ಅತ್ತೆ ಜೊತೆ ಅಳಿಯನ ಲವ್ವಿಡವ್ವಿ: ಸಂಸಾರ ಬಿಟ್ಟು ಬರಲ್ಲ ಎಂದಿದ್ದಕ್ಕೆ ಕೊಂದೇಬಿಟ್ಟ
Ramangara Crime News: ಮಾವನ ಹೆಂಡತಿ ಜೊತೆಗೆ ಲವ್ವಿಡವ್ವಿ ಶುರುಮಾಡಿದ್ದ ಅಳಿಯ ಆಕೆಯ ಕುತ್ತಿಗೆ ಸೀಳಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದ.
ವರದಿ- ಜಗದೀಶ್ ಏಷ್ಯಾನೆಟ್ ಸುವರ್ಣನ್ಯೂಸ್, ರಾಮನಗರ
ರಾಮನಗರ (ಆ. 10): ಪ್ರೀತ್ಸೆ ಅಂತ ಹಿಂದೆಬಿದ್ದಿದ ಅಳಿಯನ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಮಹಿಳೆಯೊಬ್ಬರ ಕೊಲೆ ಪ್ರಕರಣವನ್ನು ರಾಮನಗರ ಜಿಲ್ಲೆ ಚನ್ನಪಟ್ಟಣ ಗ್ರಾಮಾಂತರ ಪೊಲೀಸರು ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಡೀ ಚನ್ನಪಟ್ಟಣ ಟೌನ್ ಜನರನ್ನು ಬೆಚ್ಚಿಬೀಳಿಸಿದ್ದ ಪ್ರಕರಣದಲ್ಲಿ ಅಕ್ರಮ ಸಂಬಂಧಕ್ಕೆ ಮಹಿಳೆ ಬಲಿಯಾಗಿರುವುದು ಬೆಳಕಿಗೆ ಬಂದಿದೆ. ಮಾವನ ಹೆಂಡತಿ ಜೊತೆಗೆ ಲವ್ವಿಡವ್ವಿ ಶುರುಮಾಡಿದ್ದ ಅಳಿಯ ಆಕೆಯ ಕುತ್ತಿಗೆ ಸೀಳಲು ಮಾಡಿದ್ದ ಮಾಸ್ಟರ್ ಪ್ಲ್ಯಾನ್ ಜೊತೆಗೆ ಆತ ಕೊಲೆ ಮಾಡಲು ಪಡೆದಿದ್ದ ತರಬೇತಿ ಕತೆ ಕೂಡ ರಣರೋಚಕವಾಗಿದೆ.
ಅಕ್ರಮ ಸಂಬಂಧಗಳಿಂದ ಎಷ್ಟೋ ಕುಟುಂಬಗಳು ಬೀದಿಗೆ ಬಂದಿವೆ. ಅನೇಕರು ಕೊಲೆಯಾಗುವ ಪ್ರಕರಣ ಆಗಾಗ ಬೆಳಕಿಗೆ ಬರುತ್ತಲೇ ಇವೆ. ಇಂತಹ ಪ್ರಕರಣ ಪೈಕಿ ಕಳೆದ ಜುಲೈ 15ನೇ ತಾರೀಖು ಚನ್ನಪಟ್ಟಣ ಟೌನ್ ಮಹದೇಶ್ವರ ಬಡವಾಣೆಯ ಕೆ ಹೆಚ್ ಬಿ ಕಾಲೋನಿಯಲ್ಲಿ 34 ವರ್ಷದ ಗೀತಾ ಎಂಬ ಮಹಿಳೆಯೊಬ್ಬರು ರಕ್ತಸಿಕ್ತವಾಗಿ ಮನೆಯಲ್ಲಿ ಕೊಲೆಯಾಗಿದ್ದ ಪ್ರಕರಣ ಬೆಳಕಿಗೆ ಬಂದಿತ್ತು.
