ತುಮಕೂರು: ಶೀಲ ಶಂಕಿಸಿ ಪತ್ನಿಯನ್ನ ಕೊಂದ ಪತಿ
ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆ
ತುಮಕೂರು(ಅ.12): ಪತಿಯೊಬ್ಬ ಪತ್ನಿಯ ಶೀಲ ಶಂಕಿಸಿ ಕೊಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು(ಬುಧವಾರ) ನಡೆದಿದೆ.
ಕೊಲೆಯಾದ ಮಹಿಳೆಯನ್ನು ಬೇಡತ್ತೂರು ಗ್ರಾಮದ ಪುಷ್ಪಲತಾ ಎಂದು ಗುರುತಿಸಲಾಗಿದೆ. ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ರಾಮಾಂಜನೇಯ ತಲೆ ಮರೆಸಿಕೊಂಡಿದ್ದಾನೆ.
ಹಾಸನ: ಶವ ಎಸೆಯಲು ಬಂದವರು ರೈಲ್ವೆ ಹಳಿ ಮೇಲೆ ವಾಹನ ಪಲ್ಟಿಯಾಗಿ ಸಿಕ್ಕಿಬಿದ್ರು..!
ರಾಮಾಂಜನೇಯ ಮತ್ತು ಪುಷ್ಪಲತಾ ನಡುವೆ ವಿವಾಹವಾಗಿ 13 ವರ್ಷ ವಯಸ್ಸಾಗಿತ್ತು. ಪತ್ನಿಯ ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಅಂತ ತಿಳಿದು ಬಂದಿದೆ.
ಪುಷ್ಪಲತಾ ಮತ್ತು ರಾಮಾಂಜನೇಯ ನಡುವೆ ಆಗಾಗ ಕಲಹ ನಡೆಯುತ್ತಿತ್ತು ಎಂದು ಹೇಳಲಾಗುತ್ತಿದೆ.