Bengaluru: ವರದಕ್ಷಿಣೆ ತರದ್ದಕ್ಕೆ ಮಧ್ಯರಾತ್ರಿ ಪತ್ನಿಯನ್ನು ಬಿಟ್ಟು ಹೋದ ಪತಿ
ತವರು ಮನೆಯಿಂದ ಚಿನ್ನಾಭರಣ, ದುಬಾರಿ ವಾಚು ಸೇರಿದಂತೆ ವರದಕ್ಷಿಣೆ ತರುವಂತೆ ಪತ್ನಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪಡಿ ಪತಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಬೆಂಗಳೂರು (ಮಾ.12): ತವರು ಮನೆಯಿಂದ ಚಿನ್ನಾಭರಣ, ದುಬಾರಿ ವಾಚು ಸೇರಿದಂತೆ ವರದಕ್ಷಿಣೆ ತರುವಂತೆ ಪತ್ನಿಯ ಮೇಲೆ ಹಲ್ಲೆ ಮಾಡಿ ಜೀವ ಬೆದರಿಕೆ ಹಾಕಿದ ಆರೋಪಡಿ ಪತಿ ಹಾಗೂ ಆತನ ಕುಟುಂಬದ ಸದಸ್ಯರ ಮೇಲೆ ಆರ್.ಟಿ.ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದಿನ್ನೂರಿನ 33 ವರ್ಷದ ಸಂತ್ರಸ್ತೆ ನೀಡಿದ ದೂರಿನ ಮೇರೆಗೆ ಹೆಬ್ಬಾಳದ ಮನೋರಾಯನಪಾಳ್ಯ ನಿವಾಸಿ, ಪತಿ ವಾಜೀರ್ ಅಹಮದ್ ಹಾಗೂ ಆತನ ಕುಟುಂಬದ ಶಾಹೀನಾ ಶರೀಫ್, ರುಮಾನಾ ಖಾನ್, ಮೋಹಿಸೇನಾ ವಿರುದ್ಧ ವರದಕ್ಷಿಣೆ ಕಿರಕುಳ, ಹಲ್ಲೆ, ಜೀವ ಬೆದರಿಕೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರೋಪಿ ವಾಜೀರ್ ಅಹಮದ್ 2020ರಲ್ಲಿ ಸಂತ್ರಸ್ತೆಯನ್ನು ಬಲವಂತವಾಗಿ ಮದುವೆಯಾಗಿದ್ದ. ಮದುವೆಯಾದ ಮಾರನೇ ದಿನದಿಂದಲೇ ವಾಜೀರ್ ಹಾಗೂ ಆತನ ಕುಟುಂಬದ ಸದಸ್ಯರು ಸಂತ್ರಸ್ತೆಗೆ ಕಿರುಕುಳ ನೀಡುತ್ತಿದ್ದರು. ತವರು ಮನೆಯಿಂದ ವರಕ್ಷಿಣೆಯಾಗಿ ಚಿನ್ನಾಭರಣ ತರುವಂತೆ ಒತ್ತಾಯಿಸುತ್ತಿದ್ದರು. ಹಲವು ಬಾರಿ ಹಲ್ಲೆ ಮಾಡಿದ್ದಾರೆ. ಈ ನಡುವೆ ಪತಿ ವಾಜೀರ್ ಮತ್ತು ಬರುವ ಮಾತ್ರೆ ನುಂಗಿಸಿ ಸಂತ್ರಸ್ತೆಯ ಜತೆಗೆ ಲೈಂಗಿಕ ಕ್ರಿಯೆ ನಡೆಸಿದ ಫಲವಾಗಿ ಹೆಣ್ಣು ಮಗು ಹುಟ್ಟಿದೆ. ಆದರೂ ವಾಜೀರ್ ಹಾಗೂ ಕುಟುಂಬದ ಸದಸ್ಯರು ಸಂತ್ರಸ್ತೆಗೆ ವರದಕ್ಷಿಣೆ ತರುವಂತೆ ದೈಹಿಕ ಹಿಂಸೆ ಮುಂದುವರೆಸಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಅಥಣಿ ಬಿಡಲ್ಲ: ರಮೇಶ್ ಜಾರಕಿಹೊಳಿಗೆ ಲಕ್ಷ್ಮಣ ಸವದಿ ಪುತ್ರ ತಿರುಗೇಟು