ಸದ್ಯ ಕೊಲೆ ಆರೋಪಿಯನ್ನು ಬಂಧಿಸಿರುವ ಚನ್ನಪಟ್ಟಣ ಗ್ರಾಮಾಂತರ ಠಾಣೆ ಪೊಲೀಸರು ಕೊಲೆ ಹಿಂದಿನ ರಹಸ್ಯ ಭೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯನ್ನು 24 ವರ್ಷದ ಅಜಯ್ ಎಂದು ಗುರುತಿಸಲಾಗಿದೆ. ಮೃತ ಮಹಿಳೆ ತನ್ನ ಗಂಡನ ಅಕ್ಕನ ಮಗ ಅಜಯ್ ನೊಂದಿಗೆ ಅಕ್ರಮವಾಗಿ ಇಟ್ಟುಕೊಂಡಿದ್ದ ಸಂಬಂಧವೇ ಕೊಲೆಗೆ ನಿಜವಾದ ಕಾರಣ ಅನ್ನೋದು ತಿಳಿದು ಬಂದಿದೆ ಎಂದು ರಾಮನಗರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಸಂತೋಷ್ ಬಾಬು ಸ್ಪಷ್ಟನೆ ನೀಡಿದ್ದಾರೆ.
ಸಹ ನಟಿ ಜೊತೆ ಪತಿಯ ಲವ್ವಿ-ಡವ್ವಿ; ರೆಡ್‌ಹ್ಯಾಂಡ್ ಆಗಿ ಹಿಡಿದು ನಡುರಸ್ತೆಲೇ ಥಳಿಸಿದ ಪತ್ನಿ
ಮೂರ್ನಾಲ್ಕು ವರ್ಷಗಳ ಪ್ರಣಯ ಪ್ರೀತಿ: ಗಂಡ ಕೆಲಸ ಹೋದಾಗಲೆಲ್ಲಾ ಮನೆಗೆ ಬರುತ್ತಿದ್ದ ಅಳಿಯನ ಜೊತೆಗೆ ಅತ್ತೆ ಸರಸಸಲ್ಲಾಪ ಶುರು ಮಾಡುತ್ತಿದ್ದಳು. ಸುಮಾರು ಮೂರ್ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಪ್ರಣಯಪ್ರೀತಿಗೆ ಕೊಲೆಗಾರ ಅಜಯ್ ಅತ್ತೆ ಬಿಟ್ಟಿರಲಾಗದಂತಹ ಸ್ಥಿತಿಗೆ ತಲುಪಿಬಿಟ್ಟಿದ್ದ. ದಿನ ಕಳೆದಂತೆ ಅತ್ತೆ ಗೀತಾ ಅಳಿಯನ ಬಿಟ್ಟು ಬೇರೊಬ್ಬನ ಜೊತೆ ಓಡಾಟ ಶುರು ಮಾಡಿದ್ದು ಅಜಯ್‌ಗೆ ತಿಳಿದಿತ್ತು.
ಆಗ ಅವನ ಜೊತೆಗೆ ಓಡಾಟ ಮಾಡಬೇಡ ನಿನ್ನ ಗಂಡನ ಬಿಟ್ಟು ನನ್ನ ಜೊತೆಗೆ ಬಂದುಬಿಡು ಓಡಿಹೋಗೋಣ ಅಂತ ಹೇಳಿಕೊಂಡಿದ್ದ ಅಜಯ್ ಮಾತಿಗೆ ಅತ್ತೆ ವಿರೋಧ ಮಾಡಿದ್ಲು. ಪದೇ ಪದೇ ಇದರ ವಿಚಾರವಾಗಿಯೇ ಅತ್ತೆ ಜೊತೆಗೆ ಜಗಳ ಮಾಡಿದ್ದ ಆರೋಪಿ ಕೊನೆಗೆ ಒಂದು ದಿನ ಕತ್ತು ಸೀಳೋ ನಿರ್ಧಾರಕ್ಕೆ ಬಂದುಬಿಟ್ಟಿದ್ದ.
