ಕೆಲಸ ಬಿಡುತ್ತೇನೆ ಎಂದ ಪತ್ನಿಯನ್ನು ಚಾಕುವಿನಿಂದ ಕೊಚ್ಚಿ ಕೊಂದ ಪತಿ
Crime News: ಕೆಲಸ ಬಿಡುತ್ತೆನೆ ಎಂದು ಹೇಳಿದ್ದಕ್ಕಾಗಿ ಕೋಪಗೊಂಡ ಪತಿ ಆಕೆಯ ಕುತ್ತಿಗೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ
ನೋಯ್ಡಾ (ಆ. 10): ಕೆಲಸ ಬಿಡುತ್ತೆನೆ ಎಂದು ಹೇಳಿದ್ದಕ್ಕಾಗಿ ಕೋಪಗೊಂಡ ಪತಿ ಆಕೆಯ ಕುತ್ತಿಗೆ ಹಾಗೂ ಬೆನ್ನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾನೆ. ಮಹಿಳೆಯ ಪುತ್ರರು ಆಕೆಯನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದು, ವೈದ್ಯರು ಆಕೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮಾಹಿತಿ ಪಡೆದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದಾರೆ. ಪೊಲೀಸರು ಮೃತದೇಹವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಬಂಧನದ ನಂತರ ಪೊಲೀಸರು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾನ್ಪುರದ ಗೋವಿಂದ್ ನಗರದ ಅಜಯ್ ಬದೌರಿಯಾ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು ಎಂದು ಕೊತ್ವಾಲಿ ಉಸ್ತುವಾರಿ ರಾಜೀವ್ ಬಲಿಯಾನ್ ತಿಳಿಸಿದ್ದಾರೆ. ಈತ ಕುಡಿತದ ಚಟ ಹೊಂದಿದ್ದ. ಕೆಲ ದಿನಗಳ ಹಿಂದೆ ಕೆಲಸ ಬಿಟ್ಟಿದ್ದ. ಪತ್ನಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮನೆಯ ಖರ್ಚನ್ನು ನಿಭಾಯಿಸುತ್ತಿದ್ದಳು.
ಅನಿತಾ ಮತ್ತು ಅಜಯ್ 18 ವರ್ಷಗಳ ಹಿಂದೆ ವಿವಾಹವಾಗಿದ್ದು, ಇಬ್ಬರೂ ಸಲಾರ್‌ಪುರದಲ್ಲಿ ವಾಸಿಸುತ್ತಿದ್ದರು. ಮಂಗಳವಾರ ರಾತ್ರಿ ಅನಿತಾ ಮಗನನ್ನು ಕಾಲೇಜಿಗೆ ಸೇರಿಸುವಂತೆ ಪತಿಗೆ ಕೇಳಿದ್ದಳು. ಈ ಬೆನ್ನಲ್ಲೇ ಕುಡುಕ ಅಜಯ್ ಪತ್ನಿಯನ್ನು ನಿಂದಿಸಲು ಆರಂಭಿಸಿದ್ದ. ಈ ವೇಳೆ ಪತ್ನಿ ಕೂಡ ಕೆಲಸ ಬಿಡುವ ವಿಚಾರ ತಿಳಿಸಿದ್ದಾಳೆ.
ಅತ್ತೆ ಜೊತೆ ಅಳಿಯನ ಲವ್ವಿಡವ್ವಿ: ಸಂಸಾರ ಬಿಟ್ಟು ಬರಲ್ಲ ಎಂದಿದ್ದಕ್ಕೆ ಕೊಂದೇಬಿಟ್ಟ
ಇದರಿಂದ ಕುಪಿತಗೊಂಡ ಕುಡುಕ ಅಜಯ್ ಪತ್ನಿಯ ಕುತ್ತಿಗೆ, ಬೆನ್ನು ಹಾಗೂ ಕೈಗೆ ಚಾಕುವಿನಿಂದ ಇರಿದಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಅನಿತಾ ಪ್ರಜ್ಞೆ ತಪ್ಪಿದ್ದಾರೆ. ಇದರ ನಂತರ, ಮಹಿಳೆಯ ಇಬ್ಬರು ಪುತ್ರರು ತಾಯಿಯನ್ನು ರಿಯಾಲಿಟಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಘೋಷಿಸಿದರು.
