Asianet Suvarna News Asianet Suvarna News

ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟು, ಹೆಂಡ್ತಿಯ ಕತ್ತು ಸೀಳಿ ಕೊಲೆ ಮಾಡಿದ ಗಂಡ!

ಗಂಡ, ಹೆಂಡತಿಯ ಕತ್ತುಸೀಳಿ ಕೊಲೆ ಮಾಡಿರುವ ಘಟನೆ ಕೋಲ್ಕತ್ತಾದಲ್ಲಿ ನಡೆದಿದೆ. ಇನ್‌ಸ್ಟಾಗ್ರಾಂನಲ್ಲಿ ಪತ್ನಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟಿಗೆದ್ದ ಪತಿ ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

Husband Slits Wifes Throat For Posting Instagram Reels, Making New Friends in Kolkata Vin
Author
First Published Nov 25, 2023, 2:30 PM IST

ಸೋಷಿಯಲ್‌ ಮೀಡಿಯಾ ಇಲ್ದೆ ಜೀವನಾನೇ ಇಲ್ಲ ಅನ್ನೋ ಕಾಲ ಇದು. ದಿನ ಬೆಳಗಾದ್ರೆ ವಾಟ್ಸಾಪ್‌, ಫೇಸ್‌ಬುಕ್‌ ಸ್ಕ್ರಾಲ್‌ ಮಾಡೋದ್ರಿಂದ ತೊಡಗಿ ರಾತ್ರಿ ರೀಲ್ಸ್‌ ನೋಡ್ತಾ ಮಲಗೋವಷ್ಟರ ಮಟ್ಟಿಗೆ ಸಾಮಾಜಿಕ ಜಾಲತಾಣಗಳು ಅನಿವಾರ್ಯವಾಗಿಬಿಟ್ಟಿವೆ. ಅಷ್ಟೇ ಸಾಲ್ದು ಅಂತ ರೀಲ್ಸ್‌, ಶಾರ್ಟ್ಸ್‌ಗಳು ಜನರು ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರಲು ಪ್ರೇರೇಪಿಸುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ ಮೊದಲಾದ ಕಡೆ ವೈರಲ್ ಆಗೋ ರೀಲ್ಸ್‌ಗಳು ವೈರಲ್ ಆಗೋದರ ಜೊತೆಗೆ ನೇಮು-ಫೇಮು ತಂದು ಕೊಡೋ ಕಾರಣ ಕೇವಲ ಯುವಕ-ಯುವತಿಯರು ಮಾತ್ರವಲ್ಲ ಎಲ್ಲಾ ವಯಸ್ಸಿನ ಜನರೂ ಸಹ ಇಂಥಾ ವೀಡಿಯೋಗಳನ್ನು ಮಾಡ್ತಿದ್ದಾರೆ. ಟ್ರೆಂಡ್ ಆಗೋ ಸಾಂಗ್‌ಗೆ ಸೊಂಟ ಬಳುಕಿಸಿ ವೀವ್ಸ್‌, ಲೈಕ್ಸ್ ಗಿಟ್ಟಿಸಿಕೊಳ್ಳಲು ಯತ್ನಿಸುತ್ತಾರೆ.

ಮದುವೆಯಾದ ಕಪಲ್ಸ್ ಸಹ ರೀಲ್ಸ್ ಮಾಡಿ ವೈರಲ್ ಆಗ್ತಿದ್ದಾರೆ. ಆದ್ರೆ ಕೋಲ್ಕತ್ತಾದಲ್ಲಿ ಮಾತ್ರ ಪತ್ನಿ (Wife) ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡಿದ್ದಕ್ಕೆ ಸಿಟ್ಟುಗೊಂಡ ಪತಿ ಆಕೆಯ ಕತ್ತುಸೀಳಿ ಕೊಲೆ (Murder) ಮಾಡಿದ್ದಾನೆ. ಇನ್‌ಸ್ಟಾಗ್ರಾಂನಲ್ಲಿ ರೀಲ್ಸ್ ಪೋಸ್ಟ್ ಮಾಡುವ ವಿಚಾರಕ್ಕೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿ 38 ವರ್ಷದ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಕತ್ತು ಸೀಳಿ ಕೊಂದಿರೋ ಘಟನೆ ಕೋಲ್ಕತ್ತಾದ ಜೋಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಹರಿನಾರಾಯಣಪುರದಲ್ಲಿ ನಡೆದಿದೆ. 

ಹುಲ್ಲಿನ ಬಣವೆಯಲ್ಲಿ ಪ್ರಿಯಕರನ ಜತೆ ಪತ್ನಿ ರಾಸಲೀಲೆ: ಬಣವೆಗೆ ಬೆಂಕಿ ಹಚ್ಚಿ ಪತ್ನಿ ಜೀವಂತವಾಗಿ ಸುಟ್ಟು ಹಾಕಿದ ಪತಿ

