*  ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಳಗೊಂಡ ಗ್ರಾಮದಲ್ಲಿ ನಡೆದ ಘಟನೆ*  6 ತಿಂಗಳ ಹಿಂದಷ್ಟೇ ಪ್ರೇಮ ವಿವಾಹವಾಗಿದ್ದ ಮನುಜಾ- ಬಸವರಾಜ*  ಮನುಜಾಳ ಸಾವು ಕೊಲೆಯೋ? ಆತ್ಮಹತ್ಯೆಯೋ ಎಂಬ ಅನುಮಾನ 

ಹಾವೇರಿ(ಫೆ.02): ಪ್ರೀತಿಸಿದ(Love) ತಪ್ಪಿಗೆ ಯುವತಿ ಶವಕ್ಕೆ ಅಂತ್ಯ ಸಂಸ್ಕಾರಕ್ಕೂ ಗತಿ ಇಲ್ಲದ ಘಟನೆ ಜಿಲ್ಲೆಯ ಬ್ಯಾಡಗಿ(Byadagi) ತಾಲೂಕಿನ ಕಳಗೊಂಡ ಗ್ರಾಮದಲ್ಲಿ ನಿನ್ನೆ(ಮಂಗಳವಾರ) ನಡೆದಿದೆ. ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಕೆರೆಯಲ್ಲಿ ಮಹಿಳೆ ಶವ(Deadbody) ಪತ್ತೆಯಾಗಿದೆ. ಮೃತಳನ್ನ ಮನುಜಾ ಎಂದು ಗುರುತಿಸಲಾಗಿದೆ.

ಮನುಜಾಳ ಸಾವು ಕೊಲೆಯೋ?(Murder) ಆತ್ಮಹತ್ಯೆಯೋ(Suicide) ಎಂಬ ಅನುಮಾನ ವ್ಯಕ್ತವಾಗಿದೆ. 6 ತಿಂಗಳ ಹಿಂದಷ್ಟೇ ಮನುಜಾ ಸ್ವಗ್ರಾಮದ ಯುವಕ ಬಸವರಾಜ ಜೊತೆ ಪ್ರೇಮ ವಿವಾಹವಾಗಿದ್ದಳು(Love Marriage). ಇಬ್ಬರು ಅನ್ಯಜಾತಿಯವರಾಗಿದ್ದರೂ ಕೂಡ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಆದರೆ ಮದುವೆ ಆಗಿ ಐದಾರು ತಿಂಗಳಿಗೇ ಯುವತಿ ಶವವಾಗಿ ಪತ್ತೆಯಾಗಿದ್ದು ಮಾತ್ರ ದುರಂತವೇ ಸರಿ. 

Bengaluru Crime: ಹಣಕ್ಕಾಗಿ ಚಿನ್ನದ ವ್ಯಾಪಾರಿಯ ಕೊಂದು ಕೆರೆಗೆಸೆದ ದುರುಳರು..!

ಗಂಡನ ಮನೆಯವರೇ ಮನುಜಾಳನ್ನ ಕೆರೆಯಲ್ಲಿ ನೂಕಿ ಕೊಂದಿದ್ದಾರೆ. ಇದೊಂದು ಪ್ರೀ ಪ್ಲ್ಯಾನ್ ಮರ್ಡರ್(Pre-Planned Murder) ಅಂತ ಮೃತ ಯುವತಿ ಕುಟುಂಬಸ್ಥರ ಆರೋಪಿಸಿದ್ದಾರೆ. ಕೆರೆಯಲ್ಲಿ ಹೆಣ ತೇಲುತ್ತಿರುವುದನ್ನು ನೋಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಕಾಗಿನೆಲೆ ಪೊಲೀಸರು(Police) ಪರಿಶೀಲನೆ ನಡೆಸಿದ್ದಾರೆ. 

