿರ ರು. ಹಣವನ್ನು ಫೋನ್ ಪೇ ಮೂಲಕ ಕಳುಹಿಸಿದ್ದಾರೆ. ಬಳಿಕ ಆರೋಪಿಯು 500 ರು. ಮುಖಬೆಲೆಯ 21 ನೋಟುಗಳನ್ನು ಚಂದ್ರಶೇಖರ್‌ಗೆ ನೀಡಿದ್ದಾನೆ. ಇದೇವೇಳೆ ಆರೋಪಿಸಂಜಯ್ ಸ್ನೇಹಿತರೋಬ್ಬರಿಗೆ ಕರೆ ಮಾಡಬೇಕು ಎಂದು ಮೊಬೈಲ್ ಹಿಡಿದು ಕೊಂಡು ಪಕ್ಕಕ್ಕೆ ಹೋಗಿದ್ದಾನೆ. ಬಳಿಕ ಬಾರ್ ಆ್ಯಂಡ್ ರೆಸ್ಟೋರೆಂಟ್ ಬಿಲ್ ಸಹ ಪಾವತಿಸದೆ ಪರಾರಿಯಾಗಿದ್ದಾನೆ.

ಮಧುಗಿರಿಯಲ್ಲಿ ಖೋಟಾ ನೋಟು ಚಲಾವಣೆಗೆ ಯತ್ನ: ಪರಾರಿಯಾದ ಹುಡುಗರು!

ಆರೋಪಿಯಿಂದ ಹಲವರಿಗೆ ವಂಚನೆ: 

ಆರೋಪಿ ಸಂಜಯ್ ಯುನಾನಿ ವೈದ್ಯನೆಂದು ಗುರುತಿನ ಚೀಟಿ ತೋರಿಸಿದ್ದಾನೆ. ಆದರೆ, ಅಸಲಿ ಪ್ರಮಾಣ ಪತ್ರ ಪರಿಶೀಲಿ ಸುವವರೆಗೂ ಆತ ವೈದ್ಯನೆಂದು ನಂಬುವುದು ಕಷ್ಟ, ಆರೋ ಪಿಯು ಅಪರಾಧ ಹಿನ್ನೆಲೆಯುಳ್ಳವನಾಗಿದ್ದು, ಈ ಹಿಂದೆ ಸಿದ್ದಾಪುರ ಸೇರಿದಂತೆ ಚೆನ್ನೈನ ವಿವಿಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿರು ವುದು ಗೊತ್ತಾಗಿದೆ. ಈತ ಖೋಟಾ ನೋಟು ಗಳನ್ನು ಬಳಸಿಕೊಂಡು ಹಲವರಿಗೆ ವಂಚಿಸಿದ್ದು, ಈತನಿಗೆ ಈ ನೋಟುಗಳು ಎಲ್ಲಿ ಸಿಗುತ್ತಿದ್ದವು ಎಂಬುದರ ಬಗ್ಗೆ ತನಿಖೆ ಮುಂದುವರೆದಿದೆ.

ನೋಟ್ ರಹಸ್ಯ ಬಯಲು

ಈ ವೇಳೆ ಕ್ಯಾಬ್ ಚಾಲಕ ಚಂದ್ರ ಶೇಖರ್ ಆರೋಪಿ ನೀಡಿದ್ದ 500 ರು. ಮುಖಬೆಲೆಯ ನೋಟುಗಳನ್ನು ನೀಡಿ ಬಿಲ್ ಪಾವತಿಸಲು ಮುಂದಾಗಿದ್ದಾರೆ. ಈ ವೇಳೆ ಕ್ಯಾಶಿಯರ್ ಇವು ಖೋಟ ನೋಟು ಎಂದಿದ್ದಾರೆ. ಬಳಿಕ ಚಂದ್ರ ಶೇಖರ್ಮಾ ಗಡಿ ರಸ್ತೆ ಪೊಲೀಸ್ ಠಾಣೆಗೆ ತೆರಳಿ ಆರೋಪಿ ಸಂಜಯ್ ವಿರುದ್ಧ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ.

Follow Us:
Download App:
  • android
  • ios