ಪತ್ನಿಗೆ ಅನೈತಿಕ ಸಂಬಂಧ ಇರುವ ಬಗ್ಗೆ ಆರೋಪಿಸಿದ ಪತಿ
ಅಪರ್ಣಾ ಎಂಬ ಮಹಿಳೆ ಇನ್‌ಸ್ಟಾಗ್ರಾಂನಲ್ಲಿ ಎರಡು ರೀಲ್ಸ್ ಪೋಸ್ಟ್ ಮಾಡಿದ್ದಳು. ಇದರಿಂದ ಸಿಟ್ಟಿಗೆದ್ದ ಪತಿ ಪರಿಮಳ್ ಬೈದ್ಯ ಆಕೆಗೆ ಯಾರೊಂದಿಗೂ ಅನೈತಿಕ ಸಂಬಂಧ ಇದೆ ಎಂದು ಆರೋಪಿಸಿದ್ದಾನೆ. ತಕ್ಷಣ ಆಕೆಯ ಕತ್ತು ಸೀಳಿ ಕೊಲೆ ಮಾಡಿದ್ದಾನೆ.. 35 ವರ್ಷದ ಅಪರ್ಣಾ ಗೃಹಿಣಿಯಾಗಿದ್ದು, ಸಾಮಾಜಿಕ ಜಾಲತಾಣ (Social media)ಗಳಲ್ಲೂ ಆಕ್ಟಿವ್ ಆಗಿದ್ದರು. ಪೋಸ್ಟ್ ಮಾಡಿದ ಇನ್‌ಸ್ಟಾಗ್ರಾಮ್ ರೀಲ್‌ಗಳ ಕುರಿತು ಗಂಡ-ಹೆಂಡತಿಯ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು. ನಂತರ ಇಬ್ಬರ ಮಧ್ಯೆ ಜಗಳ ಉಂಟಾಗಿದೆ.

ಆರೋಪಿ ಪರಿಮಳ ಬೈದ್ಯ ತನ್ನ ಪತ್ನಿ ಅಪರ್ಣಾ ವಿವಾಹೇತರ ಸಂಬಂಧ (Extra marital affair) ಹೊಂದಿದ್ದಾಳೆ ಎಂದು ಶಂಕಿಸಿ ಆಕೆಯ ಕತ್ತು ಸೀಳಿ ಹತ್ಯೆ ಮಾಡಿದ್ದಾನೆ. ಮೇಸ್ತ್ರಿಯಾಗಿ ಕೆಲಸ ಮಾಡುತ್ತಿರುವ ಪರಿಮಳ್ ಸದ್ಯ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ದಂಪತಿಗೆ 7ನೇ ತರಗತಿಯಲ್ಲಿ ಕಲಿಯುವ ಒಬ್ಬ ಮಗ ಮತ್ತು ನರ್ಸರಿಯಲ್ಲಿ ಕಲಿಯುವ ಮಗಳಿದ್ದಾಳೆ. ಆದರೆ ಘಟನೆ ನಡೆಯುವಾಗ ಮಕ್ಕಳಿಬ್ಬರೂ ಮನೆಯಲ್ಲಿ ಇರಲ್ಲಿಲ್ಲ.

ಬೆಂಗಳೂರು: ಅಕ್ರಮ ಸಂಬಂಧ ಪ್ರಶ್ನಿಸಿದ ಪತ್ನಿಯ ಕೊಂದು ಆತ್ಮಹತ್ಯೆ ಕಥೆ ಕಟ್ಟಿದ್ದ ಪತಿ ಸೆರೆ

ಇನ್‌ಸ್ಟಾಗ್ರಾಂ ರೀಲ್ಸ್‌ ವಿಚಾರಕ್ಕೆ ಜಗಳ, ಕೊಲೆಯಲ್ಲಿ ಅಂತ್ಯ
ಪೊಲೀಸ್ ಅಧಿಕಾರಿಯ ಪ್ರಕಾರ, ಅಪರ್ಣಾ ಸಾಮಾಜಿಕ ಮಾಧ್ಯಮದಲ್ಲಿ ರೀಲ್‌ಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಪ್ರಾರಂಭಿಸಿದಾಗಲೇ ದಂಪತಿಗಳ ಮಧ್ಯೆ ಜಗಳ ಆರಂಭವಾಗಿತ್ತು. ಇದರಿಂದ ಅಪರ್ಣಾಗೆ ಹಣ ಸಾಲ ನೀಡುವ ಏಜೆನ್ಸಿಯ ಅಧಿಕಾರಿಯೊಂದಿಗೆ ಸ್ನೇಹ ಬೆಳೆದಿತ್ತು. ಈ ಬಗ್ಗೆ ಪರಿಮಳ್ ಸಿಟ್ಟುಗೊಂಡಿದ್ದರು ಎನ್ನಲಾಗಿದೆ. ಅದೇ ಕಾರಣಕ್ಕೆ ಜಗಳವಾಗಿ ಕೊಲೆಯಲ್ಲಿ ಕೊನೆಗೊಂಡಿದೆ.

ಟ್ಯೂಷನ್ ತರಗತಿಯಿಂದ ಮನೆಗೆ ಹಿಂದಿರುಗಿದ ಮಗ ತನ್ನ ತಾಯಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ನೋಡಿ ಸ್ಥಳೀಯರಿಗೆ ಮಾಹಿತಿ ನೀಡಿದನು. ಪೊಲೀಸರು ಆಗಮಿಸಿದಾಗ ಬಾಲಕ, ತನ್ನ ಹೆತ್ತವರ ನಡುವೆ ಆಗಾಗ ಜಗಳ ನಡೆಯುತ್ತಿದ್ದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದಾನೆ. ಈ ಹಿಂದೆ ಒಂದು ಸಾರಿ ಜಗಳವಾದಾಗ ಮಹಿಳೆ ಮನೆಬಿಟ್ಟು ತವರು ಮನೆಗೆ ತೆರಳಿದ್ದಳು ಎಂಬುದು ತನಿಖೆಯಿಂದ ಬಯಲಾಗಿದೆ. 'ನಾವು ಕೊಲೆಯ ಆಯುಧವನ್ನು ವಶಪಡಿಸಿಕೊಂಡಿದ್ದೇವೆ. ಪರಿಮಳ್‌ ಬೈದ್ಯಗೆ ಹುಡುಕಾಟವನ್ನು ಪ್ರಾರಂಭಿಸಿದ್ದೇವೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ' ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. 

Follow Us:
Download App:
  • android
  • ios