ಕತ್ತು ಕೊಯ್ದು ಚಿನ್ನದ ಸರ ಹಾಗೂ ತಾಳಿ ಜೊತೆಗೆ ಎಸ್ಕೇಪ್: ಯಾವಾಗ ತಾನೂ ಸಂಸಾರ ಬಿಟ್ಟು ಬರಲ್ಲ ಅಂತ ವಿರೋಧ ಮಾಡಿದ್ಲೋ ಅವತ್ತಿನಿಂದಲೇ ಅಜಯ್ ಅತ್ತೆ ಸಾಯಿಸುವ ಹಂತಕ್ಕೆ ತಲುಪಿದ್ದ. ಮೂವತ್ತನಾಲ್ಕು ವರ್ಷದ ಅತ್ತೆ ಜೊತೆಗೆ ಇಪ್ಪತ್ತಾಲ್ಕು ವರ್ಷದ ಯುವಕ ಮನಸೋತು ಬಿಟ್ಟಿರಲಾಗದಂತಹ ಹುಚ್ಚು ಪ್ರೀತಿಗೆ ಬಿದ್ದಿದ್ದ. ಆದರೆ ದಿನ ಕಳೆದಂತೆ ಅತ್ತೆ ಕಡೆಯಿಂದ ಸರಿಯಾದ ಸ್ಪಂದನೆ ಸಿಗದ ಕಾರಣ ಮನೆಯಲ್ಲಿ ಮಾವ, ಮಕ್ಕಳು ಇಲ್ಲದನ್ನ ನೋಡಿಕೊಂಡು ಚಾಕುವಿನಲ್ಲಿ ಕತ್ತು ಕೊಯ್ದು ಚಿನ್ನದ ಸರ ಹಾಗೂ ತಾಳಿ ಜೊತೆಗೆ ಎಸ್ಕೇಪ್ ಆಗಿದ್ದ.
ಮೊದಲೇ ಅಕ್ರಮ ಸಂಬಂಧದ ವಾಸನೆ ಹಿಡಿದಿದ್ದ ಪೊಲೀಸರು ಒಂದಷ್ಟು ದಿನ ಮಾಹಿತಿ ಕಲೆಹಾಕುವ ಜೊತೆಗೆ ಆರೋಪಿ ಚಲನವಲನಗಳ ಮೇಲೆ ಹದ್ದಿನ ಕಣ್ಣು ಇಟ್ಟಿದ್ದರು. ಬಳಿಕ ಖಚಿತವಾದ ಮಾಹಿತಿ ಮೇರೆಗೆ ಆರೋಪಿ ಅಜಯ್ ಎಂಬಾತನನ್ನ ಮಂಡ್ಯ ಜಿಲ್ಲೆ, ಮಳವಳ್ಳಿ ತಾ. ದಳವಾಯಿ ಕೋಡಿಹಳ್ಳಿ ಗ್ರಾಮದಲ್ಲಿ ಅರೆಸ್ಟ್ ಮಾಡಲಾಗಿದೆ.
ಸಿನಿಮಾ ಸ್ಟೈಲಲ್ಲಿ ಕೊಲೆ ಮಾಡಿ ಎಸ್ಕೇಪಾಗುವ ಪ್ಲ್ಯಾನ್: ಕೊಲೆಗೂ ಮೊದಲೇ ಕ್ರೈಂ ಎಪಿಸೋಡ್ ಗಳನ್ನ ನೋಡಿ ಪ್ರೇರಿತನಾಗಿ ಸಿನಿಮಾ ಸ್ಟೈಲ್ ನಲ್ಲಿ ಕೊಲೆ ಮಾಡಿ ಎಸ್ಕೇಪ್ ಆಗುವ ಪ್ಲ್ಯಾನ್ ಸಹ ಮಾಡಿದ್ದ. ಅದಕ್ಕಾಗಿಯೇ ಆನ್ಲೈನ್ ಒಂದರಲ್ಲಿ ಚಾಕು ಬುಕ್ ಮಾಡಿದ್ದ. ಬಳಿಕ ಎಂದಿನಂತೆ ಗೀತಾ ಮನೆಗೆ ಹೋಗುತ್ತಿದ್ದ ಅಜಯ್ ಅವತ್ತು ಕೊಲೆ ಮಾಡುವ ಸಂಚು ಹಾಕಿಕೊಂಡೆ ಹೋಗಿ ಮನೆಯ ರೂಮ್ ಒಂದರಲ್ಲಿ ಚಾಕುವಿನಿಂದ ಕತ್ತುಕೊಯ್ದು ಆಕೆಯ ಮೊಬೈಲ್ ಪಡೆದು ಎಸ್ಕೇಪ್ ಆಗಿದ್ದಾನೆ. ಬೆರಳಚ್ಚು ಸಿಗಬಾರದೆಂದು ಹ್ಯಾಂಡ್ ಗ್ಲೌವ್ಸ್ ಹಾಕೊಂಡು ಕತ್ತು ಸೀಳಿದ್ದಾನೆ.