ಆರೋಪಿಗಳ ಹಿಂಸೆ ತಾಳಲಾರೆ ಸಂತ್ರಸ್ತೆ ಫೆ.5ರಂದು ಮಗುವನ್ನು ಕರೆದುಕೊಂಡು ತವರು ಮನೆಗೆ ಬಂದಿದ್ದಾರೆ. ಮಾ.9ರಂದು ಸಂತ್ರಸ್ತೆಯ ತವರು ಮನೆಗೆ ಬಂದಿರುವ ಆರೋಪಿ ವಾಜೀರ್, ಇನ್ನು ಮುಂದೆ ಚೆನ್ನಾಗಿ ನೋಡಿಕೊಳ್ಳುವುದಾಗಿ ಪತ್ನಿಯನ್ನು ಕರೆದುಕೊಂಡು ಮನೆಗೆ ಹೋಗಿದ್ದಾನೆ. ಬಳಿಕ ಮತ್ತೆ ವಾಜೀರ್ ಮತ್ತು ಕುಟುಂಬದ ಸದಸ್ಯರು ಸಂತ್ರಸ್ತೆ ಮೇಲೆ ಹಲ್ಲೆ ಮಾಡಿದ್ದಾರೆ. ವರಕ್ಷಿಣೆ ತರುವಂತೆ ಹಲ್ಲೆ ನಡೆಸಿ ಮಧ್ಯರಾತ್ರಿ ತವರು ಮನೆ ಬಳಿಗೆ ಕರೆತಂದು ಬಿಟ್ಟು ಹೋಗಿದ್ದಾರೆ. ಬಳಿಕ ಸಂತ್ರಸ್ತೆಯ ಪೋಷಕರು ಗಾಯಾಳು ಸಂತ್ರಸ್ತೆಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮದುವೆ ರದ್ದು ಮಾಡಿದ ವಧು: ವರದಕ್ಷಿಣೆ ಕಡಿಮೆ ಆಯಿತೆಂದು ವರ ಮದುವೆ ರದ್ದು ಮಾಡುವುದು ಹೊಸದೇನಲ್ಲ. ಆದರೆ ವಧು ದಕ್ಷಿಣೆ ಕಡಿಮೆ ಆಯಿತೆಂದು ವಧು ಮದುವೆ ರದ್ದು ಮಾಡಿದ ಅಚ್ಚರಿಯ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣದ ಬುಡಕಟ್ಟು ಸಮುದಾಯದಲ್ಲಿ ಈಗಲೂ ವಧು ದಕ್ಷಿಣೆ ನೀಡುವ ಸಂಪ್ರದಾಯಿವಿದೆ. ಅದರಂತೆ ವರ ಮತ್ತು ವಧುವಿನ ಮನೆಯವರ ನಡುವೆ ಮಾತುಕತೆ ನಡೆದು 2 ಲಕ್ಷ ರು. ವಧುದಕ್ಷಿಣೆ ನೀಡಲು ವರನ ಕಡೆಯವರು ಒಪ್ಪಿದ್ದರು. ಆದರೆ ಮದುವೆಯ ದಿನ ಇದ್ದಕ್ಕಿದ್ದಂತೆ ವಧು, ತನಗೆ 2 ಲಕ್ಷ ರು. ಸಾಲದ. ಇನ್ನೂ ಹೆಚ್ಚು ಹಣ ಬೇಕು ಎಂದು ದಿಢೀರ್ ಬೇಡಿಕೆ ಇಟ್ಟಿದ್ದಾಳೆ. ಜೊತೆಗೆ ಹಣ ಕೊಡದ ಹೊರತೂ ಮಂಟಪ ಏರುವುದಿಲ್ಲ ಎಂದು ಕ್ಯಾತೆ ತೆಗೆದಿದ್ದಾಳೆ.
ನಾಳಿನ 5, 8ನೇ ಕ್ಲಾಸ್ ಪರೀಕ್ಷೆ ಮುಂದೂಡಿಕೆ: ಪರೀಕ್ಷೆ ತಡೆಹಿಡಿಯಲು ಹೈಕೋರ್ಟ್ ಆದೇಶ
ಆದರೆ ಹೆಚ್ಚುವರಿ ಹಣ ನೀಡಲು ತಮ್ಮ ಬಳಿ ಸಾಧ್ಯವಿಲ್ಲ ಎಂದು ವರನ ಕಡೆಯವರು ಹೇಳಿದ ಕಾರಣ, ಮದುವೆ ಮುರಿದುಬಿದ್ದಿದೆ. ವಧು ಮದುವೆಗೆ ಒಪ್ಪಿಕೊಳ್ಳದ ಕಾರಣ ವರನ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ 2 ಕುಟುಂಬಗಳು ಮಾತುಕತೆಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಿಕೊಂಡಿದ್ದು, ವಧುವಿಗೆ ಮದುವೆ ಇಷ್ಟವಿಲ್ಲದ ಕಾರಣ ಇಷ್ಟೆಲ್ಲಾ ನಡೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಿಸದೇ ಹಣವನ್ನು ವರನ ಮನೆಯವರಿಗೆ ಹಿಂದಿರುಗಿಸಲಾಗಿದೆ.