ಆರೋಪಿ ಪತಿ ವಿರುದ್ಧ ವರದಿ ದಾಖಲಿಸಿಕೊಂಡು ಬಂಧಿಸಲಾಗಿದೆ ಎಂದು ಹೆಚ್ಚುವರಿ ಡಿಸಿಪಿ ಅಶುತೋಷ್ ದ್ವಿವೇದಿ ತಿಳಿಸಿದ್ದಾರೆ. ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.
ಕೌಟುಂಬಿಕ ಕಲಹ: ಇಬ್ಬರು ಮಕ್ಕಳನ್ನು ಕೊಂದ ತಾಯಿ: ಕೌಟುಂಬಿಕ ಕಲಹದಿಂದ ಬೇಸತ್ತ ತಾಯಿಯೊಬ್ಬಳು ಇಬ್ಬರು ಮಕ್ಕಳನ್ನು ನೀರಿನ ಗುಂಡಿಯಲ್ಲಿ ಎಸೆದು ಕೊಲೆ ಮಾಡಿದ ಘಟನೆ ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದಲ್ಲಿ ನಡೆದಿದೆ.ಅನಿತಾ ಗಂಡ ಬಸಪ್ಪ ಪೂಜಾರಿ (28) ಎಂಬುವರೆ ಇಬ್ಬರು ಮಕ್ಕಳಾದ ಮೋನಿಕಾ (6) ಮತ್ತು ಸಿದ್ದಲಿಂಗ (4) ಅವರನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿದವರು.
ಶುಕ್ರವಾರ ಮಧ್ಯರಾತ್ರಿ ಈ ಘಟನೆ ನಡೆದಿದೆ. ಮಕ್ಕಳನ್ನು ಸಾಯಿಸಿ ತಾಯಿ ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಗ್ರಾಮಸ್ಥರು ಆಕೆಯನ್ನು ತಡೆದು ಪೊಲೀಸರಿಗೆ ಒಪ್ಪಿಸಿದ್ದಾರೆ.ಸೇಡಂ ತಾಲ್ಲೂಕಿನ ಗೋಪಾನಪಲ್ಲಿ ಗ್ರಾಮದ ಬಸಪ್ಪ ಪೂಜಾರಿ ಮತ್ತು ಗುರುಮಠಕಲ್ ತಾಲ್ಲೂಕಿನ ಗಾಜರಕೋಟ ಸಮೀಪದ ಶಿವಪುರ ಗ್ರಾಮದ ಅನಿತಾ ಒಂಬತ್ತು ವರ್ಷಗಳ ಹಿಂದೆ ಮದುವೆಯಾಗಿದ್ದು, ಪತಿ-ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ವಿಮೆ ಹಣ ಪಡೆಯಲು ಪತ್ನಿಯ ಗುಂಡಿಕ್ಕಿ ಕೊಂದ, ಸಾಲ ತೀರಿಸುವ ಮೊದಲೇ ಪತಿ ಅಂದರ್!
ಕಳದೆ ಮೂರು ದಿನಗಳ ಹಿಂದೆಯೂ ಜಗಳ ನಡೆದು ಮಾತು ಬಿಟ್ಟಿದ್ದರು. ಇದರಿಂದ ಬೇಸತ್ತು ತಾಯಿ ತನ್ನ ಇಬ್ಬರು ಮಕ್ಕಳನ್ನು ನೀರಿನ ಗುಂಡಿಗೆ ಎಸೆದು ಕೊಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಳು ಎಂದು ತಿಳಿದುಬಂದಿದೆ.ಸುದ್ದಿ ತಿಳಿದು ಮುಧೋಳ ಪೊಲೀಸ್ ಠಾಣೆಯ ಪಿ.ಐ.ಸಂದೀಪ್ ಮುರುಗನ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಅನಿತಾ ಅವರನ್ನು ಬಂಧಿಸಿದ್ದಾರೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.