ಶಿವಾಜಿನಗರ ಕೊಲೆ ಕೇಸ್‌ಗೆ ಕಾರಣ ಸಿಕ್ತು, ತನಿಖೆ ವೇಳೆ ಮಹಿಳೆ ಜತೆಗಿನ ಲವ್ವಿ-ಡವ್ವಿ ಬಯಲು
ಕೊಲೆ ಮಾಡಿ ಬೈಕ್ ತಗೊಂಡು ಹೋದ ಆರೋಪಿ ಪೊಲೀಸರು ತನ್ನ ಬೆನ್ನು ಬಿದ್ದೇಬೀಳುತ್ತಾರೆ ಎಂದು ಅರಿತಿದ್ದಾನೆ. ರಾಮನಗರ ಹಾಗೂ ಚನ್ನಪಟ್ಟಣ ಭಾಗಗಳಲ್ಲಿ ಹೆಲ್ಮೆಟ್ ಧರಿಸಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಲು ಗಾಡಿಯ ನಂಬರ್ ಪ್ಲೇಟ್ ಬದಲಾಯಿಸಿಕೊಂಡು ಓಡಾಡುತ್ತಿರುತ್ತಾನೆ. ಕೊಲೆ ಬಳಿಕ ಕೆರೆ ಒಂದರಲ್ಲಿ ಮೃತ ಗೀತಾ ಮೊಬೈಲ್ ಸಹ ಎಸೆದಿದ್ದು, ಅಲ್ಲಿಂದ ಇಲ್ಲಿಗೆ ಬೈಕ್ ಓಡಾಟ ನಡೆಸುತ್ತಲೇ ಇದ್ದ.
ಖರ್ಚಿಗಾಗಿ ಹಣವಿಲ್ಲದಾಗ ಕದ್ದುಕೊಂಡು ಬಂದಿದ್ದ ಗೀತಾಳ ಚಿನ್ನದ ಸರವನ್ನ ಅಡವಿಡಲು ಹೋದಾಗ ಪೊಲಿಸರಿಗೆ ಮಾಹಿತಿ ಸಿಕ್ಕಿದ್ದು ಆರೋಪಿ ಅಜಯ್ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಕಟ್ಟಿಕೊಂಡ ಗಂಡನಿಗೇ ಮೋಸ ಮಾಡಿ ಗಂಡನ ಅಕ್ಕನ ಮಗನ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಗೀತಾ ಮನೆಯಲ್ಲಿ ಹೆಣವಾಗಿದ್ದಳು.
ಇನ್ನು ಇಬ್ಬರು ಮಕ್ಕಳು ಸಹ ಇದ್ದು ತಾಯಿಯಿಲ್ಲದೆ ಚಿಕ್ಕ ವಯಸ್ಸಿಗೆ ಅನಾಥವಾದ ಮಕ್ಕಳ ಸ್ಥಿತಿ ನೋಡಿದ್ರೆ ಎಂತವರಿಗೂ ಕಣ್ಣೀರು ತರಿಸುತ್ತೆ. ಇನ್ನು ಇತ್ತ ಹದಿಹರೆಯದ ವಯಸ್ಸಿನಲ್ಲೇ ಅತ್ತೆ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಬಾಳಿಬದುಕಿ ಅಪ್ಪ-ಅಮ್ಮನ ಸಾಕಬೇಕಿದ್ದ ಅಜಯ್ ಜೈಲು ಸೇರಿದ್ದು ಅಪ್ಪ ಅಮ್ಮ ಕಣ್ಣೀರುಡುವಂತೆ ಮಾಡಿದ್ದಾನೆ.