ಸೂಲಿಬೆಲೆ(ಆ.28): ಪತ್ನಿಯನ್ನು ಪತಿಯೊಬ್ಬ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೊಸಕೋಟೆ ತಾಲೂಕಿನ ರಾಳ್ಳಕುಂಟೆ ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ.

ಶಿಡ್ಲಘಟ್ಟ ತಾಲೂಕು ಬಳುವನಹಳ್ಳಿ ಗ್ರಾಮದ ಶ್ಯಾಮಲ(27) ಪತಿಯಿಂದ ಕೊಲೆಗೀಡಾದ ಮಹಿಳೆ. ಶ್ಯಾಮಲಳನ್ನು 12 ವರ್ಷದ ಹಿಂದೆ ಹೊಸಕೋಟೆ ತಾಲೂಕು ಸೂಲಿಬೆಲೆ ಹೋಬಳಿ ರಾಳ್ಳಕುಂಟೆ ಗ್ರಾಮದ ಮುನಿರಾಜ ಎಂಬಾತನಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. 

ರಾಜಸ್ಥಾನದ ಟೈಲ್ಸ್‌ ಉದ್ಯಮಿ ಗುಂಡಿಕ್ಕಿ ಕೊಂದರು

ಇತ್ತೀಚೆಗೆ ಮುನಿರಾಜು ಅನೈತಿಕ ಸಂಬಂಧ ಹೊಂದಿದ್ದ ಬಗ್ಗೆ ದಂಪತಿ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ಪ್ರತಿ ದಿನವೂ ಕುಡಿದು ಬಂದು ಪತ್ನಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಗುರಿಮಾಡುತ್ತಿದ್ದ. ಅಗಾಗ ಹಣಕ್ಕೆ ಪೀಡಿಸುತ್ತಿದ್ದು ಬುಧವಾರ ಕೂಡ ಹಣದ ವಿಚಾರಕ್ಕೆ ಗಲಾಟೆ ಮಾಡಿ ಮಾರಕಾಸ್ತ್ರದಿಂದ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿ ಮೃತ ಶ್ಯಾಮಲ ಅವರ ಸಹೋದರ ಸಂದೀಪ್‌ ಪೊಲೀಸರಿಗೆ ದೂರು ನೀಡಿದ್ದಾರೆ.