ಮೃತ ಯುವತಿ ಗಂಡ ಬಸವರಾಜ ಹಾಗೂ ಕುಟುಂಬಸ್ಥರ ಮೇಲೆ ಮೃತ ಮಜುನಾಳ ಕುಟುಂಬಸ್ಥರು ದೂರು ದಾಖಲಿಸಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕಾಗಿನೆಲೆ ಪೊಲೀಸರು ತನಿಖೆಯನ್ನ(Investigation) ಕೈಗೊಂಡಿದ್ದಾರೆ. 
ಆದರೆ ಶವದ ಅಂತ್ಯಸಂಸ್ಕಾರ(Funeral) ನಾವು ಮಾಡಲ್ಲ, ಅದು ಗಂಡನ ಮನೆಯವರ ಕೆಲಸ ಅಂತ ಪೊಲೀಸರ ಮುಂದೆ ಮೃತ ಯುವತಿ ಕುಟುಂಬಸ್ಥರು ವಾದಿಸಿದ್ದಾರೆ. ಇತ್ತ ಯುವತಿ ಶವ ನಾವು ಮುಟ್ಟಲ್ಲ ಅಂತ ಗಂಡ ಬಸವರಾಜ ಕುಟುಂಬದವರು ಹೇಳಿದ್ದಾರೆ. 

ನನ್ನ ಮಗಳ ಸಾವಿಗೆ ಕಾರಣರಾದ ಆ ಹುಡುಗನನ್ನು ಹೊರಗೆ ಬಿಡಿ. ಅವನನ್ನು ಕೊಂದೇ ಇಬ್ರನ್ನು ಮಣ್ಣು ಮಾಡ್ತೀವಿ ಎಂದು ಮೃತ ಯುವತಿ ಮನುಜಾ ಕುಟುಂಬಸ್ಥರು ರೊಚ್ಚಿಗದ್ದಿದ್ದಾರೆ. ಈ ಸಂಬಂಧ ಕಾಗಿನೆಲೆ ಪೋಲೀಸ್ ಠಾಣೆಗೆ ಮನುಜಾ ಕುಟುಂಬಸ್ಥರು ನುಗ್ಗಿ ಗಲಾಟೆ ಮಾಡಿದ್ದಾರೆ.

ದಿವಾನ್‌ ಕಾಟ್‌ ಮೇಲೆ ಮಲಗಲು ಜಗಳ: ಜಗಳ ಬಿಡಿಸಲು ಬಂದವನ ಕೊಲೆ

ಬೆಂಗಳೂರು: ದಿವಾನ್‌ ಕಾಟ್‌ ಮೇಲೆ ಮಲಗುವ ವಿಚಾರವಾಗಿ ನಡೆಯುತ್ತಿದ್ದ ಜಗಳ ಬಿಡಿಸಲು ಬಂದ ಸಂಬಂಧಿಕನ ಮೇಲೆ ಹಲ್ಲೆಗೈದು ಕೊಲೆ ಮಾಡಿ ಪರಾರಿಯಾಗಿದ್ದ ಇಬ್ಬರನ್ನು ಜೀವನ್‌ ಭೀಮಾನಗರ ಠಾಣೆ ಪೊಲೀಸರು ಘಟನೆ ಜ.29 ರಂದು ನಡೆದಿತ್ತು. 

ನ್ಯೂ ತಿಪ್ಪಸಂದ್ರದ ಹನುಮಾನ್‌ ನಗರದ ನಿವಾಸಿ ವಿನಯ್‌ (19) ಮತ್ತು ನ್ಯೂ ತಿಪ್ಪಸಂದ್ರದ ಅಂಬೇಡ್ಕರ್‌ ಸ್ಲಂ ನಿವಾಸಿ ಮೋಹನ್‌(19) ಬಂಧಿತರು(Arrest). ಕ್ಷುಲ್ಲಕ ಕಾರಣಕ್ಕೆ ನೆರೆ ಮನೆಯ ಸಂಬಂಧಿ ವೆಂಕಟೇಶ್‌(21) ಎಂಬಾತನನ್ನು ಕೊಲೆಗೈದು ಪರಾರಿಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ದೂರಿನ ಮೇರೆಗೆ ಘಟನೆ ನಡೆದ 24 ತಾಸಿನೊಳಗೆ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

Suvarna FIR : ಬೆಳಗಾವಿ ಗಂಡನ ಕತೆ ಮುಗಿಸಲು ಪತ್ನಿಯೇ ಪ್ರಿಯಕರನಿಗೆ ಕರೆ ಮಾಡಿ ಹೇಳಿದ್ದಳು!

ವಿನಯ್‌ ಮನೆಯಲ್ಲಿ ದಿವಾನ್‌ ಕಾಟ್‌ವೊಂದಿದ್ದು, ಶುಕ್ರವಾರ ರಾತ್ರಿ 11 ಗಂಟೆ ಸುಮಾರಿಗೆ ವಿನಯ್‌ ಮಲಗಲು ಮುಂದಾಗಿದ್ದಾನೆ. ಈ ವೇಳೆ ಆತನ ತಮ್ಮ ಮನು ತಾನು ಆ ದಿವಾನ್‌ ಕಾಟ್‌ ಮೇಲೆ ಮಲಗಬೇಕು ಎಂದಿದ್ದಾನೆ. ಈ ವೇಳೆ ಸಹೋದರರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಆರಂಭವಾಗಿದೆ. ಇಬ್ಬರು ಜೋರಾಗಿ ಚೀರಾಡುತ್ತಿದ್ದರಿಂದ ನೆರೆಮನೆಯಲ್ಲಿ ನೆಲೆಸಿರುವ ಸಹೋದರರ ದೊಡ್ಡಮ್ಮನ ಮಗ ವೆಂಕಟೇಶ್‌ ಮಧ್ಯಪ್ರವೇಶಿಸಿ, ಮನುನನ್ನು ವಹಿಸಿಕೊಂಡು ವಿನಯ್‌ಗೆ ಬೈದು ಬುದ್ಧಿ ಹೇಳಿದ್ದನು.

ಇದರಿಂದ ವೆಂಕಟೇಶ್‌ ವಿರುದ್ಧ ಆಕ್ರೋಶಗೊಂಡ ವಿನಯ್‌, ಆತನೊಂದಿಗೆ ಜಗಳಕ್ಕೆ ಮುಂದಾಗಿದ್ದಾನೆ. ಅಷ್ಟೇ ಅಲ್ಲದೆ, ತನ್ನ ಸ್ನೇಹಿತ ಮೋಹನ್‌ಗೆ ಕರೆ ಮಾಡಿ ಮನೆ ಬಳಿ ಕರೆಸಿಕೊಂಡಿದ್ದಾನೆ. ಈ ವೇಳೆ ಆರೋಪಿಗಳು(Accused) ಇಬ್ಬರು ಸೇರಿಕೊಂಡು ದೊಣ್ಣೆಯಿಂದ ವೆಂಕಟೇಶ್‌ ಮೇಲೆ ಹಲ್ಲೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಗಾಜಿನ ಚೂರಿನಿಂದ ವೆಂಕಟೇಶ್‌ ಎದೆಗೆ ಇರಿದು ಪರಾರಿಯಾಗಿದ್ದರು. ಇದರಿಂದ ತೀವ್ರವಾಗಿ ಗಾಯಗೊಂಡಿದ್ದ ವೆಂಕಟೇಶ್‌ನನ್ನು ಆಸ್ಪತ್ರೆಗೆ ಕರೆದೊಯ್ದಿದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದ. ಈ ಸಂಬಂಧ ದಾಖಲಾದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದೆ(Jail) ಎಂದು ಪೊಲೀಸರು ತಿಳಿಸಿದ್ದರು.